ಗಂಡನ ಪರಸ್ತ್ರಿ ಸವಾಹಸಕ್ಕೆ ಬೇಸತ್ತ ಹೆಂಡ್ತಿ ಏನ್ ಮಾಡಿದ್ದಾಳೆ ಗೊತ್ತಾ? ನಿಜಕ್ಕೂ ಮನಕುಲಕುವ ಘಟನೆ

Real Story ಒಬ್ಬ ಹೆಣ್ಣುಮಗಳನ್ನು ಮದುವೆ ಮಾಡಿಕೊಡುವುದಕ್ಕೆ ಆಕೆಯ ತಂದೆ ಹಾಗೂ ಕುಟುಂಬಸ್ಥರು(Family) ಎಷ್ಟು ಕಷ್ಟ ಪಡುತ್ತಾರೆ ಆದರೆ ಅವರನ್ನು ಮದುವೆಯಾದ ಗಂಡ ಮಾತ್ರ ಕೆಲವೊಮ್ಮೆ ಮಾಡುವಂತಹ ಅನಾಚಾರದಿಂದ ಆ ಹೆಣ್ಣು ಮಗು ಏನು ತಪ್ಪು ಮಾಡದಿದ್ದರೂ ಕೂಡ ತನ್ನ ಜೀವವನ್ನೇ ಕಳೆದುಕೊಳ್ಳಬೇಕಾದಂತಹ ಪರಿಸ್ಥಿತಿ ಹಲವಾರು ಬಾರಿ ಒದಗಿ ಬಂದಿರುವುದನ್ನು ನಾವು ಸೋಶಿಯಲ್ ಮೀಡಿಯ ಹಾಗೂ ಸುದ್ದಿ ಮಾಧ್ಯಮಗಳಲ್ಲಿ ಆಗಾಗ ಕೇಳುತ್ತಲೇ ಇರುತ್ತೇವೆ. ಈಗ ಅದಕ್ಕೆ ಮತ್ತೊಂದು ಪ್ರಕರಣ ಸೇರ್ಪಡೆಯಾಗಿದ್ದು ಪ್ರತಿಯೊಬ್ಬರೂ ಈ ವಿಚಾರವನ್ನು ಕೇಳಿದರೆ ಖಂಡಿತವಾಗಿ ಕಣ್ಣೀರು ಹಾಕುವುದರಲ್ಲಿ ಯಾವುದೇ ಅನುಮಾನವಿಲ್ಲ.

ಮಾಧುರಿ ಎನ್ನುವ 26 ವರ್ಷದ ಹೆಣ್ಣು ಮಗಳು 2016ರಲ್ಲಿ ಗುರುಪ್ರಸಾದ್ ಎನ್ನುವವನ ಜೊತೆಗೆ ಮದುವೆಯಾಗಿದ್ದರು. ಇಬ್ಬರು ಕೂಡ ವೃತ್ತಿಯಲ್ಲಿ ಸಾಫ್ಟ್ವೇರ್ ಇಂಜಿನಿಯರ್ ಗಳಾಗಿದ್ದು ಇವರಿಗೆ ಆರು ವರ್ಷದ ಮಗ ಕೂಡ ಇದ್ದ. ಮೊದಲಿನಿಂದಲೂ ಕೂಡ ಮಾಧುರಿಗೆ ಗುರುಪ್ರಸಾದ್ ಹಾಗೂ ಆತನ ಮನೆಯವರು ವರದಕ್ಷಿಣೆ ವಿಚಾರವಾಗಿ ಕಿರು’ಕುಳ ನೀಡುತ್ತಲೇ ಇದ್ದರು. ಕೇವಲ ಇಷ್ಟು ಮಾತ್ರವಲ್ಲದೇ ಪ್ರತಿಯೊಂದು ವಿಚಾರಗಳಿಗೂ ಮಾಧುರಿಯವರನ್ನು ಬಾಯಿಗೆ ಬಂದ ಹಾಗೆ ಬೈದು ಹ’ಲ್ಲೆಯನ್ನು ಮಾಡುತ್ತಲೇ ಇದ್ದರು ಎಂಬುದು ಕೂಡ ಈಗಾಗಲೇ ತಿಳಿದು ಬಂದಿದೆ.

