Sachin Tendulkar ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ಅವರ ಪತ್ನಿ ಹೇಗಿದ್ದಾರೆ ಅವರ ವಯಸ್ಸೆಷ್ಟು ಗೊತ್ತಾ?

Sachin Tendulkar ಸಚಿನ್ ತೆಂಡೂಲ್ಕರ್ ಅವರನ್ನು ಕ್ರಿಕೆಟ್ ಲೋಕದ ದೇವರು ಎನ್ನುವುದಾಗಿ ಕರೆಯಲಾಗುತ್ತದೆ. ಕೇವಲ 16 ವಯಸ್ಸಿನ ಬಾಲಕ ಆಗಿರುವಾಗಲೇ ಇವರು ಕ್ರಿಕೆಟ್ ಲೋಕಕ್ಕೆ ಪಾದರ್ಪಣೆ ಮಾಡುವ ಮೂಲಕ ಕ್ರಿಕೇಟ್ ಜಗತ್ತನ್ನೇ ನಿಬ್ಬೆರಗಾಗಿಸುತ್ತಾರೆ. ಇನ್ನು ಇವರು ಅಂಜಲಿ ಮೆಹ್ತಾ ಎನ್ನುವವರನ್ನು ಮದುವೆಯಾಗಿದ್ದು ಇವರಿಗೆ ಸಾರ ತೆಂಡೂಲ್ಕರ್ ಹಾಗೂ ಅರ್ಜುನ್ ತೆಂಡೂಲ್ಕರ್ ಎನ್ನುವ ಇಬ್ಬರು ಮಕ್ಕಳಿದ್ದಾರೆ. ಅಂಜಲಿ ಹಾಗೂ ಸಚಿನ್ ತೆಂಡೂಲ್ಕರ್ ಇಬ್ಬರನ್ನು ಕೂಡ ಪ್ರೇಮ ವಿವಾಹ ಆಗಿದ್ದು ಇವರಿಬ್ಬರ ಇಂಟರೆಸ್ಟಿಂಗ್ ಲವ್ ಸ್ಟೋರಿಯನ್ನು(Love Story) ನಿಮ್ಮ ಮುಂದೆ ಇಂದಿನ ಲೇಖನಿಯಲ್ಲಿ ತೆರೆದಿಡಲಿದ್ದೇವೆ.

ಮೊದಲಿಗೆ ಸಚಿನ್ ತೆಂಡೂಲ್ಕರ್ ಹಾಗೂ ಅಂಜಲಿ ಇವರಿಬ್ಬರ ಭೇಟಿ ನಡೆದಿದ್ದು 1990ರಲ್ಲಿ ಮುಂಬೈ ಏರ್ ಪೋರ್ಟ್ ನಲ್ಲಿ. ಈ ಸಮಯದಲ್ಲಿ ಅಂಜಲಿ ಅವರು ಡಾಕ್ಟರ್ ಆಗಿ ಪ್ರಾಕ್ಟೀಸ್ ಮಾಡುತ್ತಿದ್ದರು. ಸಚಿನ್ ತೆಂಡೂಲ್ಕರ್ ಅವರನ್ನು ನೋಡಿ ಅಂಜಲಿ ಅವರು ಸೋ ಕ್ಯೂಟ್ ಎಂದಿದ್ದರಂತೆ. ಈ ಸಮಯದಲ್ಲಿ ಅಂಜಲಿ ಅವರು ತಮ್ಮ ತಾಯಿಯನ್ನು ಏರ್ಪೋರ್ಟ್ ನಿಂದ ಕರೆದುಕೊಂಡು ಹೋಗಲು ತಮ್ಮ ಸ್ನೇಹಿತನ ಜೊತೆಗೆ ಬಂದಿದ್ದರು. ಆ ಸಂದರ್ಭದಲ್ಲಿ ಸಚಿನ್ ತೆಂಡೂಲ್ಕರ್ ಅವರನ್ನು ಭೇಟಿ ಮಾಡಲು ಪ್ರಯತ್ನ ಪಟ್ಟರು ಕೂಡ ಸೆಕ್ಯೂರಿಟಿಯ(Security) ಕಾರಣದಿಂದಾಗಿ ಮಾತನಾಡಲು ಸಾಧ್ಯವಾಗಲಿಲ್ಲ.

