ಇನ್ಸ್ಟಾಗ್ರಾಮ್ ನ ಒಂದು ಪೋಸ್ಟ್ ಗೆ ವಿರಾಟ್ ಕೊಹ್ಲಿ ಪಡೆಯುವ ಸಂಭಾವನೆ ಎಷ್ಟು ಕೋಟಿ???

ವಿರಾಟ್ ಕೊಹ್ಲಿ ಅವರು ಭಾರತದ ಅಂತರಾಷ್ಟ್ರೀಯ ಕ್ರಿಕೆಟ್ ಆಟಗಾರ. ಇವರು ಡೊಮೆಸ್ಟಿಕ್ ಕ್ರಿಕೆಟ್ ನಲ್ಲಿ ದೆಹಲಿ ಪರ ಮತ್ತು ಇಂಡಿಯನ್ ಪ್ರೀಮಿಯರ್ ಲೀಗ್ ಕ್ರಿಕೆಟ್ನಲ್ಲಿ ರಾಯಲ್ ಚಾಲೆಂಜರ್ಸ್ ಬ್ಯಾಂಗಲೋರ್ ಪರ ಬಲಗೈಯಲ್ಲಿ ಬ್ಯಾಟ್ ಹಿಡಿದು ಅಬ್ಬರಿಸುತ್ತಾರೆ. ಐಸಿಸಿ ವರ್ಲ್ಡ್ 20-20ಯಲ್ಲಿ ಎರಡು ಬಾರಿ ‘ಮ್ಯಾನ್ ಆಫ್ ದಿ ಟೂರ್ನಮೆಂಟ್’ ಗೆದ್ದ ಹೆಗ್ಗಳಿಕೆ ಇವರದು. 2016ರಲ್ಲಿ ಇಎಸ್ಪಿಎನ್ ನ ಜಗತ್ತಿನ ಅತಿ ಹೆಚ್ಚು ಜನಪ್ರಿಯ ಅಥ್ಲೆಟಿಕ್ಸ್ ಆಟಗಾರರ ಪಟ್ಟಿಯಲ್ಲಿ ಇವರ ಹೆಸರು ಕಾಣಿಸಿತು. 2018ರಲ್ಲಿ ಟೈಮ್ ಮ್ಯಾಗಜಿನ್ ನಲ್ಲಿ ಇವರ ಹೆಸರು ‘100 ಇನ್ಫ್ಲುಎನ್ಶಿಯಲ್ ಪೀಪಲ್ ಇನ್ ದ ವರ್ಲ್ಡ್’ ಪಟ್ಟಿಯಲ್ಲಿ ಕಾಣಿಸಿತು. 2020ರ ಹೊತ್ತಿಗೆ ಇವರು ಜಗತ್ತಿನ 100 ಅತಿ ಹೆಚ್ಚು ಸಂಭಾವನೆ ಪಡೆಯುವ ಅಥ್ಲೆಟಿಕ್ಸ್ ಆಟಗಾರನಾಗಿ ಗುರುತಿಸಿಕೊಂಡಿದ್ದರು.

ಅರ್ಜುನ ಅವಾರ್ಡ್, ಪದ್ಮಶ್ರೀ ಅವಾರ್ಡ್ ಮತ್ತು ರಾಜೀವ್ ಗಾಂಧಿ ಖೇಲ್ ರತ್ನ ಅವಾರ್ಡ್ ಗಳನ್ನು ಪಡೆದಿರುವ ಇವರಿಗೆ ಅತಿ ಹೆಚ್ಚು ಅಭಿಮಾನಿಗಳಿದ್ದಾರೆ. ಕೊಹ್ಲಿಯಂತೆ ಹೇರ್ ಸ್ಟೈಲ್ ಮಾಡಿ ಬೀಗುವವರು ಭಾರತದ ಗಲ್ಲಿ ಗಲ್ಲಿಯಲ್ಲಿ ಕಾಣಸಿಗುತ್ತಾರೆ. ಇವರಿಗೆ ಭಾರತೀಯರಷ್ಟೇ ಅಲ್ಲದೆ ಬೇರೆ ಬೇರೆ ದೇಶಗಳ ಅಭಿಮಾನಿಗಳೂ ಇದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಆಕ್ಟಿವ್ ಆಗಿರುವ ಇವರಿಗೆ ಹೆಚ್ಚಿನ ಸಂಖ್ಯೆಯಲ್ಲಿ ಫಾಲೋವರ್ಸ್ ಗಳಿದ್ದಾರೆ.