ಇನ್ನು ಮಾಧುರಿ ಅವರು ತಮ್ಮ ಮಗನ ಬಸುರಿ(Pregnant) ಆಗಿದ್ದ ಸಂದರ್ಭದಲ್ಲಿ ಗುರುಪ್ರಸಾದ್ ಬೇರೆ ಮಹಿಳೆಯ ಜೊತೆಗೆ ಕೂಡ ಬೇಡದ ಸಂಬಂಧವನ್ನು ಇಟ್ಟುಕೊಂಡಿದ್ದಾರೆ ಎಂಬುದಾಗಿ ತಿಳಿದು ಬಂದಿದ್ದು ಈ ವಿಚಾರವಾಗಿ ದೊಡ್ಡ ರಾಧಾಂತವೇ ನಡೆದು ನಂತರ ಎರಡು ಕುಟುಂಬಸ್ಥರು ಸೇರಿ ರಾಜಿಸಂಧಾನ ಮಾಡಿ ಇನ್ನು ಮುಂದೆ ಗುರುಪ್ರಸಾದ್ ಆ ಮಹಿಳೆಯ ಜೊತೆಗೆ ಕಾಣಿಸಿಕೊಳ್ಳುವುದಿಲ್ಲ ಎಂಬುದಾಗಿ ಹೇಳಿದ್ದ. ಆದರೆ ನಂತರ ಮತ್ತೆ ಗುರುಪ್ರಸಾದ್ ಅದೇ ಹಳೆ ಚಾಳಿಯನ್ನು ಮುಂದುವರೆಸಿದ್ದ. ಇನ್ನು ಮಾಧುರಿಗೆ ಗಂಡನ ಮನೆಯಲ್ಲಿ ಕಿರುಕುಳವು ಕೂಡ ಮುಂದುವರೆಯುತ್ತದೆ.

ಇದೇ ಜನವರಿ 25ರಂದು ಮಾಧುರಿ ತಮ್ಮ ಮನೆಯವರಿಗೆ ಕರೆ ಮಾಡಿ ನನಗೆ ಇಲ್ಲಿ ಇರಲು ಸಾಧ್ಯವಾಗುವುದಿಲ್ಲ ನನ್ನನ್ನು ಕರೆದುಕೊಂಡು ಹೋಗಿ ಎಂಬುದಾಗಿ ಹೇಳಿದ್ದರು. ಅವರ ಮನೆಯವರು ಬರುವ ಒಳಗಾಗಿಯೇ ಮಾಧುರಿಗೆ ಆಕೆಯ ಗಂಡ ಹಾಗೂ ಅವರ ಮನೆಯವರು ರಾಸಾಯನಿಕವನ್ನು ಕುಡಿಸಿದ್ದರು. ಕೂಡಲೇ ಆಸ್ಪತ್ರೆಗೆ ದಾಖಲಿಸಿದ್ದರೂ ಕೂಡ ಇದೇ ಜನವರಿ 31 ರಂದು ಚಿಕಿತ್ಸೆ(Treatment) ಫಲಕಾರಿಯಾಗಿದೆ ಮಾದರಿ ತನ್ನ ಕೊನೆಯ ಉಸಿರನ್ನು ಎಳೆಯಬೇಕಾಗಿ ಬಂದಿದೆ. ಬಾಳಿ ಬದುಕಬೇಕಾಗಿದ್ದ ಹೆಣ್ಣುಮಗಳು ಗಂಡನ ಹಾಗೂ ಆತನ ಮನೆಯವರ ಹಣ ದಾಹ ಹಾಗೂ ಅನಾಚಾರಕ್ಕಾಗಿ ಈ ಲೋಕವನ್ನೇ ತ್ಯಜಿಸಬೇಕಾಗಿ ಬಂದಿದೆ. ಮಾಧುರಿಯ ಗಂಡ ಹಾಗೂ ಆತನ ಮನೆಯವರಿಗೆ ಕಾನೂನಾತ್ಮಕವಾಗಿ ತಕ್ಕ ಶಿಕ್ಷೆ ಸಿಗಲಿ ಎಂಬುದಾಗಿ ಆಶಿಸೋಣ ಹಾಗೂ ಇನ್ಯಾವ ಹೆಣ್ಣು ಮಗಳಿಗೂ ಕೂಡ ಈ ರೀತಿ ಆಗದಂತೆ ತಡೆಯೋಣ.

Leave a Comment

error: Content is protected !!