ಮೈದಾನದಲ್ಲಿ ಹಿರಿಯ ಆಟಗಾರನನ್ನು ನಿಂದನೆ ಮಾಡಿದ ಹಾರ್ದಿಕ್ ಪಾಂಡ್ಯ. ಹಾರ್ದಿಕ್ ಪಾಂಡ್ಯ ಮೇಲೆ ಕೋಪಗೊಂಡ ನೆಟ್ಟಿಗರು

ಕ್ರಿಕೆಟ್ ಮೈದಾನದಲ್ಲಿ ಆಟಗಾರರ ರೋಷ ಆವೇಶ ಹರುಷ ಎಲ್ಲವೂ ಅತಿರೇಕದಲ್ಲಿರುತ್ತೆ. ಕೋಪ ಮತ್ತು ತಾಳ್ಮೆಯನ್ನು ಕಂಟ್ರೋಲ್ ಮಾಡುವುದು ಮೈದಾನದಲ್ಲಿ ಕಷ್ಟದ ಕೆಲಸ. ಅದರಲ್ಲೂ ವಿಶೇಷವಾಗಿ ನಾಯಕನಿಗೆ ಜವಾಬ್ದಾರಿ ತುಂಬಾ ಇರುತ್ತೆ. ಹಾಗೆ ನಾಯಕನಿಗೆ ಒತ್ತಡಗಳು ಕೂಡ ಬಿಗಿಯಾಗಿರುತ್ತದೆ. ಸಹ ಆಟಗಾರರನ್ನು ನಿಭಾಯಿಸಿಕೊಂಡು ತಂಡವನ್ನು ಮುನ್ನಡೆಸುವುದು ಸುಲಭದ ಕೆಲಸವಲ್ಲ.ತಂಡದ ನಾಯಕರು ಪಡುತ್ತಿರುವ ಕಷ್ಟವನ್ನು ಈಗ ನಾವೆಲ್ಲ ಐಪಿಎಲ್ ಬಾಟಲಿ ನೋಡುತ್ತಿದ್ದೇವೆ.

ಈ ವರ್ಷ ವಿಶೇಷವಾಗಿ ಎರಡು ಹೊಸ ಐಪಿಎಲ್ ತಂಡವು ಸೇರ್ಪಡೆಯಾಗಿದೆ ಲಕ್ನೋ ಮತ್ತು ಗುಜರಾತ್ ಟೈಟನ್ಸ್ ಎಂಬ ಎರಡು ಹೊಸದಾದ ಟೀಮ್ ಗಳು ಸೇರಿಕೊಂಡಿವೆ. ಗುಜರಾತ್ ಟೈಟನ್ಸ್ ತಂಡದ ನಾಯಕ ಹಾರ್ದಿಕ್ ಪಾಂಡ್ಯ ಅವರು. ಈ ಸಲ ಹಾರ್ದಿಕ್ ಪಾಂಡ್ಯ ಅವರ ಅದೃಷ್ಟ ಮತ್ತು ಪ್ರದರ್ಶನ ಎರಡೂ ಚೆನ್ನಾಗಿದೆ. ಇವರು ಆಡಿದ ನಾಲ್ಕು ಮ್ಯಾಚುಗಳಲ್ಲಿ ಮೂರು ಗೆಲುವು ಸಾಧಿಸಿದ್ದಾರೆ ಮತ್ತು ಒಂದೇ ಒಂದು ಮ್ಯಾಚನ್ನು ಸೋಲು ಅನುಭವಿಸಿದ್ದಾರೆ. ಹೊಸ ತಂಡವನ್ನು ಗಾಂಭೀರ್ಯದಿಂದ ಮುನ್ನಡೆಸಿಕೊಂಡು ಹೋಗುತ್ತಿರುವ ಹಾರ್ದಿಕ್ ಪಾಂಡ್ಯ ರ ಕ್ಯಾಪ್ ನಾಯಕತ್ವವನ್ನು ಎಲ್ಲರೂ ಹೊಗಳುತ್ತಿದ್ದಾರೆ.

ಆದರೆ ಮೈದಾನದಲ್ಲಿ ಹಾರ್ದಿಕ್ ಪಾಂಡ್ಯ ಅವರು ನಾಯಕರಾಗಿ ಸಹ ಆಟಗಾರರ ಜೊತೆ ನಡೆದುಕೊಂಡ ಅಶಿಸ್ತು ಮತ್ತು ಅಸಂಬದ್ಧ ನಡವಳಿಕೆ ಹಲವು ಜನರಿಗೆ ಇಷ್ಟವಾಗುತ್ತಿಲ್ಲ. ಹಾರ್ದಿಕ್ ಪಾಂಡ್ಯ ನಾಯಕನಾದರೂ ಸಹ ಅವರ ತಂಡದಲ್ಲಿ ಹಲವಾರು ಹಿರಿಯ ಆಟಗಾರ ರಿದ್ದಾರೆ. ಹಾರ್ದಿಕ್ ಪಾಂಡ್ಯ ಅವರು ಮೈದಾನದಲ್ಲಿದ್ದಾಗ ತನ್ನ ಹಿರಿಯ ಆಟಗಾರರಿಗೆ ಮರ್ಯಾದೆ ಕೊಡೋದನ್ನ ಇನ್ನೂ ಕಲಿತಿಲ್ಲ. ತನ್ನ ಹಳೇ ಚಾಳಿಯನ್ನು ಮುಂದುವರೆಸಿಕೊಂಡು ಹೋಗುತ್ತಿದ್ದಾರೆ.

