ಅಭಿಮಾನಿಯ ಕೈಯಲ್ಲಿ ಅಪ್ಪು ಅವರ ಟ್ಯಾಟೂ ನೋಡಿ ಪಿಧಾ ಆದ ಯುವರಾಜಕುಮಾರ್

Yuvrajkumar was shocked to see Appu’s tattoo on the hand of a fan: ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ಕರ್ನಾಟಕ ರಾಜ್ಯದಲ್ಲಿ ಅತ್ಯಂತ ಹೆಚ್ಚು ಅಭಿಮಾನಿಗಳನ್ನು ಹೊಂದಿರುವ ನಟರ ಸಾಲಿನಲ್ಲಿ ಪ್ರಮುಖರಾಗಿ ಕಾಣಿಸಿಕೊಳ್ಳುತ್ತಾರೆ. ಈಗ ಅವರ ಮರಣ ನಂತರ ಅವರ ಸ್ಥಾನವನ್ನು ಎಲ್ಲರೂ ಕೂಡ ಅವರ ಅಣ್ಣನ ಮಗನಾಗಿರುವ ಯುವರಾಜ್ ಕುಮಾರ್ ಅವರಿಗೆ ನೀಡುತ್ತಿದ್ದಾರೆ. ಯುವರಾಜ್ ಕುಮಾರ್ ಇನ್ನು ಕೂಡ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟಿಲ್ಲ. ಅದಾಗಲೇ ಯುವರಾಜ್ ಕುಮಾರ್ ಅವರಿಗೆ ಇರುವಂತಹ ಅಭಿಮಾನಿಗಳ ಕ್ರೇಜ್ ಸಾಕಷ್ಟು ದೊಡ್ಡ ಮಟ್ಟದಲ್ಲಿ ದಿನೇದಿನೇ ಹರಡುತ್ತಿದೆ.

Yuvrajkumar was shocked to see Appu’s tattoo on the hand

ಅದರಲ್ಲೂ ಇತ್ತೀಚಿಗಷ್ಟೇ ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಾಗೂ ಅಪ್ಪು ಅಭಿಮಾನಿಗಳ ನಡುವೆ ನಡೆಯುತ್ತಿದ್ದ ಘರ್ಷಣೆಯಲ್ಲಿ ಪ್ರಬುದ್ಧ ಪ್ರತಿಕ್ರಿಯೆಯನ್ನು ನೀಡುವ ಮೂಲಕ ಯುವರಾಜ್ ಕುಮಾರ್ ಅವರು ಸಾಕಷ್ಟು ದೊಡ್ಡ ಮಟ್ಟದಲ್ಲಿ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ದೊಡ್ಮನೆಯ ಪರವಾಗಿ ದಿಟ್ಟವಾಗಿ ನಿಂತು ಮಾತನಾಡುವಂತಹ ಎದೆಗಾರಿಕೆಯನ್ನು ಕೂಡ ಯುವರಾಜ್ ಕುಮಾರ್ ಅವರು ಹೊಂದಿರುವುದು ನಿಜಕ್ಕೂ ಎಲ್ಲರ ಮನವನ್ನು ಗೆದ್ದಿದೆ. ಎಲ್ಲಕ್ಕಿಂತ ವಿಶೇಷವಾಗಿ ಯುವರಾಜ್ ಕುಮಾರ್ ಅವರು ಕನ್ನಡ ಚಿತ್ರರಂಗಕ್ಕೆ ನಾಯಕ ನಟನಾಗಿ ಕಾಲಿಡುತ್ತಿರುವ ಸಿನಿಮಾ ಕೂಡ ವಿಶೇಷವಾಗಿದೆ.

ಹೌದು ಗೆಳೆಯರೇ ಯಾಕೆಂದರೆ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಹಾಗೂ ಸಂತೋಷ್ ಆನಂದ್ ರಾಮ್ ಕಾಂಬಿನೇಷನ್ನಲ್ಲಿ ಬರಬೇಕಾಗಿದ್ದ ಕಥೆಯನ್ನೇ ಸಂತೋಷ ಆನಂದರಾಮ್ ಅವರು ಯುವರಾಜ್ ಕುಮಾರ್ ಅವರು ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡುವ ಸಿನಿಮಾವನ್ನಾಗಿ ಮಾಡಬೇಕೆಂದು ರೆಡಿ ಮಾಡುತ್ತಿದ್ದಾರೆ. ಇನ್ನು ಇತ್ತೀಚಿಗಷ್ಟೇ ಅಪ್ಪು ಅಭಿಮಾನಿ ಕೈಯಲ್ಲಿ ಹಾಕಿಸಿಕೊಂಡಿರುವ ಟ್ಯಾಟೂವನ್ನು ನೋಡಿ ಯುವರಾಜ್ ಕುಮಾರ್ ಅವರು ನೀಡಿರುವ ರಿಯಾಕ್ಷನ್ ಕ್ಯಾಮೆರಾ ಕಣ್ಣಿನಲ್ಲಿ ಸೆರೆಯಾಗಿದ್ದು ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಖತ್ ಸದ್ದು ಮಾಡುತ್ತಿದೆ.

ತಮ್ಮ ಚಿಕ್ಕಪ್ಪ ಅಪ್ಪು ಅವರ ಸ್ಟ್ಯಾಟವನ್ನು ಅಭಿಮಾನಿಯ ಕೈಯಲ್ಲಿ ನೋಡಿ ನಿಜವಾಗಿಯೂ ಈ ಟ್ಯಾಟು ಇಷ್ಟೊಂದು ಸುಂದರವಾಗಿ ಮೂಡಿ ಬಂದಿದೆ ಎಂಬುದಾಗಿ ಸಂತೋಷವನ್ನು ವ್ಯಕ್ತಪಡಿಸಿ ತಮ್ಮ ಮೊಬೈಲ್ ನಲ್ಲಿ ಆ ಟ್ಯಾಟುವಿನ ಫೋಟೋವನ್ನು ತೆಗೆದುಕೊಂಡಿದ್ದಾರೆ.

22 ವರ್ಷಗಳ ನಂತರ ಮತ್ತೆ ವೈರಲ್ ಆಯ್ತು ಅಪ್ಪು ಹಾಗೂ ಅಶ್ವಿನಿ ಅವರ ಮದುವೆ ಕಾರ್ಡ್. ಹೇಗಿತ್ತು ಗೊತ್ತಾ ಮದುವೆ ಕಾರ್ಡ್?

ತಮ್ಮ ಚಿಕ್ಕಪ್ಪ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರಿಗೆ ಯುವರಾಜ್ ಕುಮಾರ್ ಅವರು ಎಷ್ಟು ಪ್ರೀತಿ ಹಾಗೂ ಗೌರವಗಳನ್ನು ನೀಡುತ್ತಿದ್ದರು ಎಂಬುದನ್ನು ಈ ವಿಡಿಯೋ ಮುಖಾಂತರ ನಾವು ನೋಡಬಹುದಾಗಿದೆ. ಈ ವಿಡಿಯೋದ ಬಗ್ಗೆ ಹಾಗೂ ಈ ವಿಡಿಯೋದಲ್ಲಿ ಯುವರಾಜ್ ಕುಮಾರ್ ಅವರು ನಡೆದುಕೊಂಡ ರೀತಿಯ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು ಕಾಮೆಂಟ್ ಮೂಲಕ ಹಂಚಿಕೊಳ್ಳಿ.

Leave A Reply

Your email address will not be published.