KL Rahul: ಮೊದಲ ಪಂದ್ಯದಲ್ಲಿ ಫಿಫ್ಟಿ ಚಚ್ಚುತ್ತಿದ್ದಂತೆ ರಾಹುಲ್ ಪತ್ನಿ ಅಥಿಯಾ ಶೆಟ್ಟಿ ಹೇಳಿದ್ದೇನು ಗೊತ್ತಾ?

Athiya Shetty ಸಾಕಷ್ಟು ಸಮಯಗಳಿಂದ ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಕರ್ನಾಟಕ ಮೂಲದ ಭಾರತೀಯ ಕ್ರಿಕೆಟ್ ತಂಡದ ಭರವಸೆಯ ಬ್ಯಾಟ್ಸ್ಮನ್ ಆಗಿರುವ ಕೆಎಲ್ ರಾಹುಲ್(KL Rahul) ರವರು ಅತ್ಯಂತ ಕಳಪೆ ಫಾರ್ಮ್ ನಲ್ಲಿದ್ದರು. ಇದೇ ಕಾರಣಕ್ಕಾಗಿ ಅವರನ್ನು ತಂಡದ ಉಪನಾಯಕನ ಸ್ಥಾನದಿಂದ ಕಿತ್ತು ಹಾಕಿರುವುದು ಕೂಡ ಈಗಾಗಲೇ ನಡೆದಿದೆ. ಒಟ್ಟಾರೆಯಾಗಿ ಈ ವರ್ಷದ ಆರಂಭದಿಂದಲೂ ಕೂಡ ಕೆಎಲ್ ರಾಹುಲ್ ರವರ ಗ್ರಹಚಾರವೇ ಸರಿಯಿಲ್ಲ ಎಂದರು ಕೂಡ ತಪ್ಪಾಗಲಾರದು.

ಕ್ರಿಕೆಟ್ ತಂಡದ ಸಾಮಾನ್ಯ ಬ್ಯಾಟ್ಸ್ಮನ್ ಸ್ಥಾನದಿಂದಲೂ ಕೂಡ ವಂಚಿತರಾಗುವ ಸಾಧ್ಯತೆಯನ್ನು ಎದುರಿಸಿದ್ದ ಕೆ ಎಲ್ ರಾಹುಲ್ ಅವರು ಈಗಾಗಲೇ ಆಸ್ಟ್ರೇಲಿಯಾ ವಿರುದ್ಧ ಮೊದಲ ಏಕದಿನ ಪಂದ್ಯದಲ್ಲಿ ಅರ್ಧಶತಕವನ್ನು ಬಾರಿಸುವ ಮೂಲಕ ಆಯ್ಕೆಗಾರರಿಗೆ ನೆಮ್ಮದಿ ನೀಡುವಂತಹ ಕೆಲಸವನ್ನು ಮಾಡಿದ್ದಾರೆ. ಇದರ ಬೆನ್ನಲ್ಲೇ ಅವರ ಪತ್ನಿಯಾಗಿರುವ ಅಥಿಯಾ ಶೆಟ್ಟಿ(Athiya Shetty) ಅವರು ನೀಡಿರುವಂತಹ ಒಂದು ಹೇಳಿಕೆ ವೈರಲ್ ಆಗುತ್ತಿದೆ.

ಮೊದಲ ಏಕದಿನ ಪಂದ್ಯದಲ್ಲಿ ಭಾರತ ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿ ಇದ್ದ ಸಂದರ್ಭದಲ್ಲಿ ಕೆ ಎಲ್ ರಾಹುಲ್ ತಾಳ್ಮೆಯಿಂದ ಬ್ಯಾಟಿಂಗ್ ಮಾಡಿ 75 ರನ್ನುಗಳನ್ನು ಗಳಿಸುವ ಮೂಲಕ ಭಾರತೀಯ ಕ್ರಿಕೆಟ್ ತಂಡದ ಗೆಲುವಿಗೆ ಕಾರಣರಾಗಿದ್ದರು. ಈ ಪಂದ್ಯ ಮುಗಿದ ನಂತರ ಅವರ ಪತ್ನಿ ಆಗಿರುವ ಅಥಿಯ ಶೆಟ್ಟಿ(Athiya Shetty) ತನ್ನ ಗಂಡನ ಕುರಿದಂತೆ ಹೆಮ್ಮೆಯಿಂದ ಬರೆದುಕೊಂಡಿರುವ ರೀತಿ ಸೋಶಿಯಲ್ ಮೀಡಿಯಾದಲ್ಲಿ ಎಲ್ಲರ ಮೆಚ್ಚುಗೆಗೆ ಕಾರಣವಾಗಿದೆ.

ಕೆ ಎಲ್ ರಾಹುಲ್ ಅವರ ಕುರಿತಂತೆ ಹೆಮ್ಮೆಯಿಂದ ಮಾತನಾಡುತ್ತಾ ತಮ್ಮ ಸೋಶಿಯಲ್ ಮೀಡಿಯಾದ ಸ್ಟೋರಿಯಲ್ಲಿ ಅಥಿಯಾ ಶೆಟ್ಟಿ ಪ್ರತಿಯೊಂದು ಕಷ್ಟಗಳನ್ನು ದಾಟಿ ಹಿಂದಿರುಗಿ ಬರುವುದು ಹೇಗೆ ಎನ್ನುವುದನ್ನು ತಿಳಿದಿರುವಂತಹ ವ್ಯಕ್ತಿ ಎಂಬುದಾಗಿ ಕೆಎಲ್ ರಾಹುಲ್(KL Rahul) ಅವರ ಗುಣಗಾನವನ್ನು ಮಾಡಿದ್ದಾರೆ. ಸಾಕಷ್ಟು ಸಮಯಗಳಿಂದ ಕಳಪೆ ಫಾರ್ಮ್ ನಲ್ಲಿರುವ ಕೆಎಲ್ ರಾಹುಲ್ ಅವರಿಗೆ ಈ ಪ್ರದರ್ಶನ ನಿಟ್ಟುಸಿರು ಬಿಡುವಂತೆ ಮಾಡಿದೆ.

Leave a Comment

error: Content is protected !!