ಮೊನ್ನೆ ನಡೆದ ಗುಜರಾತ್ ಟೈಟನ್ಸ್ ಮತ್ತು ಸನ್ ರೈಸರ್ಸ್ ಹೈದರಾಬಾದ್ ತಂಡದ ವಿರುದ್ಧ ನಡೆದ ಮ್ಯಾಚ್ ನಲ್ಲಿ ಹಾರ್ದಿಕ್ ಪಾಂಡ್ಯ ಮೊಹಮ್ಮದ್ ಶಮಿ ಅವರ ಜೊತೆ ನಡೆದುಕೊಂಡ ರೀತಿ ಅಸಂಬದ್ಧವಾಗಿತ್ತು. ಗುಜರಾತ್ ಟೈಟನ್ಸ್ ಮೊದಲು ಬ್ಯಾಟಿಂಗ್ ಮಾಡಿ 162 ರನ್ ಗಳ ಮೊತ್ತವನ್ನು ಕಲೆಹಾಕಿದ್ದರು. ಈ ಮ್ಯಾಚ್ ನಲ್ಲಿ ಹಾರ್ದಿಕ್ ಪಾಂಡ್ಯ ಅವರು ಅರ್ಧ ಶತಕವನ್ನು ಸಿಡಿಸಿ ನಾಟೌಟ್ ಆಗಿದ್ದರು. ಎರಡನೆಯ ಬ್ಯಾಟಿಂಗ್ ಮಾಡಿದ ಸನ್ ರೈಸರ್ಸ್ ಹೈದ್ರಾಬಾದ್ ಅವರು 162 ರನ್ ಗಳನ್ನು ಚೇಸ್ ಮಾಡುತ್ತಿದ್ದರು. 13 ನೇ ಓವರ್ ನಲ್ಲಿ ನಾಯಕ ಹಾರ್ದಿಕ್ ಪಾಂಡ್ಯ ಬೌಲಿಂಗ್ ಮಾಡುತ್ತಿದ್ದರು. ಕೇನ್ ವಿಲಿಯಮ್ಸನ್ ಮತ್ತು ರಾಹುಲ್ ತ್ರಿಪಾಠಿ ಅವರು ಬ್ಯಾಟಿಂಗ್ ಮಾಡುತ್ತಿದ್ದರು. ಹಾರ್ದಿಕ್ ಪಾಂಡ್ಯ ಅವರ ಬೌಲ್ ಗೆ ಸತತವಾಗಿ ಎರಡು ಸಿಕ್ಸರ್ ಗಳನ್ನು ವಿಲಿಯಮ್ಸನ್ ಅವರು ಬಾರಿಸಿದ್ದರು.

ತದನಂತರ ರಾಹುಲ್ ತ್ರಿಪಾಠಿ ಅವರು ಕೂಡ ಹಾರ್ದಿಕ್ ಪಾಂಡ್ಯ ಅವರ ಬಾಲ್ ಗೆ ಸಿಕ್ಸರ್ ಹೊಡೆಯಬೇಕೆಂದು ಜೋರಾಗಿ ಹೊಡೆಯುತ್ತಾರೆ. ಆಗ ಬೌಲ್ ಶಮಿ ಅವರ ಕೈಗೆ ಕ್ಯಾಚ್ ಬರುತ್ತೆ. ಆದರೆ ಶಮಿ ಅವರು ಕ್ಯಾಚ್ ಹಿಡಿಯುವ ಬದಲು ಬಾಲ್ ಅನ್ನು ಬೌಂಡರಿಗೆ ಗಡಿಗೆ ಹೋಗದಂತೆ ತಳ್ಳುತ್ತಾರೆ. ಇದರಿಂದ ಹಾರ್ದಿಕ್ ಪಾಂಡ್ಯ ಅವರು ತಕ್ಷಣ ಕೋಪಗೊಳ್ಳುತ್ತಾರೆ ಮತ್ತು ಶಮಿ ಅವರಿಗೆ ಮೈದಾನದಲ್ಲೇ ಬೈಗುಳದ ನಿಂದನೆ ಗಳನ್ನು ಹೇಳಿದ್ದಾರೆ. ಹಾರ್ದಿಕ್ ಪಾಂಡ್ಯ ಕೇವಲ ಹಿರಿಯ ಆಟಗಾರ ಮತ್ತು ಭಾರತೀಯ ದಂತಕಥೆ ಮೊಹಮ್ಮದ್ ಅವರನ್ನು ಅವಮಾನಿಸಿದ್ದಾರೆ ಎಂದು ನಂಬಲು ಸಾಧ್ಯವಿಲ್ಲ. ಅಪಾಯಕಾರಿ ಕ್ಯಾಚ್ ತೆಗೆದುಕೊಳ್ಳದ ಶಮಿ ಬೌಂಡರಿ ಉಳಿಸಲು ಆದ್ಯತೆ ನೀಡಿದರು. ಇಕ್ಕಟ್ಟಿನ ಸಂದರ್ಭಗಳಲ್ಲಿ ಹಾರ್ದಿಕ್‌ನ ಕೋಪೋದ್ರೇಕಗಳು ಸಂಪೂರ್ಣವಾಗಿ ಭಯಭೀತವಾಗಿವೆ ಎಂದು ನೆಟ್ಟಿಗರು ಅಭಿಪ್ರಾಯ ತಿಳಿಸಿದ್ದಾರೆ.

Leave a Comment

error: Content is protected !!