ಹೊಸ ಪ್ಲಾಟ್ ಅನ್ನು ಬಾಡಿಗೆಗೆ ಪಡೆದ ವಿರಾಟ್ ಕೊಹ್ಲಿ ಮತ್ತು ಅನುಷ್ಕಾ.. ಇದರ ಬೆಲೆ ಎಷ್ಟೊಂದು ತಿಳಿದರೆ ನೀವು ಕೂಡ ಅಚ್ಚರಿಪಡ್ತೀರಾ..

ಸೆಲೆಬ್ರಿಟಿಗಳ ಕಾರು, ಮನೆ, ಬಂಗಲೆ, ವಾಚ್, ಮೊಬೈಲ್ ಎಲ್ಲದರ ಬಗ್ಗೆಯೂ ಕುತೂಹಲ ತೋರಿಸುವ ನೆಟ್ಟಿಗರಿಗೀಗ ವಿರಾಟ್ ಕೊಹ್ಲಿ ಹಾಗೂ ಅನುಷ್ಕಾ ಜೋಡಿಯು ಬಾಡಿಗೆಗಾಗಿ ಪಡೆದ ಫ್ಲ್ಯಾಟ್ನ ಬೆಲೆ ಎಷ್ಟೆಂದು ತಿಳಿಯಬೇಕಾಗಿದೆ. ಭಾರತ ಕ್ರಿಕೆಟ್ ತಂಡದ ಆಟಗಾರನಾದ ವಿರಾಟ್ ಕೊಹ್ಲಿ ಮತ್ತು ಚಿತ್ರರಂಗದ ಮೂಲಕ ಪರಿಚಿತರಾದ ಅನುಷ್ಕಾ ಶರ್ಮ ಇಬ್ಬರು ತಮ್ಮದೇ ಆದ ಅಭಿಮಾನಿ ಬಳಗವನ್ನು ಹೊಂದಿದ್ದಾರೆ.

ಇವರಿಬ್ಬರೂ ಪ್ರೀತಿಸಿ ವಿವಾಹವಾದ ನಂತರ ಇಬ್ಬರ ಅಭಿಮಾನಿಗಳು ಒಂದಾಗಿದ್ದು, ಇವರ ಬಳಗವು ಬೆಳೆಯುತ್ತಲೇ ಇದೆ. ಇಬ್ಬರು ಜೋಡಿಯಾಗಿರುವ ಫೋಟೋಗಳನ್ನು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಆಗಾಗ ಹಂಚಿಕೊಳ್ಳುತ್ತಿರುವುದರಿಂದ ನೆಟ್ಟಿಗರಿಗೆ ಬಹಳ ಅಚ್ಚುಮೆಚ್ಚಿನವರು. ವಿರಾಟ್ ಕೊಹ್ಲಿ ಅವರು ಹೊಸದೊಂದು ಹೇರ್ ಸ್ಟೈಲ್ ಮಾಡಿಕೊಂಡಾಗ, ವಾಚ್ ಬದಲಿಸಿದಾಗ, ಸ್ಟೈಲಿಶ್ ಶೂ ಧರಿಸಿದಾಗ ಅಭಿಮಾನಿಗಳು ಅದರ ಬೆಲೆಯ ಬಗ್ಗೆ ಚರ್ಚೆ ನಡೆಸುತ್ತಲೇ ಇರುತ್ತಾರೆ.

ಇದೀಗ ವಿರಾಟ ಹಾಗೂ ಅನುಷ್ಕಾ ದಂಪತಿಗಳು ಹಂಚಿಕೊಂಡ ಲೇಟೆಸ್ಟ್ ಫೋಟೋದಲ್ಲಿ ಕಾಣುವ ಫ್ಲ್ಯಾಟ್ನ ಕುರಿತಾಗಿ ತಿಳಿದುಕೊಳ್ಳಲು ನೆಟ್ಟಿಗರು ಕುತೂಹಲ ತೋರಿದ್ದಾರೆ. ಮುಂಬೈನ ದುಬಾರಿ ಬೆಲೆಯ ಫ್ಲ್ಯಾಟ್ ಒಂದನ್ನು ಬಾಡಿಗೆಗಾಗಿ ವಿರಾಟ್ ಹಾಗೂ ಅನುಷ್ಕಾ ತೆಗೆದುಕೊಂಡಿದ್ದಾರೆ ಎಂದು ತಿಳಿಯುತ್ತಲೇ ಅವರು ಬಾಡಿಗೆ ಮನೆಗೆ ಹೋಗಲು ಕಾರಣವೇನು ಎಂಬ ಪ್ರಶ್ನೆ ಎದ್ದಿದೆ. ಮುಂಬೈನ ಜಿಹುದಲ್ಲಿ ಬಾಡಿಗೆಗೆ ಫ್ಲ್ಯಾಟ್ ಅನ್ನು ತೆಗೆದುಕೊಂಡಿದ್ದಾರೆ.

