ಐಪಿಲ್ ಪಟ್ಟವನ್ನು ಮುಡಿಗೇರಿಸಿಕೊಂಡಿರುವ ಗುಜರಾತ್ ಟೈಟನ್ಸ್ ತಂಡಕ್ಕೆ ಸಿಕ್ಕಿರುವ ಒಟ್ಟು ಬಹುಮಾನದ ಮೊತ್ತ ಎಷ್ಟು ಗೊತ್ತಾ

ಈ ವರ್ಷದ ಐಪಿಎಲ್ ಸೀಸನ್ ನಲ್ಲಿ ಎಲ್ಲರ ಲೆಕ್ಕಾಚಾರ ತಲೆಕೆಳಗಾಗಿದೆ. ಹೊಳೆಯ ಐಪಿಎಲ್ ತಂಡಗಳನ್ನು ಮೆಟ್ಟಿ ಹೊಸ ಐಪಿಎಲ್ ತಂಡಗಳು ಪಟ್ಟವನ್ನು ಮುಡಿಗೇರಿಸಿಕೊಂಡಿದ್ದಾರೆ. ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಮುಂಬೈ ಇಂಡಿಯನ್ಸ್ ನಂತಹ ಬಲಿಷ್ಠ ತಂಡಗಳನ್ನು ಹಿಂದಿಕ್ಕಿ ಗುಜರಾತ್ ಟೈಟನ್ಸ್ ತಂಡ ಐಪಿಎಲ್ ಪಟ್ಟವನ್ನು ತನ್ನದಾಗಿಸಿಕೊಂಡಿದೆ. ಹಾಡಿನ ಮೊದಲ ಸೀಸನ್ ನಲ್ಲಿ ಐಪಿಎಲ್ ಕಪ್ ಅನ್ನು ಗೆದ್ದು ಬಲಿಷ್ಠ ತಂಡ ಎಂಬ ಹೆಗ್ಗಳಿಕೆ ಪಡೆದಿದೆ.

ಗುಜರಾತ್ ಟೈಟನ್ಸ್ ತಂಡದ ನಾಯಕತ್ವವನ್ನು ಹಾರ್ದಿಕ್ ಪಾಂಡ್ಯ ಅವರು ವಹಿಸಿದ್ದರು. ಐಪಿಎಲ್ ಫೈನಲ್ ಪಂದ್ಯ ರಾಜಸ್ಥಾನ್ ರಾಯಲ್ಸ್ ಮತ್ತು ಗುಜರಾತ್ ಟೈಟನ್ಸ್ ನಡುವೆ ಜಟಾಪಟಿ ನಡೆದಿತ್ತು. ಮೊದಲು ಬ್ಯಾಟಿಂಗ್ ಮಾಡಿದ ರಾಜಸ್ಥಾನ ರಾಯಲ್ಸ್ ಕೇವಲ 130/9 ರನ್ ಗಳನ್ನು ಕಲೆ ಹಾಕಿತ್ತು. ಸುಲಭದ ಮೊತ್ತವನ್ನು ಬೆನ್ನತ್ತಿದ ಗುಜರಾತ್ ಟೈಟನ್ಸ್ ಹದಿನೆಂಟನೆಯ ಓವರ್ ನಲ್ಲಿ 3 ವಿಕೆಟ್ ಗಳ ನಷ್ಟಕ್ಕೆ ಕನಿಷ್ಠ ಮೊತ್ತವನ್ನು ಕಲೆ ಹಾಕುವುದರಲ್ಲಿ ಸಫಲರಾದರು. ಶುಭಮನ್ ಗಿಲ್ ಮತ್ತು ಮಿಲ್ಲರ್ ಅವರ ಅಜೇಯ ಆಟದಿಂದ ಗುಜರಾತ್ ಟೈಟಾನ್ಸ್ ಗೆಲುವಿನ ಕೇಕೆ ಹಾಕಿತು.

