ಸಂಭಾವನೆಯಲ್ಲಿ ವಿರಾಟ್ ಕೊಹ್ಲಿಯನ್ನು ಹಿಂದಿಕ್ಕಿದ ರೋಹಿತ್ ಶರ್ಮಾ. ಐಪಿಎಲ್ 15 ಸೀಸನ್ ಗಳಿಂದ ರೋಹಿತ್ ಪಡೆದ ಒಟ್ಟು ಹಣ ಎಷ್ಟು ಕೋಟಿ ಗೊತ್ತಾ

ಸದ್ಯಕ್ಕೆ ರೋಹಿತ್ ಶರ್ಮಾ ಅವರು ಭಾರತ ತಂಡದ ನಾಯಕನಾಗಿ ಮಿಂಚುತ್ತಿದ್ದಾರೆ. ಅದರಲ್ಲೂ ನಾಯಕತ್ವದಲ್ಲಿ ವಿಫಲತೆಯನ್ನು ಕಾಣದೆ ಯಶಸ್ವಿಯಾಗಿ ರೋಹಿತ್ ಶರ್ಮ ಅವರು ಮುನ್ನುಗ್ಗುತ್ತಿದ್ದಾರೆ. ಈ ವರ್ಷ ಭಾರತ ತಂಡದ ನಾಯಕನಾಗಿ ಒಂದೇ ಒಂದು ಸೋಲನ್ನು ಕೂಡ ಕಾಣದ ರೋಹಿತ್ ಶರ್ಮಾ ಐಪಿಎಲ್ ನಲ್ಲಿ ಉಲ್ಟಾ ಹೊ’ಡೆದಿದ್ದಾರೆ. ಐಪಿಎಲ್ ನಲ್ಲಿ ಈ ವರ್ಷ ರೋಹಿತ್ ಶರ್ಮಾ ಅವರು ಬರೀ ಸೋಲನ್ನೇ ಕಾಣುತ್ತಿದ್ದಾರೆ.

ಈ ವರ್ಷದ ಐಪಿಎಲ್ ನಲ್ಲಿ ಮುಂಬೈ ಇಂಡಿಯನ್ಸ್ ತಂಡ ಎಂಟು ಮ್ಯಾಚ್ ಗಳಲ್ಲಿ ಎಂಟೂ ಮ್ಯಾಚ್ ಗಳನ್ನು ಸೋತಿದೆ. ಪಂದ್ಯಗಳನ್ನು ಅಷ್ಟೇ ಸೋಲುವುದಲ್ಲದೆ ಮುಂಬಯಿ ಇಂಡಿಯನ್ಸ್ ಆಟಗಾರರೆಲ್ಲ ತಮ್ಮ ಆಟದ ವೈಖರಿಯನ್ನು ಮರೆತಿದ್ದಾರೆ. ಅದರಲ್ಲೂ ಭಾರತದ ನಾಯಕನಾಗಿ ರೋಹಿತ್ ಶರ್ಮಾ ಅವರ ಕಳಪೆ ಬ್ಯಾಟಿಂಗ್ ಅಭಿಮಾನಿಗಳಲ್ಲಿ ಚಿಂತೆ ಮೂಡಿಸಿದೆ. ಐಪಿಎಲ್ ಮುಗಿದ ನಂತರವೇ ಟಿ ಟ್ವೆಂಟಿ ವಿಶ್ವಕಪ್ ಪ್ರಾರಂಭವಾಗಲಿದೆ.

