Sourav Ganuguly: ಸೌರವ್ ಗಂಗೂಲಿ ಅವರ ಮಗಳು ಸನಾ ಪಡೆಯುತ್ತಿರುವ ವಾರ್ಷಿಕ ಸಂಭಾವನೆ ಎಷ್ಟು ಗೊತ್ತಾ? ತಂದೆಯನ್ನೇ ಮೀರಿಸುತ್ತಿದ್ದಾಳೆ ಮಗಳು!

Sourav Ganguly ಭಾರತೀಯ ಕ್ರಿಕೆಟ್ ತಂಡದ ಅತ್ಯಂತ ಅಗ್ರೆಸ್ಸಿವ್ ಕ್ಯಾಪ್ಟನ್ ಯಾರು ಎಂದು ಕೇಳಿದಾಗ ಕೆಲವರು ವಿರಾಟ್ ಕೊಹ್ಲಿ(Virat Kohli) ಅವರ ಹೆಸರು ಹೇಳಬಹುದು ಆದರೆ ನಿಜವಾದ ಕ್ರಿಕೆಟ್ ಅಭಿಮಾನಿಗಳು ಮೊದಲಿನಿಂದಲೂ ಕೂಡ ಭಾರತೀಯ ಕ್ರಿಕೆಟ್ ತಂಡವನ್ನು ಹಿಂಬಾಲಿಸಿಕೊಂಡು ಬಂದಿದ್ದರೆ ಅವರು ಹೇಳುವಂತಹ ಹೆಸರು ಸೌರವ್ ಗಂಗೂಲಿ(Sourav Ganguly). ಭಾರತೀಯ ಕ್ರಿಕೆಟ್ ತಂಡವನ್ನು ಅವರು ಕಟ್ಟಿ ಬೆಳೆಸಿರುವಂತಹ ರೀತಿ ನಿಜಕ್ಕೂ ಕೂಡ ಶ್ಲಾಘನೀಯ.

ಇನ್ನು ಕೇವಲ ಆಟಗಾರ ಹಾಗೂ ಕನನಾಗಿ ಮಾತ್ರವಲ್ಲದೆ ಭಾರತೀಯ ಕ್ರಿಕೆಟ್ ಬೋರ್ಡ್ ನ ಅಧ್ಯಕ್ಷ ಆಗಿ ಕೂಡ ಸಾಕಷ್ಟು ಸಮಯಗಳ ಕಾಲ ಕಾರ್ಯ ನಿರ್ವಹಿಸಿದ್ದಾರೆ. ಇನ್ನು ಈಗ ಸೌರವ್ ಗಂಗೂಲಿ ಅವರ ಮಗಳು ಆಗಿರುವಂತಹ ಸನಾ ಗಂಗೂಲಿ(Sana Ganguly) ಯವರು ಕೂಡ ಸುದ್ದಿಗೆ ಬಂದಿದ್ದಾರೆ. ಅಷ್ಟಕ್ಕೂ ಅವರು ಯಾವ ವಿಚಾರಕ್ಕಾಗಿ ಸುದ್ದಿಯಲ್ಲಿದ್ದಾರೆ ಎಂಬುದನ್ನು ತಿಳಿಯೋಣ ಬನ್ನಿ.

ಸನಾ ಗಂಗೂಲಿ ಲಂಡನ್ ಯುನಿವರ್ಸಿಟಿಯಲ್ಲಿ(London University) ಅರ್ಥಶಾಸ್ತ್ರದಲ್ಲಿ ಪದವಿ ಪಡೆದಿರುವ ಇವರು ಯೂಸಿಎಲ್ ಅನ್ನು ಕೂಡ ಪೂರ್ಣಗೊಳಿಸಿದ್ದಾರೆ. ಇನ್ನು ಸಾಕಷ್ಟು ದೊಡ್ಡ ದೊಡ್ಡ ಕಂಪನಿಗಳಲ್ಲಿ ಕೂಡ ಇವರಿಗೆ ಆಫರ್ಗಳು ಹುಡುಕಿಕೊಂಡು ಬಂದಿದೆ. ಸದ್ಯಕ್ಕೆ ಅವರ ಲಿಂಕ್ಡಿನ್ ಪ್ರೊಫೈಲ್ ಪ್ರಕಾರ PWC ಕಂಪನಿಯಲ್ಲಿ ಇಂಟರ್ನಿ ಆಗಿ ಕೆಲಸ ಮಾಡುತ್ತಿದ್ದಾರೆ. ವಿಶ್ವದಲ್ಲಿಯೇ ನಂಬರ್ ಒನ್ ಫೈನಾನ್ಸಿಯಲ್ ಅಡ್ವೈಸರ್ ಕಂಪನಿ ಆಗಿರುವ ಈ ಕಂಪನಿ 150ಕ್ಕೂ ಅಧಿಕ ದೇಶಗಳಲ್ಲಿ ಹರಡಿದೆ.

ಇನ್ನು ಈ ಕಂಪನಿಯಲ್ಲಿ ಕೆಲಸ ಮಾಡುತ್ತಿರುವಂತಹ ಸನಾ ಗಂಗೂಲಿ ಅವರಿಗೆ ವರ್ಷಕ್ಕೆ 30 ಲಕ್ಷಕ್ಕಿಂತಲೂ ಅಧಿಕ ಪ್ಯಾಕೇಜ್ ಹೊಂದಿರುವ ಸಂಭಾವನೆಯನ್ನು ನೀಡಲಾಗುತ್ತದೆ. ತಂದೆಯ ಹೆಸರನ್ನು ಇನ್ನು ಎತ್ತರಕ್ಕೆ ಹಾರುವಂತೆ ಮಾಡುವಂತಹ ಕೆಲಸವನ್ನು ಸನಾ ಗಂಗೂಲಿ(Sana Ganguly) ಅವರು ಮಾಡುತ್ತಿದ್ದಾರೆ ಎನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ. ಈ ಬಗ್ಗೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ನಮ್ಮೊಂದಿಗೆ ತಪ್ಪದೇ ಕಾಮೆಂಟ್ ಮಾಡುವ ಮೂಲಕ ಹಂಚಿಕೊಳ್ಳಿ.

Leave a Comment

error: Content is protected !!