Rishab Pant ಗಂಭೀರವಾಗಿ ಗಾ’ಯಗೊಂಡಿದ್ದ ರಿಶಭ್ ಪಂತ್ ಪರಿಸ್ಥಿತಿ ಈಗ ಏನಾಗಿದೆ? ಇಲ್ಲಿದೆ ನೋಡಿ ಫುಲ್ ಡೀಟೇಲ್ಸ್.

Rishab Pant ಭಾರತೀಯ ಕ್ರಿಕೆಟ್ ತಂಡದ ಯುವ ಉದಯೋನ್ಮುಖ ಆಟಗಾರ ಹಾಗೂ ಐಪಿಎಲ್ ನಲ್ಲಿ ದೆಲ್ಲಿ ಕ್ಯಾಪಿಟಲ್ಸ್ ತಂಡದ ಕಪ್ತಾನ(Captain) ಆಗಿರುವ ರಿಷಬ್ ಪಂತ್ ಅವರು ಹೊಸ ವರ್ಷದ ಸಂದರ್ಭದಲ್ಲಿ ಗಂಭೀರ ಅಪಘಾ’ತಕ್ಕೆ ಒಳಗಾಗಿರುವುದು ನಿಮಗೆಲ್ಲರಿಗೂ ಗೊತ್ತಿರುವ ವಿಚಾರವಾಗಿದೆ. ಸಿಸಿಟಿವಿ ಫೂಟೇಜಿನಲ್ಲಿ ಇದನ್ನು ಗಮನಿಸಿದ ಪ್ರತಿಯೊಬ್ಬರೂ ಕೂಡ ಬದುಕಿರುವುದೇ ಹೆಚ್ಚು ಎಂಬುದಾಗಿ ಆಶ್ಚರ್ಯವನ್ನು ವ್ಯಕ್ತಪಡಿಸಿದ್ದರು.

ಎಲ್ಲಾ ಸರಿಯಾಗಿದ್ದರೆ ಈ ವರ್ಷ ಈಗಾಗಲೇ ನಡೆಯಬೇಕಾಗಿದ್ದ ಹಾಗೂ ನಡೆದಿರುವಂತಹ ಎಲ್ಲಾ ಪ್ರಮುಖ ಸರಣಗಳಲ್ಲಿ ಇನ್ನು ಮುಂದೆ ನಡೆಯಲಿರುವ ಐಪಿಎಲ್ ಹಾಗೂ ಏಕದಿನ ವಿಶ್ವಕಪ್(world Cup) ನಲ್ಲಿ ಕೂಡ ರಿಶಬ್ ಪಂತ್ ಅವರು ಆಡಬೇಕಾಗಿತ್ತು. ಆದರೆ ಈ ಅಹಿತಕರ ಘಟನೆಯ ಮೂಲಕ ಅವರು ಸಾಕಷ್ಟು ಸಮಯಗಳ ಕಾಲ ಕ್ರಿಕೆಟ್ ನಿಂದ ದೂರ ಇರಬೇಕಾಗಿರುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಇದು ಕ್ರಿಕೆಟ್ ಅಭಿಮಾನಿಗಳಿಗೆ ಸಾಕಷ್ಟು ಬೇಸರವನ್ನು ಉಂಟುಮಾಡುವಂತೆ ಮಾಡಿದೆ.

Rishab Pant

ಇನ್ನು ಈಗ ರಿಷಬ್ ಪಂತ್ ಹಾಗೂ ಕ್ರಿಕೆಟ್ ಅಭಿಮಾನಿಗಳ ಪಾಲಿಗೆ ಒಂದು ಸಂತೋಷದ ಸುದ್ದಿ ಸಿಕ್ಕಿದೆ ಎಂಬುದಾಗಿ ತಿಳಿದು ಬಂದಿದೆ. ಹೌದು ಮಿತ್ರರೇ ಅದೇನೆಂದರೆ ರಿಷಬ್ ಪಂತ್ ಅವರು ಈಗಾಗಲೇ ಆಸ್ಪತ್ರೆಯಿಂದ ಡಿಸ್ಚಾರ್ಜ್(Discharge) ಆಗಿದ್ದಾರೆ ಎಂಬುದಾಗಿ ತಿಳಿದು ಬಂದಿದೆ. ಎಲ್ಲಕ್ಕಿಂತ ಪ್ರಮುಖವಾಗಿ ಅವರು ಚಿಕಿತ್ಸೆಗೆ ವೇಗವಾಗಿ ಸ್ಪಂದಿಸುತ್ತಿದ್ದು ಬೇಗನೆ ಗುಣಮುಖವಾಗುವಂತಹ ಲಕ್ಷಣವನ್ನು ತೋರಿಸುತ್ತಿದ್ದಾರೆ ಎಂಬುದಾಗಿ ವೈದ್ಯರೇ ಅಧಿಕೃತವಾಗಿ ಹೇಳಿದ್ದಾರೆ. ಇದು ಈಗ ಸಾಮಾಜಿಕ ಜಾಲತಾಣಗಳಲ್ಲಿ ಓಡಾಡುತ್ತಿರುವ ಲೇಟೆಸ್ಟ್ ನ್ಯೂಸ್(Latest News).

ಬಲ್ಲಮೂಲಗಳ ಪ್ರಕಾರ ಚಿಕಿತ್ಸೆ(Treatment) ಎಲ್ಲಾ ಅಂದುಕೊಂಡಂತೆ ನಡೆದರೆ ಇನ್ನೂ ಒಂದು ವರ್ಷದ ಒಳಗೆ ರಿಷಬ್ ಪಂತ್ ಅವರು ಸಂಪೂರ್ಣವಾಗಿ ಗುಣಮುಖವಾಗಿ ಕ್ರಿಕೆಟ್ ಅಂಗಳಕ್ಕೆ ಕಾಲಿಡುವಂತಹ ಸಾಧ್ಯತೆ ದಟ್ಟವಾಗಿದೆ ಎಂಬುದಾಗಿದೆ. ಕ್ರಿಕೆಟ್ ಅಭಿಮಾನಿಗಳ ಆಶಯವೂ ಕೂಡ ಇದೇ ಆಗಿದೆ. ವಿರೋಧಿ ತಂಡಗಳ ಪಾಲಿಗೆ ಸಿಂಹ ಸ್ವಪ್ನ ಆಗಿರುವ ರಿಷಭ್ ಪಂತ್ ಆದಷ್ಟು ಬೇಗ ಗುಣಮುಖವಾಗಿ ಕ್ರಿಕೆಟ್ ಅಂಗಳದಲ್ಲಿ ಮಿಂಚಿ ಮೆರೆದಾಡಲಿ ಎಂಬುದಾಗಿ ಆಶಿಸೋಣ.

Leave a Comment

error: Content is protected !!