Sachin Tendulkar with wife

ಆಗಿನ್ನು ಸಚಿನ್ ತೆಂಡೂಲ್ಕರ್ ಅವರು ಭಾರತೀಯ ಕ್ರಿಕೆಟ್ ತಂಡದಲ್ಲಿ ಅತ್ಯಂತ ಕಿರಿಯ ಆಟಗಾರರಾಗಿದ್ದರು ಹೀಗಾಗಿ ಅಂಜಲಿ ಅವರಿಗೆ ಸಚಿನ್ ಅವರ ಬಗ್ಗೆ ಹೆಚ್ಚಾಗಿ ತಿಳಿದಿರಲಿಲ್ಲ. ನಂತರ ಸಚಿನ್ ತೆಂಡೂಲ್ಕರ್ ಅವರ ಫೋನ್ ನಂಬರ್(Phone Number) ಅನ್ನು ಹುಡುಕಿ ಸಚಿನ್ ತೆಂಡೂಲ್ಕರ್ ಅವರ ಜೊತೆಗೆ ಮಾತನಾಡಿದಾಗ ಸಚಿನ್ ತೆಂಡೂಲ್ಕರ್ ಅವರು ಕೂಡ ಅಂಜಲಿ ಅವರನ್ನು ನೆನಪಿಸಿಕೊಂಡಿದ್ದರು. ಇಲ್ಲಿಂದಲೇ ಇವರಿಬ್ಬರ ಸ್ನೇಹ ಪ್ರಾರಂಭವಾಯಿತು ಎಂದು ಹೇಳಬಹುದಾಗಿದೆ. ಇಲ್ಲಿಂದ ಇವರಿಬ್ಬರ ಸ್ನೇಹ ಅತ್ಯಂತ ಗಾಢವಾಯಿತು.

ಮೊದಲಿಗೆ ಸಚಿನ್ ಅವರು ಅಂಜಲಿ ಅವರನ್ನು ತಮ್ಮ ಮನೆಯವರ ಬಳಿ ಪರಿಚಯ ಮಾಡಲು ಕೂಡ ಕರೆದುಕೊಂಡು ಹೋಗಿದ್ದರಂತೆ. ಆ ಸಂದರ್ಭದಲ್ಲಿ ಇವರು ಪತ್ರಕರ್ತೆ(Journalist) ಎಂಬುದಾಗಿ ಮನೆಯವರ ಬಳಿ ಸುಳ್ಳು ಹೇಳಿದ್ದರಂತೆ. ನಂತರ ಬರೋಬ್ಬರಿ ಐದು ವರ್ಷಗಳ ಕಾಲ ಡೇಟಿಂಗ್(Dating) ನಡೆಸಿದ್ದಾರೆ. 1994ರಲ್ಲಿ ನ್ಯೂಜಿಲ್ಯಾಂಡ್ ನಲ್ಲಿ ನಿಶ್ಚಿತಾರ್ಥ ಆಗುವ ಇವರಿಬ್ಬರು 1995ರಲ್ಲಿ ಮದುವೆಯಾಗುತ್ತಾರೆ. ಇನ್ನು ಅಂಜಲಿ ಅವರು ಸಚಿನ್ ತೆಂಡೂಲ್ಕರ್ ಅವರಿಗಿಂತ ವಯಸ್ಸಿನಲ್ಲಿ ಆರು ವರ್ಷ ದೊಡ್ಡವರಾಗಿದ್ದಾರೆ. ಹೀಗಿದ್ದರೂ ಇವರಿಬ್ಬರ ಜೀವನ ಎನ್ನುವುದು ಎಲ್ಲರಿಗೂ ಮಾದರಿಯಾಗಿದೆ ಎಂದು ಹೇಳಿದರೆ ಅತಿಶಯೋಕ್ತಿ ಎನಿಸಲಾರದು.

Leave a Comment

error: Content is protected !!