IPL 2023: ಗುಜರಾತ್ ವಿರುದ್ಧದ ಮೊದಲ ಪಂದ್ಯಕ್ಕೂ ಮುನ್ನವೇ ಧೋನಿ ನೇತೃತ್ವದ ಚೆನ್ನೈಗೆ ಸೂಪರ್ ಶಾ’ ಕ್!

GT Vs Csk ಇಂದು ಸಂಜೆ ನಿಮಗೆಲ್ಲರಿಗೂ ಗೊತ್ತಿರುವ ಹಾಗೆ ಇಡೀ ವಿಶ್ವದಲ್ಲಿ ಅತ್ಯಂತ ದೊಡ್ಡ ಕ್ರಿಕೆಟ್ ಹಬ್ಬವಾಗಿರುವ ಐಪಿಎಲ್ ನ 2023ರ ಅವತರಣಿಕೆ ಪ್ರಾರಂಭವಾಗಲಿದೆ. ಉದ್ಘಾಟನಾ ಪಂದ್ಯದಲ್ಲಿಯೇ ಕಳೆದ ಬಾರಿಯ ವಿಜೇತ ತಂಡವಾಗಿರುವ ಗುಜರಾತ್ ಟೈಟನ್ಸ್ ಹಾಗೂ ನಾಲ್ಕು ಬಾರಿ ಚಾಂಪಿಯನ್ ಆಗಿರುವಂತಹ ಮಹೇಂದ್ರ ಸಿಂಗ್ ಧೋನಿ(Mahendra Singh Dhoni) ನಾಯಕತ್ವದ ಚೆನ್ನೈ ತಂಡ ಸೆಣೆಸಾಡಲಿವೆ.

ಕಳೆದ ಬಾರಿ ಹಾರ್ದಿಕ್ ಪಾಂಡ್ಯ(Hardik Pandya) ನೇತೃತ್ವದಲ್ಲಿ ಗುಜರಾತ್ ಟೈಟನ್ಸ್ ತಂಡ ಪಾದಾರ್ಪಣೆ ಮಾಡಿದ ಮೊದಲ ಸೀಸನ್ ನಲ್ಲಿಯೇ ಕಪ್ ಗೆದ್ದು ಬೀಗಿತ್ತು. ಇನ್ನು ಈ ಬಾರಿ ಕೂಡ ತಂಡ ಬಲಿಷ್ಠ ವಾಗಿದ್ದು ಕಪ್ಪು ಗೆಲ್ಲುವಂತಹ ಫೇವರೆಟ್ ತಂಡಗಳಲ್ಲಿ ಕೂಡ ಒಂದಾಗಿದೆ ಎನ್ನುವುದನ್ನು ಎರಡು ಮಾತಿಲ್ಲದೆ ಹೇಳಬಹುದಾಗಿದೆ. ಇನ್ನು ಚೆನ್ನೈ ತಂಡ ಕೂಡ ಯಾವುದೇ ತಂಡಗಳಿಗೆ ಹಿಂದೆ ಬಿದ್ದಿಲ್ಲ.

ಇನ್ನು ಈ ಬಾರಿ ಮಹೇಂದ್ರ ಸಿಂಗ್ ಧೋನಿ(MS Dhoni) ರವರೆ ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕತ್ವವನ್ನು ವಹಿಸಿಕೊಂಡಿದ್ದು ಹಲವಾರು ಮೂಲಗಳ ಪ್ರಕಾರ ಈ ಐಪಿಎಲ್ ಅವರ ಕೊನೆಯ ಐಪಿಎಲ್ ಆಗಿರಲಿದ್ದು ತಂಡ ಸರ್ವ ರೀತಿಯಲ್ಲಿ ಕೂಡ ಪರಿಶ್ರಮವನ್ನು ಪಡಲಿದೆ ಎನ್ನುವುದಾಗಿ ತಿಳಿದು ಬಂದಿದೆ ಆದರೆ ಈ ಬಾರಿಯ ಐಪಿಎಲ್ ಪ್ರಾರಂಭ ಆಗುವುದಕ್ಕೂ ಮುನ್ನವೇ ತಂಡಕ್ಕೆ ಮತ್ತೊಂದು ಹೊ’ ಡೆತ ಬಿದ್ದಿದೆ.

ಹೌದು ಮಿತ್ರರೇ, ಬ್ಯಾಟಿಂಗ್ನಲ್ಲಿ ಬಲಿಷ್ಠ ವಾಗಿರುವ ಚೆನ್ನೈ ತಂಡದ ಬೌಲಿಂಗ್ ಜೀವಾಳ ಆಗಿದ್ದಂತಹ ಮುಕೇಶ್ ಚೌದರಿ(Mukesh Choudhary) ಇಂಜುರಿ ಕಾರಣದಿಂದಾಗಿ ಈ ಬಾರಿ ಐಪಿಎಲ್ ಪ್ರಾರಂಭ ಆಗುವುದಕ್ಕೂ ಮುನ್ನವೇ ತಂಡವನ್ನು ಬಿಡಬೇಕಾಗಿದೆ. ಹೀಗಾಗಿ ಈ ಬಾರಿ ಬೌಲಿಂಗ್ ವಿಭಾಗದಲ್ಲಿ ಇದು ತಂಡಕ್ಕೆ ಕೊರತೆಯ ರೀತಿಯಲ್ಲಿ ಕಾಣಿಸಬಹುದು ಎನ್ನುವುದಾಗಿ ಕ್ರಿಕೆಟ್ ಪಂಡಿತರು ಲೆಕ್ಕಾಚಾರ ಹಾಕಿದ್ದಾರೆ. ಈ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು ಕಾಮೆಂಟ್ ಮೂಲಕ ತಿಳಿಸಿ.

Leave a Comment

error: Content is protected !!