Virat kohli and anushka sharma new flat/house in mumbai

ಅನುಷ್ಕಾ ಹಾಗೂ ವಿರಾಟ್ ಪಡೆದಿರುವ ಸುಂದರ ಮನೆಯು ಕಟ್ಟಡದ ನಾಲ್ಕನೇ ಮಹಡಿಯಲ್ಲಿದೆ. 650 ಚದರ ಅಡಿ ವಿಸ್ತೀರ್ಣವಿದ್ದು ಅನುಷ್ಕಾ ಹಾಗೂ ವಿರಾಟ್ ತಮ್ಮ ಸುಂದರ ಕ್ಷಣಗಳನ್ನು ಕಳೆಯುತ್ತಿದ್ದಾರೆ. ಇದರ ಬಾಡಿಗೆಯನ್ನು ತಿಳಿದ ನೆಟ್ಟಿಗರು ಕಣ್ಣರಳಿಸಿ ನೋಡಿದ್ದಾರಂತೆ. ಮುಂಬೈನ ಜುಹುದಲ್ಲಿರುವ ಈ ಐಷಾರಾಮಿ ಮನೆಗೆ ವಿರಾಟ ಹಾಗೂ ಅನುಷ್ಕಾ ದಂಪತಿಗಳು ತಿಂಗಳಿಗೆ ಸುಮಾರು 2.8 ಲಕ್ಷ ರೂಪಾಯಿಗಳನ್ನು ಪಾವತಿಸುತ್ತಿದ್ದಾರಂತೆ.

ಈ ಮುಂಚೆ, ಅನುಷ್ಕಾ ಶರ್ಮಾ ಮತ್ತು ವಿರಾಟ್ ಕೊಹ್ಲಿ,  ಗಾಯಕ ಕಿಶೋರ್ ಕುಮಾರ್ ಅವರ ಬಂಗಲೆಯನ್ನುಅಕ್ಟೋಬರ್‌ನಲ್ಲಿ ಗುತ್ತಿಗೆಗೆ ಪಡೆದುಕೊಂಡಿದ್ದರು. ಬಾಡಿಗೆಗಾಗಿ ಪಡೆದ ಖ್ಯಾತ ಗಾಯಕನ ಬಂಗಲೆಯಲ್ಲಿ ರೆಸ್ಟೋರೆಂಟ್ ತೆರೆದಿದ್ದರು. ಇದೀಗ ತೆಗೆದುಕೊಂಡಿರುವ ಐಷಾರಾಮಿ ಬಾಡಿಗೆ ಮನೆಗೆ ಬರೋಬ್ಬರಿ 7 ಲಕ್ಷ ರೂಪಾಯಿಗಳನ್ನು ಅಡ್ವಾನ್ಸ್ ಆಗಿ ನೀಡಿದ್ದಾರೆ ಎಂಬ ಸುದ್ದಿಯು ಎಲ್ಲೆಡೆ ಹರಿದಾಡುತ್ತಿದೆ. ಅನುಷ್ಕಾ ಹಾಗೂ ವಿರಾಟ್ ದಂಪತಿಗಳು ಬಾಡಿಗೆ ಪಡೆದಿರುವ ಮುಂಬೈನ ಜುಹುದಲ್ಲಿರುವ ಐಷಾರಾಮಿ ಮನೆಯನ್ನು ಖರೀದಿಸುವುದಾದರೆ ಸುಮಾರು 34 ಕೋಟಿ ರೂಪಾಯಿಗಳನ್ನು ನೀಡಬೇಕಾಗುತ್ತದೆ ಎಂದು ತಿಳಿದುಬಂದಿದೆ. ಒಟ್ಟಿನಲ್ಲಿ ಈ ದಂಪತಿಗಳು ತಮ್ಮ ವೃತ್ತಿ ಜೀವನದಲ್ಲಿ ಬ್ಯುಸಿಯಾಗಿದ್ದರೂ ಕೂಡ ತಮ್ಮ ಲೇಟೆಸ್ಟ್ ಫೋಟೋಗಳನ್ನು ಹಂಚಿಕೊಳ್ಳುವುದರ ಮೂಲಕ ನೆಟ್ಟಿಗರಿಗೆ ತುಂಬಾ ಹತ್ತಿರವಾಗಿದ್ದಾರೆ.

Anushka sharma and virat kohli flat
Anushka sharma and virat kohli flat

Leave a Comment

error: Content is protected !!