MS Dhoni: ಎಂಎಸ್ ಧೋನಿ ಅವರ ಬಳಿ ಇರುವಂತಹ ಅತ್ಯಂತ ದುಬಾರಿ ಬೈಕ್ ಹಾಗೂ ಅದರ ಬೆಲೆ ಎಷ್ಟು ಗೊತ್ತಾ?

MS Dhoni ಮಹೇಂದ್ರ ಸಿಂಗ್ ಧೋನಿ(Mahendra Singh Dhoni) ಭಾರತೀಯ ಕ್ರಿಕೆಟ್ ಇತಿಹಾಸದಲ್ಲಿ ಮಾತ್ರವಲ್ಲದೆ ವಿಶ್ವ ಕ್ರಿಕೆಟ್ ಇತಿಹಾಸದಲ್ಲಿ ಎಂದು ಅಳಿಸಲಾಗದಂತಹ ಒಂದು ಚಿನ್ನದ ಅಕ್ಷರದಲ್ಲಿ ಬರೆದಿರುವಂತಹ ಸುವರ್ಣ ಅಧ್ಯಾಯ ಎಂದು ಹೇಳಬಹುದಾಗಿದೆ. ಅವರ ನಾಯಕತ್ವಕ್ಕೆ ಅವರೇ ಸಾಟಿ ಎನ್ನುವುದನ್ನು ಅವರ ಆರಂಭಿಕ ನಾಯಕತ್ವದ ದಿನಗಳಿಂದಲೂ ಕೂಡ ಪ್ರತಿಯೊಬ್ಬರೂ ಹೇಳುತ್ತಿದ್ದಾರೆ.

ಎಂಎಸ್ ಧೋನಿ ಅವರು ಕೇವಲ ಭಾರತೀಯ ಕ್ರಿಕೆಟ್ ತಂಡದ ನಾಯಕನಾಗಿ ಮಾತ್ರವಲ್ಲದೆ ಐಪಿಎಲ್ ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕನಾಗಿ ಕೂಡ ಐದು ಬಾರಿ ಐಪಿಎಲ್ ಟ್ರೋಫಿ(IPL Trophy) ಹಾಗೂ 2 ಬಾರಿ ಚಾಂಪಿಯನ್ಸ್ ಲೀಗ್ ಟ್ರೋಫಿ ಅನ್ನು ಗೆದ್ದಿದ್ದಾರೆ.

ಇನ್ನು ಅವರಿಗೆ ಕ್ರಿಕೆಟ್ ಅನ್ನು ಬಿಟ್ಟರೆ ಅತ್ಯಂತ ಇಷ್ಟವಾಗಿರುವಂತಹ ವಿಚಾರ ಅಥವಾ ವಸ್ತು ಎಂದರೆ ಅದು ಬೈಕುಗಳು. ಅದಕ್ಕೆ ಉದಾಹರಣೆ ಎನ್ನುವಂತೆ ಭರ್ಜರಿ 74 ಬೈಕುಗಳಿಗೂ ಅಧಿಕ ಬೈಕುಗಳು ಅವರ ಗ್ಯಾರೇಜ್ ನಲ್ಲಿವೆ. ಅಷ್ಟೊಂದು ಬೈಕುಗಳಲ್ಲಿ ಅತ್ಯಂತ ದುಬಾರಿ ಬೈಕು ಯಾವುದು ಎಂಬುದನ್ನು ಇಂದಿನ ಲೇಖನಿಯಲ್ಲಿ ತಿಳಿಸುತ್ತೇವೆ ಬನ್ನಿ.

ಹೌದು ಗೆಳೆಯರೇ ಧೋನಿ(Dhoni) ಅವರ ಬಳಿ ಇರುವಂತಹ ಅತ್ಯಂತ ದುಬಾರಿ ಬೈಕಿ ಎಂದರೆ ಅದು Hellcat X 132 ಬೈಕ್ ಹಾಗೂ ಅದರ ಬೆಲೆ ಭರ್ಜರಿ 45 ಲಕ್ಷಗಳಾಗಿವೆ. ಒಂದು ಐಷಾರಾಮಿ ಕಾರನ್ನೇ ಖರೀದಿಸಬಹುದಾದ ಬೆಲೆಯನ್ನು ಹೊಂದಿದೆ ಈ ದುಬಾರಿ ಬೈಕ್. ಈ ಬಗ್ಗೆ ನಿಮ್ಮ ಅನಿಸಿಕೆಗಳನ್ನು ನಮ್ಮೊಂದಿಗೆ ಕಾಮೆಂಟ್ ಮಾಡುವ ಮೂಲಕ ಹಂಚಿಕೊಳ್ಳಬಹುದಾಗಿದೆ.

Leave a Comment

error: Content is protected !!