ರೋಹಿತ್ ಶರ್ಮಾ ಅವರು ಇದೇ ರೀತಿ ತಮ್ಮ ಆಟವನ್ನು ಮುಂದುವರೆಸಿಕೊಂಡು ಹೋದರೆ ಭಾರತ ತಂಡವು ಟಿ ಟ್ವೆಂಟಿ ವಿಶ್ವಕಪ್ ನಲ್ಲಿ ತುಂಬಾ ಕಷ್ಟಪಡಬೇಕಾಗುತ್ತದೆ. ರೋಹಿತ್ ಶರ್ಮ ಮತ್ತು ವಿರಾಟ್ ಕೊಹ್ಲಿ ಇಬ್ಬರೂ ಕೂಡ ತಮ್ಮ ಫಾರ್ಮ್ ಕಳೆದುಕೊಂಡಿದ್ದಾರೆ. ಇಂಡಿಯನ್ ಕ್ರಿಕೆಟ್ ಟೀಮ್ ನ ಟಾಪ್ ಆರ್ಡರ್ ಬ್ಯಾಟ್ಸ್ ಮನ್ ಗಳು ಫಾರ್ಮ್ ಕಳೆದುಕೊಂಡಿರುವುದು ನಿಜಕ್ಕೂ ಬೇಸರದ ಸಂಗತಿ. ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಅವರ ಮೇಲೆ ದಿನೇ ದಿನೇ ಒತ್ತಡ ಹೆಚ್ಚುತ್ತಿದೆ. ಈ ಇಬ್ಬರು ಶ್ರೇಷ್ಠ ಆಟಗಾರರು ಕೂಡ ಈ ಒತ್ತಡದಿಂದ ಮುಕ್ತವಾಗಿ ಹೊರಬರಲಿ ಎನ್ನುವುದು ನಮ್ಮೆಲ್ಲರ ಬೇಡಿಕೆ.

ಇನ್ನೂ ಸಂಭಾವನೆ ವಿಚಾರಕ್ಕೆ ಬಂದರೆ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಯಾರಿಗಿಂತ ಯಾರು ಕಡಿಮೆ ಇಲ್ಲ ಎಂಬಂತೆ ಇದ್ದಾರೆ. ವಿರಾಟ್ ಕೊಹ್ಲಿಯವರು ಆರ್ ಸಿಬಿ ತಂಡದ ನಾಯಕತ್ವವನ್ನು ಕೂಡ ಕೈಬಿಟ್ಟು ಇದೀಗ ಕೇವಲ ಸಿ ಬಿ ತಂಡದ ಆಟಗಾರನಾಗಿ ಆಟ ಆಡುತ್ತಿದ್ದಾರೆ. ವಿರಾಟ್ ಕೊಹ್ಲಿ ಅವರು ಒಟ್ಟಾರೆ ಹದಿನೈದು ಐಪಿಎಲ್ ಸೀಸನ್ ಗಳಿಂದ ನೂರಾ ಐವತ್ತು ಕೋಟಿ ರುಪಾಯಿಗಳನ್ನು ಬಾಚಿಕೊಂಡಿದ್ದಾರೆ. ವಿರಾಟ್ ಕೊಹ್ಲಿ ಅವರು ಅತಿ ಹೆಚ್ಚು ಸಂಭಾವನೆ ಪಡೆದಿರುವ ಆಟಗಾರರ ಪಟ್ಟಿಯಲ್ಲಿ ಎರಡನೇ ಸ್ಥಾನವನ್ನು ಪಡೆದುಕೊಂಡಿದ್ದರು. ಇದೀಗ ವಿರಾಟ್ ಕೊಹ್ಲಿ ಅವರನ್ನು ಹಿಂದಿಕ್ಕಿ ಎರಡನೇ ಸ್ಥಾನವನ್ನು ರೋಹಿತ್ ಅವರು ಗಳಿಸಿದ್ದಾರೆ.

