ಹೋಟೆಲ್ ನಲ್ಲಿ ಗ್ರಾಹಕ ಕೊಟ್ಟ ಟಿಪ್ಸ್ ಹಣದಿಂದ ಈತ ಏನು ಮಾಡಿದ್ದಾನೆ ಗೊತ್ತಾ? ಕಿವಿ ನೆಟ್ಟಗಾಗೋ ಸ್ಟೋರಿ ಇದು.

Real Story ತೆಲಂಗಾಣದ ಬಸ್ ಸ್ಟಾಪ್ ಪಕ್ಕದಲ್ಲೇ ಇರುವಂತಹ ಹೋಟೆಲ್ ಒಂದರಲ್ಲಿ ಮರಿಸ್ವಾಮಿ ಎನ್ನುವ 65 ವರ್ಷದ ವ್ಯಕ್ತಿ ಹಲವಾರು ವರ್ಷಗಳಿಂದ ಸಪ್ಲೈಯರ್ ಆಗಿ ಕೆಲಸ ಮಾಡಿಕೊಂಡಿದ್ದ. 35 ವರ್ಷಗಳಿಂದಲೂ ಮರಿಸ್ವಾಮಿ ಈ ಹೋಟೇಲ್ ನಲ್ಲಿ ಕೆಲಸ ಮಾಡುತ್ತಿದ್ದ. ಹೀಗಾಗಿ ಆ ಹೋಟೆಲ್ ಗೆ ಬರುವಂತಹ ಪ್ರತಿಯೊಬ್ಬರಿಗೂ ಕೂಡ ಮರಿಸ್ವಾಮಿ ಚಿರಪರಿಚಿತರಾಗಿದ್ದಾರೆ. ಪ್ರತಿಯೊಬ್ಬರೊಂದಿಗೂ ಆತ ನಗುತ್ತಲೇ ಮಾತನಾಡಿಸುತ್ತ ಕೆಲಸ ಮಾಡಿಕೊಂಡಿದ್ದ. ಆ ಹೋಟೆಲ್(Hotel) ಪಕ್ಕದಲ್ಲೇ ಚಿನ್ನದ ಮಳಿಗೆ ಒಂದಿತ್ತು.

ಅದರ ಓನರ್ ಆಗಿದ್ದ ಕೇಶವ್ ರೆಡ್ಡಿ ಅದೇ ಹೋಟೇಲ್ ಗೆ ಬಂದು ಊಟ ಮಾಡುತ್ತಿದ್ದ. ಊಟವಾದ ನಂತರ ದರ್ಪದಿಂದ ಮರಿಸ್ವಾಮಿಗೆ ಏ ತೆಗೆದುಕಳ್ಳೋ ಎಂದು ಹೇಳಿ ನೂರಿನ್ನೂರು ರೂಪಾಯಿಗಳನ್ನು ಎಸೆಯುತ್ತಿದ್ದ. ಸಂಬಳಕ್ಕಿಂತ ಹೆಚ್ಚಾಗಿ ಮರಿಸ್ವಾಮಿ ಕೇಶವ್ ರೆಡ್ಡಿ ಕೊಡುತ್ತಿದ್ದ ಟಿಪ್ಸ್(Tips) ನಿಂದಲೇ ಹೆಚ್ಚು ದುಡಿಯುತ್ತಿದ್ದ. ಇದನ್ನು ನೋಡಿ ಬೇರೆ ಕೆಲಸಗಾರರು ಅಸೂಯೆ ಪಡುತ್ತಿದ್ದರು. ಹೋಟೆಲ್ ಮಾಲೀಕ ಕೂಡ ಅವನು ಭಿಕ್ಷೆಯ ರೀತಿಯಲ್ಲಿ ಎಸೆಯುವ ಹಣವನ್ನು ನೀವ್ಯಾಕೆ ತೆಗೆದೀಕೊಳ್ಳುತ್ತೀರಿ ನೋಡಲು ನಮಗೇ ಸಾಧ್ಯವಾಗುತ್ತಿಲ್ಲ ಎಂಬುದಾಗಿ ಹೇಳುತ್ತಾನೆ. ಮರಿಸ್ವಾಮಿ ಯಾವುದಕ್ಕೂ ತಲೆ ಕೆಡಿಸಿಕೊಳ್ಳುವುದಿಲ್ಲ.