ಮೊದಲ ಸೀಸನ್ ನಲ್ಲಿ ಐಪಿಎಲ್ ಕಪ್ ಅನ್ನು ಗೆದ್ದಿರುವ ಗುಜರಾತ್ ಟೈಟನ್ಸ್ ಅವರ ಸಂಭ್ರಮ ಮುಗಿಲು ಮುಟ್ಟಿತ್ತು. ಇವರ ಪರಿಶ್ರಮಕ್ಕೆ ತಕ್ಕಂತೆ ಇವರಿಗೆ ಬಹುಮಾನ ಗಳು ಕೂಡ ಬಂದಿವೆ ಗುಜರಾತ್ ಟೈಟನ್ಸ್ ಅವರು ಐಪಿಎಲ್ 2023 ರ ಟೈಟಲ್ ಅನ್ನು ಗೆದ್ದಿದ್ದಕ್ಕೆ ಕೋಟಿ ಕೋಟಿ ರೂಪಾಯಿಗಳ ಬಹುಮಾನ ಸಿಕ್ಕಿದೆ. ನಾಲ್ಕನೇ ಸ್ಥಾನ ಪಡೆದಿರುವ ಲಕ್ನೋ ತಂಡಕ್ಕೆ ಆರು ಕೋಟಿ ರೂಪಾಯಿಗಳು ಮತ್ತು ಮೂರನೇ ಸ್ಥಾನ ಪಡೆದಿರುವ ಆರ್ ಸಿಬಿ ತಂಡಕ್ಕೆ ಏಳು ಕೋಟಿ ರುಪಾಯಿಗಳ ಬಹುಮಾನ ಸಿಕ್ಕಿದೆ.

ಅಷ್ಟೇ ಅಲ್ಲ ಎರಡನೇ ಸ್ಥಾನವನ್ನು ಪಡೆದುಕೊಂಡಿರುವ ರಾಜಸ್ಥಾನ ರಾಯಲ್ಸ್ ತಂಡಕ್ಕೆ ಹನ್ನೆರಡೂವರೆ ಕೋಟಿ ರುಪಾಯಿಗಳ ಚೆಕ್ ನೀಡಿದ್ದಾರೆ. ಇನ್ನು ನಿಮಗೆಲ್ಲ ಕುತೂಹಲ ಇರುವುದು ಗುಜರಾತ್ ಟೈಟನ್ಸ್ ತಂಡಕ್ಕೆ ಸಿಕ್ಕಿರುವ ಒಟ್ಟು ಬಹುಮಾನದ ಮೊತ್ತ ಎಷ್ಟಿರಬಹುದು ಎಂದು ಮೊದಲನೇ ಸ್ಥಾನವನ್ನು ಗಳಿಸಿರುವ ಗುಜರಾತ್ ಟೈಟನ್ಸ್ ಗೆ ಒಟ್ಟಾರೆ ಇಪ್ಪತ್ತು ಕೋಟಿ ರೂಪಾಯಿಗಳ ದೊಡ್ಡ ಬಹುಮಾನದ ಚೆಕ್ ಅನ್ನು ನೀಡಿದ್ದಾರೆ. ಕಳೆದ ವರ್ಷ(೨೦೨೧)ದಿಂದ ಐಪಿಎಲ್ ನಲ್ಲಿ ಮೊದಲ ಸ್ಥಾನ ಗಳಿಸಿದವರಿಗೆ ಇಪ್ಪತ್ತು ಕೋಟಿ ರೂಪಾಯಿಗಳನ್ನು ನೀಡುತ್ತಿದ್ದಾರೆ. ಇದಕ್ಕಿಂತ ಮುಂಚೆ ಎಲ್ಲಾ ಕೇವಲ ಹತ್ತು ಕೋಟಿ ರುಪಾಯಿಗಳನ್ನು ಮಾತ್ರ ಕೊಡುತ್ತಿದ್ದರು.

Leave a Comment

error: Content is protected !!