ಭಾರತದ ಕ್ರಿಕೆಟ್ ಟೀಮ್ ಗೆ ನಾಯಕನಾಗಿ 2013 ರಿಂದ 2020ರ ವರೆಗೆ ಕಾರ್ಯನಿರ್ವಹಿಸಿದ್ದಾರೆ. ಮಾಜಿ ನಾಯಕನಾದರೂ ಇವರಿಗೆ ಬೇಡಿಕೆಗಳೇನು ಕಮ್ಮಿಯಾಗಿಲ್ಲ. ದೊಡ್ಡ ದೊಡ್ಡ ಕಂಪನಿಯವರು ಅವರ ಪ್ರಾಡಕ್ಟ್ ಗಳ ಪ್ರಚಾರಕ್ಕಾಗಿ ಜಾಹೀರಾತುದಾರರಾಗಿ ಕೊಹ್ಲಿ ಅವರನ್ನು ಕರೆಯುತ್ತಲೇ ಇರುತ್ತಾರೆ. ಅತಿ ಹೆಚ್ಚು ಬ್ರ್ಯಾಂಡ್ ಅನುಮೋದನೆಗಳನ್ನು ಹೊಂದಿರುವ ಕ್ರಿಕೆಟ್ ಆಟಗಾರರ ಪಟ್ಟಿಯಲ್ಲಿ ಇವರೇ ಮೊದಲಿಗರು. ಮುಂದೆ ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಟಿ20 ಪಂದ್ಯದಲ್ಲಿ ವಿರಾಟ್ ಕೊಹ್ಲಿ ಅವರು ಭಾರತ ತಂಡದ ಪ್ರಮುಖ ಆಟಗಾರರಾಗಿರುತ್ತಾರೆ. ದಕ್ಷಿಣ ಆಫ್ರಿಕಾದ ಟಿ20 ಸರಣಿಯ ಬಳಿಕ ಅಕ್ಟೋಬರ್ 6 ರಂದು ಆಸ್ಟ್ರೇಲಿಯಾಕ್ಕೆ ತೆರಳಲಿರುವ ಭಾರತ ಕ್ರಿಕೆಟ್ ತಂಡವು ಅಕ್ಟೋಬರ್ 13 ರವರೆಗೆ ಪರ್ತ್ ನಲ್ಲಿ ವಿಶೇಷ ತರಬೇತಿ ಪಡೆಯಲಿದೆ. ಭಾರತಕ್ಕಾಗಿ ಪಂದ್ಯವನ್ನು ಗೆಲ್ಲುವ ಎಲ್ಲಾ ನಿರೀಕ್ಷೆ ಇದೆ.

ವಿರಾಟ್ ಕೊಹ್ಲಿ ಅವರ ಜನಪ್ರಿಯತೆ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಸೋಶಿಯಲ್ ಮೀಡಿಯಾಗಳಲ್ಲಿ ಫಾಲೋವರ್ಸಗಳ ಸಂಖ್ಯೆ ಹೆಚ್ಚಾಗುತ್ತಿದೆ. ಅದಕ್ಕಾಗಿ ವರ್ಷದಿಂದ ವರ್ಷಕ್ಕೆ ಅವರು ಪಡೆಯುವ ಮೊತ್ತದಲ್ಲಿದಲ್ಲಿಯೂ ಏರಿಕೆ ಕಾಣಬಹುದು. ಅತಿ ಹೆಚ್ಚು ಫಾಲ್ಲೋವರ್ಸ್ ಗಳನ್ನು ಹೊಂದಿರುವ ಭಾರತೀಯ ಆಟಗಾರ ಎಂದರೆ ವಿರಾಟ್ ಕೊಹ್ಲಿ. ಇನ್ಸ್ಟಾಗ್ರಾಮ್ ನಲ್ಲಿ ಇವರ ಫಾಲೋವರ್ಸ್ ಗಳ ಸಂಖ್ಯೆ ನೋಡಿದ ಕೂಡಲೇ ಒಮ್ಮೆ ನೀವು ನಿಮ್ಮ ಬೆರಳುಗಳಿಂದ ಬಿಡಿ, ಹತ್ತು, ನೂರು ಎಂದು ಲೆಕ್ಕ ಹಾಕ್ತಿರಾ.

ಭಾರತದ ಮಾಜಿ ನಾಯಕ 200,703,169 ಫಾಲೋವರ್ಸ್ ಗಳನ್ನು ಹೊಂದಿದ್ದಾರೆ .ಇದು ದಿನದಿಂದ ದಿನಕ್ಕೆ ಬೆಳೆಯುತ್ತಲೇ ಹೋಗುತ್ತೆ. ಇಷ್ಟೊಂದು ಜನಪ್ರಿಯವಾಗಿರುವ ಇವರು ಇನ್ಸ್ಟಾಗ್ರಾಮ್ ನ ಒಂದು ಪೋಸ್ಟ್ ಗೆ ಸುಮಾರು 1.088,000 ಯುಎಸ್ಡಿ ಗಳನ್ನು ಪಡೆಯುತ್ತಾರೆ. ಅಂದರೆ, 8.9 ಕೋಟಿ ಮೊತ್ತವು ಒಂದು ಪೋಸ್ಟ್ ಗೆ ಇವರಿಗೆ ದೊರಕುತ್ತದೆ. ಇನ್ಸ್ಟಾಗ್ರಾಮ್ ನಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ಟಾಪ್ 15 ಸೆಲೆಬ್ರಿಟಿಗಳ ಲಿಸ್ಟಿನಲ್ಲಿ ಇವರೂ ಇದ್ದಾರೆ.

Leave a Comment

error: Content is protected !!