ಹೀಗೆ ಇದೀ ಹಲವಾರು ವರ್ಷಗಳಿಂದ ಮುಂದುವರೆದು ಹೋಗುತ್ತಲೇ ಇರುತ್ತದೆ. ಕೇಶವ್ ರೆಡ್ಡಿ ಪ್ರತಿ ಬಾರಿ ಬಂದಾಗಲೂ ಮರಿಸ್ವಾಮಿಗೆ ನೂರು ಐನೂರು ರೂಪಾಯಿಯನ್ನು ಭಿಕ್ಷೆ ಎಸೆದಂತೆ ಎಸೆಯುತ್ತಲೇ ಇರುತ್ತಾನೆ‌. ಒಮ್ಮೆ ಸ್ನೇಹಿತರೊಂದಿಗೆ ಕೇಶವ್ ರೆಡ್ಡಿ ಆ ಹೋಟೆಲ್ ಗೆ ಹೋಗಿ ಏಕವಚನದಿಂದಲೇ ಮರಿಸ್ವಾಮಿ ಗೆ ಬೇಗ ಬೇಗ ಆರ್ಡರ್(Order) ತರಲು ಹೇಳುತ್ತಾನೆ. ಪಾರ್ಟಿ ಮುಗಿದ ನಂತರ ಮರಿಸ್ವಾಮಿ ಗೆ 500 ರೂಪಾಯಿಯನ್ನು ಟಿಪ್ಸ್ ಬಿಸಾಕಿ ಹೊರಡಲು ಸಜ್ಜಾಗಿ ನಿಂತಾಗ ನಿಂತುಕೊಳ್ಳಿ ಅಯ್ಯ ಎಂದು ಮರಿಸ್ವಾಮಿ ಕರೆಯುತ್ತಾನೆ. ಆಗ ಕೇಶವ್ ರೆಡ್ಡಿ ಏನು ಟಿಪ್ಸ್ ಇನ್ನೂ ಬೇಕಾ ಎನ್ನಲಾಗಿ ಮರಿಸ್ವಾಮಿ ಒಬ್ಬ ಹುಡುಗನನ್ನು ಕರೆತಂದು ಕೇಶವ ರೆಡ್ಡಿ ಕಾಲಿಗೆ ಬೀಳಿಸುತ್ತಾನೆ.

ಯಾರು ಎಂದು ಕೇಳಿದಾಗ ಇದು ನನ್ನ ಮಗ ನೀವು ಕೊಟ್ಟ ಟಿಪ್ಸ್ ಹಣದಿಂದ ಈತನನ್ನು ಓದಿಸಿ ಈಗ ಆತ ಎಂಬಿಬಿಎಸ್(MBBS) ಮುಗಿಸಿ ಡಾಕ್ಟರ್ ಆಗಿದ್ದಾನೆ ಎಂಬುದಾಗಿ ಹೇಳುತ್ತಾನೆ. ಅಲ್ಲಿದ್ದ ಎಲ್ಲರೂ ಈ ವಿಚಾರವನ್ನು ಕೇಳಿ ಆಶ್ಚರ್ಯ ಚಕಿತರಾಗುತ್ತಾರೆ. ಆಗ ಕೇಶವ್ ರೆಡ್ಡಿಯ ಅಹಂಕಾರವೆಲ್ಲಾ ಇಳಿದು ಹೋಯಿತು. ಯಾರೇ ಆಗಲಿ ಸಪ್ಲೈಯರ್ ಗಳಿಗೆ ಟಿಪ್ಸ್ ನೀಡುವಾಗ ಅಹಂಕಾರವನ್ನು ತೋರಬೇಡಿ ಲಕ್ಷ್ಮೀ ತಾಯಿಗೆ ಗೌರವವನ್ನು ತೋರಿ.

Leave a Comment

error: Content is protected !!