MI Vs LSG: ಗಂಭೀರ್ ಪಡೆಯ ಬುಡ ಅಲ್ಲಾಡಿಸಿ ಬಿಟ್ಟ ಮುಂಬೈ ತಂಡದ ಆ ವೇಗಿ.

MI Vs LSG ಮೊದಲ ಕ್ವಾಲಿಫಯರ್ ಪಂದ್ಯವನ್ನು ಗುಜರಾತ್(GT) ವಿರುದ್ಧ ಚೆನ್ನೈ(CSK) ತಂಡ ಗೆದ್ದಿರುವುದು ನಿಮಗೆಲ್ಲರಿಗೂ ಗೊತ್ತಿದೆ. ಚೆನ್ನೈ ತಂಡ ನೇರವಾಗಿ ಈಗಾಗಲೇ ಫೈನಲ್ ಕೂಡ ತಲುಪಿದೆ. ಈಗ ಎರಡನೇ ಪಂದ್ಯದಲ್ಲಿ ಮುಂಬೈ(Mumbai Indians) ತೇರ್ಗಡೆಯಾಗಿದೆ.

ರೋಹಿತ್ ಶರ್ಮಾ(Rohit Sharma) ನಾಯಕತ್ವದ ಐದು ಬಾರಿ ಚಾಂಪಿಯನ್ ತಂಡವಾಗಿರುವಂತಹ ಮುಂಬೈ ಇಂಡಿಯನ್ಸ್ ತಂಡ ನಿನ್ನೆ ನಡೆದಿರುವ ಪಂದ್ಯದಲ್ಲಿ ಕ್ವಾಲಿಫಯರ್ ಪಂದ್ಯವನ್ನು ಗೆದ್ದು ಬಿಗಿದೆ. ಮೊದಲು ಬ್ಯಾಟಿಂಗ್ ಮಾಡಿದ ಮುಂಬೈ ಇಂಡಿಯನ್ ತಂಡ ಗ್ರೀನ್ ಹಾಗೂ ಸೂರ್ಯಕುಮಾರ್ ಯಾದವ್ ರವರ ಬ್ಯಾಟಿಂಗ್ ಪ್ರದರ್ಶನ ನೆರವಿನಿಂದಾಗಿ 20 ಓವರ್ ಗಳಲ್ಲಿ ಎಂಟು ವಿಕೆಟ್ ನಷ್ಟಕ್ಕೆ 182 ರನ್ನುಗಳನ್ನು ಪೇರಿಸಿತ್ತು.

183 ರನ್ನುಗಳ ಟಾರ್ಗೆಟ್ ಅನ್ನು ಪಡೆದ ಲಕ್ನೋ ತಂಡ ಆರಂಭಿಕ ವಿಕೆಟ್ ನಿಂದಲೇ ಸರ್ವ ಪತನವನ್ನು ಕಾಣುತ್ತಾ ಬಂತು. ತಂಡದ ಪರವಾಗಿ ಅತ್ಯುತ್ತಮವಾಗಿ ಬ್ಯಾಟಿಂಗ್ ಮಾಡಿದ ಏಕೈಕ ಆಟಗಾರ ಎಂದರೇ ಅದು ಸ್ಟೋಯ್ನೀಸ್(Stoinis). ಇದೆಲ್ಲದಕ್ಕೂ ಕಾರಣವಾಗಿದ್ದು ಮುಂಬೈ ಇಂಡಿಯನ್ಸ್ ತಂಡದ ಒಬ್ಬ ವೇಗಿ.

ಹೌದು ಈ ಬಾರಿ ಮೊದಲ ಬಾರಿಗೆ ಸೀಸನ್ ಅನ್ನು ಆಡುತ್ತಿರುವ ಮುಂಬೈ ಇಂಡಿಯನ್ಸ್ ತಂಡದ ವೇಗಿ ಆಗಿರುವಂತಹ ಆಕಾಶ್ ಮದ್ವಾಲ್(Akash Madhwal) ಕೇವಲ ಐದು ರನ್ನುಗಳಿಗೆ 5 ವಿಕೆಟ್ ಕೀಳುವ ಮೂಲಕ ಲಕ್ನೋ ತಂಡದ ಸೋಲಿಗೆ ಕಾರಣವಾಗಿದ್ದು ಗೌತಮ್ ಗಂಭೀರ್(Gautam Gambhir) ಹುಡುಗರು ಈ ಟೂರ್ನಮೆಂಟ್ ಇಂದ ಈ ವರ್ಷ ಹೊರಹೋಗುವಂತೆ ಮಾಡಿದ್ದಾರೆ.

Leave a Comment

error: Content is protected !!