MS Dhoni: ಸಾಕಷ್ಟು ವರ್ಷಗಳ ನಂತರ ಧೋನಿಯ ಮೇಲೆ ಶಾ’ ಕಿಂಗ್ ಹೇಳಿಕೆ ನೀಡಿ ಸುದ್ದಿ ಆಗ್ತಿದ್ದಾರೆ ದಿನೇಶ್ ಕಾರ್ತಿಕ್! ಹೇಳಿರುವುದೇನು ಗೊತ್ತಾ?

Dinesh Kartik ಮಹೇಂದ್ರ ಸಿಂಗ್ ಧೋನಿ(Mahendra Singh Dhoni) ಭಾರತೀಯ ಕ್ರಿಕೆಟ್ ಕಂಡಂತಹ ಅತ್ಯಂತ ಯಶಸ್ವಿ ನಾಯಕ ಎನ್ನುವುದರಲ್ಲಿ ಎರಡು ಮಾತಿಲ್ಲ. ಮೊದಲ ಬಾರಿಗೆ 2007 ರಲ್ಲಿ ನಡೆದಂತಹ ಟಿ 20 ವಿಶ್ವಕಪ್ ಅನ್ನು ಯುವ ತಂಡದೊಂದಿಗೆ ಮೊದಲ ಬಾರಿಗೆ ನಾಯಕನಾಗಿ ಮುನ್ನಡೆಸಿ ವಿಶ್ವಕಪ್ ಗೆಲ್ಲುವ ಮೂಲಕ ದಾಖಲೆಯನ್ನು ಸೃಷ್ಟಿಸಿದರು. 2011 ರಲ್ಲಿ ಏಕದಿನ ವಿಶ್ವಕಪ್ ಗೆದ್ದು ತಮ್ಮ ನಾಯಕತ್ವದ ಸಾಮರ್ಥ್ಯವನ್ನು ಇಡೀ ಕ್ರಿಕೆಟ್ ಜಗತ್ತಿಗೆ ಸಾಬೀತುಪಡಿಸಿದ್ದರು ನಮ್ಮೆಲ್ಲರ ನೆಚ್ಚಿನ ಮಹೇಂದ್ರ ಸಿಂಗ್ ಧೋನಿ.

ಚಾಂಪಿಯನ್ ಟ್ರೋಫಿ ಹಾಗೂ ಟೆಸ್ಟ್ ಚಾಂಪಿಯನ್ಶಿಪ್ ಅನ್ನು ಕೂಡ ಗೆಲ್ಲುವ ಮೂಲಕ ತಮ್ಮ ಗೆಲುವಿನ ಕಿರೀಟಕ್ಕೆ ಮತ್ತೆರಡು ಗರಿಗಳನ್ನು ಸೇರಿಸಿಕೊಳ್ಳುತ್ತಾರೆ. ಐಪಿಎಲ್(IPL) ನಲ್ಲಿ ಕೂಡ ಚೆನ್ನೈ ಪರವಾಗಿ ಐಪಿಎಲ್ ಹಾಗೂ ಚಾಂಪಿಯನ್ ಲೀಗ್ ನಲ್ಲಿ ನಾಲ್ಕು ಬಾರಿ ಚಾಂಪಿಯನ್ ಪಟ್ಟವನ್ನು ಗೆದ್ದಂತಹ ಸಾಧನೆ ಮಾಡಿರುವ ಮೇರು ನಾಯಕತ್ವವನ್ನು ಈಗಾಗಲೇ ಧೋನಿ ತೋರ್ಪಡಿಸಿದ್ದಾರೆ. ಸದ್ಯಕ್ಕೆ ಧೋನಿ ಅವರ ನಿವೃತ್ತಿಯ ನಂತರ ತಂಡದಲ್ಲಿ ಇತ್ತೀಚಿನ ದಿನಗಳಲ್ಲಿ ಕೀಪರ್ ಆಗಿ ಕಾಣಿಸಿಕೊಳ್ಳುತ್ತಿದ್ದ ದಿನೇಶ್ ಕಾರ್ತಿಕ್(Dinesh Karthik) ಧೋನಿ ಅವರ ಬಗ್ಗೆ ಒಂದು ಹೇಳಿಕೆಯನ್ನು ನೀಡಿದ್ದಾರೆ.

ಅಷ್ಟಕ್ಕೂ ಧೋನಿ(Dhoni) ಅವರ ಬಗ್ಗೆ ದಿನೇಶ್ ಕಾರ್ತಿಕ್ ನೀಡಿರುವ ಹೇಳಿಕೆ ಏನು ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ. ” ಮೊದಲಿಗೆ ನಾನು ಭಾರತೀಯ ಕ್ರಿಕೆಟ್ ತಂಡಕ್ಕೆ ಆಯ್ಕೆಯಾಗಿದ್ದೆ. ಆ ಸಂದರ್ಭದಲ್ಲಿ ಇಂಡಿಯಾ ಎ ತಂಡದ ಪರವಾಗಿ ಧೋನಿ ಅದ್ಭುತ ಪ್ರದರ್ಶನವನ್ನು ನೀಡುತ್ತಾರೆ. ಅದಾದ ನಂತರ ಧೋನಿ ಹಿಂದಿರುಗಿ ನೋಡಿದ್ದೇ ಇಲ್ಲ ಇಡೀ ಭಾರತೀಯ ಕ್ರಿಕೆಟ್ ಇತಿಹಾಸದಲ್ಲಿ ಅದನ್ನು ಧೋನಿ ಮೇನಿಯ(Dhoni Mania) ಎಂದು ಕರೆಯಬಹುದಾಗಿದೆ. ಇದರ ಬಗ್ಗೆ ನನಗೆ ಯಾವುದೇ ಪಶ್ಚಾತಾಪ ಇಲ್ಲ.

ತನಗೆ ಸಿಕ್ಕಂತಹ ಅವಕಾಶವನ್ನು ಸಂಪೂರ್ಣವಾಗಿ ಉಪಯೋಗಿಸಿಕೊಂಡು ಭಾರತ ಕ್ರಿಕೆಟ್ ತಂಡ ಕಂಡಂತಹ ನಂಬರ್ ಒನ್ ವಿಕೆಟ್ ಕೀಪರ್ ಬ್ಯಾಟ್ಸ್ಮನ್ ಹಾಗೂ ಅತ್ಯಂತ ಯಶಸ್ವಿ ನಾಯಕನಾಗಿ ಧೋನಿ ಅವರು ಕಾಣಿಸಿಕೊಂಡಿರುವುದು ನಿಜಕ್ಕೂ ಕೂಡ ನನಗೆ ಹೆಮ್ಮೆ ಇದೆ” ಎಂಬುದಾಗಿ ದಿನೇಶ್ ಕಾರ್ತಿಕ್ ಧೋನಿ ಅವರ ಬಗ್ಗೆ ಹೇಳಿಕೆಯನ್ನು ನೀಡಿದ್ದಾರೆ. ದಿನೇಶ್ ಕಾರ್ತಿಕ್ ಅವರ ಈ ನಿಸ್ವಾರ್ಥ ಮನೋಭಾವದ ಹೇಳಿಕೆಯನ್ನು ಕೇಳಿರುವ ಧೋನಿ ಅಭಿಮಾನಿಗಳು ಕೂಡ ದಿನೇಶ್ ಕಾರ್ತಿಕ್(Dinesh Karthik) ಅವರ ಬಗ್ಗೆ ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ.

Leave a Comment

error: Content is protected !!