ಹೌದು ಗೆಳೆಯರೇ, ರೋಹಿತ್ ಶರ್ಮಾ ಅವರು ಒಟ್ಟಾರೆ ಹದಿನೈದು ಐಪಿಎಲ್ ಸೀಸನ್ ಗಳಿಂದ ನೂರಾ ಅರುವತ್ತು ಕೋಟಿ ರೂಪಾಯಿಗಳನ್ನು ಗಳಿಸಿದ್ದಾರೆ ಮತ್ತು ವಿರಾಟ್ ಕೊಹ್ಲಿ ಅವರಿಗಿಂತ ಹತ್ತು ಕೋಟಿ ಹೆಚ್ಚು ಹಣ ಇವರ ಬಳಿ ಇದೆ. ರೋಹಿತ್ ಶರ್ಮಾ ಅವರು ಐಪಿಎಲ್ ಜರ್ನಿ ಶುರು ಮಾಡಿದ್ದು 2008 ರಲ್ಲಿ. ಇವರು 2008 ರಲ್ಲಿ ಮೂರು ಕೋಟಿ ಗೆ ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ಸೇರಿಕೊಂಡಿದ್ದರು. 2008 ರಿಂದ 2010 ರವರೆಗೆ ಡೆಲ್ಲಿ ತಂಡದಲ್ಲಿ ಆಟವಾಡಿದ್ದಾರೆ ಮತ್ತು ಪ್ರತಿವರ್ಷ ಇವರು ಮೂರು ಕೋಟಿ ರುಪಾಯಿಗಳ ಸಂಭಾವನೆ ಪಡೆದಿದ್ದಾರೆ. 2011 ರಲ್ಲಿ ರೋಹಿತ್ ಮುಂಬೈ ಇಂಡಿಯನ್ಸ್ ತಂಡವನ್ನು ಸೇರಿಕೊಂಡರು. ಮುಂಬೈ ತಂಡದವರು ರೋಹಿತ್ ಗೆ 9 ಕೋಟಿ ರೂಪಾಯಿಗಳನ್ನು ಕೊಟ್ಟು ಖರೀದಿ ಮಾಡಿದರು. ತದನಂತರ 2013 ರವರೆಗೆ ರೋಹಿತ್ ಅವರಿಗೆ ಪ್ರತಿವರ್ಷ ಒಂಬತ್ತು ಕೋಟಿ ರುಪಾಯಿಗಳನ್ನು ಕೊಟ್ಟಿದ್ದಾರೆ.

2014 ರಲ್ಲಿ ರೋಹಿತ್ ಶರ್ಮಾ ಅವರು ಮುಂಬೈ ಇಂಡಿಯನ್ಸ್ ತಂಡದ ಕ್ಯಾಪ್ಟನ್ ಆಗಿ ನೇಮಕಗೊಂಡರು. ನಾಯಕತ್ವ ವಹಿಸಿದ ಮೇಲೆ ರೋಹಿತ್ ಅವರಿಗೆ ಹನ್ನೆರಡು ಕೋಟಿ ರೂಪಾಯಿಗಳ ಸಂಬಳ ನೀಡಲಾಗುತ್ತಿತ್ತು. 2017 ರ ತನಕ ರೋಹಿತ್ ಶರ್ಮಾ ಅವರು ಪ್ರತಿವರ್ಷ ಹನ್ನೆರಡೂವರೆ ಕೋಟಿ ರೂಪಾಯಿಗಳನ್ನು ಪಡೆದಿದ್ದಾರೆ. ತದನಂತರ 2018 ರಿಂದ 2021 ರವರೆಗೆ ರೋಹಿತ್ ಅವರಿಗೆ ಹದಿನೈದು ಕೋಟಿ ರುಪಾಯಿಗಳನ್ನು ಪ್ರತಿವರ್ಷ ನೀಡಿದ್ದಾರೆ. ಇದಾದ ನಂತರ ಈ ವರ್ಷ ರೋಹಿತ್ ಅವರಿಗೆ ಹದಿನಾರು ಕೋಟಿ ರುಪಾಯಿಗಳನ್ನು ನೀಡಿದ್ದಾರೆ. ಒಟ್ಟಾರೆ 15 ಐಪಿಎಲ್ ಸೀಸನ್ ಗಳಿಂದ ದೋನಿ ಅವರಿಗೆ 180 ಕೋಟಿ ಆದಾಯ ಬಂದಿದೆ ಎಂದು ವರದಿ ತಿಳಿಸಿದೆ. ಒಟ್ಟಾರೆ ಐಪಿಎಲ್ ನಲ್ಲಿ ಅತಿ ಹೆಚ್ಚು ಹಣವನ್ನು ಗಳಿಸಿರುವುದು ಎಂಎಸ್ ಧೋನಿ ಅವರು.. ಧೋನಿ ಅವರ ನಂತರ ರೋಹಿತ್ ಶರ್ಮಾ ಅವರೇ ಎರಡನೆ ಸ್ಥಾನವನ್ನು ಗಿಟ್ಟಿಸಿಕೊಂಡಿದ್ದ‍ರೆ.

Leave a Comment

error: Content is protected !!