ಸಮಾಜಕ್ಕೆ ಮಾದರಿಯಾದ ಮದುವೆ. ವಿಧವೆ ಅತ್ತಿಗೆಯನ್ನು ಮದುವೆಯಾಗೋಕೆ ಯಾರೂ ಮುಂದೆ ಬರದೇ ಇದ್ದಾಗ ತಮ್ಮ ಮಾಡಿದ್ದೇನು ನೋಡಿ
ಸಮಾಜದಲ್ಲಿ ಯಾರ ಯಾರ ಜೀವನ ಹೇಗೆ ನಡೆಯುತ್ತದೆ ಎಂದು ಹೇಳಲು ಸಾಧ್ಯವೇ ಇಲ್ಲ. ಇಂದು ಶ್ರೀಮಂತನಾಗಿರುವವನು ನಾಳೆ ಎಲ್ಲವನ್ನೂ ಕಳೆದುಕೊಂಡು ಬೀದಿಯಲ್ಲಿ ನಿಲ್ಲಬಹುದು. ಇಂದು ಬೀದಿಯಲ್ಲಿದ್ದವನು ನಾಳೆ ಬಂಗಲೆಯಲ್ಲಿ ವಾಸಿಸಬಹುದು. ಅಥವಾ ಇಷ್ಟೆಲ್ಲ ಇದ್ದು, ಅನುಭವಿಸಲು ನಮ್ಮ ಜೀವವೇ ಇಲ್ಲದೇ ಇರಬಹುದು. ಉದಾಹರಣೆಗೆ ನಾವೊಂದು ನೈಜ ಘಟನೆಯನ್ನ ಹೇಳುತ್ತೇವೆ ಕೇಳಿ. ತನ್ನ ಪ್ರಪಂಚವೇ ತನ್ನ ಗಂಡ ಎನಿಸಿಕೊಂಡಿರುವಾಕೆ ತನ್ನ ಪತಿಯ ಸಾ”ವ”ನ್ನೇ ನೋಡುವಂತಾದರೆ! ವಿಧಿಯ ಆಟ ಏನು ಎಂದು ಯಾರಿಗೆ ತಾನೇ ಊಹಿಸಲು ಸಾಧ್ಯ.
ಹೌದು, ಇದು ಮುಂಬೈನ ವಾಂಖೀಡ್ ಗ್ರಾಮದಲ್ಲಿ ನಡೆದ ಘಟನೆ. ತನ್ನ ಗಂಡ ಹಾಗೂ ಇಬ್ಬರು ಮಕ್ಕಳೊಂದಿಗೆ ಸುಖವಾಗಿ ಸಂಸಾರವನ್ನು ನಡೆಸಿಕೊಂಡಿದ್ದ ಆಕೆಯ ಜೀವನದಲ್ಲಿ ಒದು ದಿನ ಬಿರುಗಾಳಿ ಏಳುತ್ತೆ. ಅದೇನು ಗೊತ್ತಾ? ಆಕೆಯ ಪತಿ ಅಕಾಲಿಕ ಮರಣಕ್ಕೆ ತುತ್ತಾಗುತ್ತಾನೆ. ಗಂಡನನ್ನು ಕಳೆದುಕೊಂಡು ಎರಡು ಮಕ್ಕಳನ್ನ ಇಟ್ಟುಕೊಂಡು ಆಕೆ ಹೇಗೆ ತಾನೆ ಜೀವನ ಸಾಗಿಸಿಯಾಳು? ಇಂದು ಜಗತ್ತು ಎಷ್ಟೇ ಮುಂದುವರೆದಿದೆ, ಹೆಣ್ಣುಮಕ್ಕಳು ಎಷ್ಟೇ ಸಬಲರಾಗಿದ್ದಾರೆ, ಇಂಡಿಪೆಂಡೆಂಟ್ ಆಗಿ ಬದುಕಬಹುದು ಎಂದರೂ, ಕೆಲವು ಹಳ್ಳಿಗಳಲ್ಲಿ, ಅಥವಾ ಕೆಲವು ಸಮುದಾಯದಲ್ಲಿ ಇದು ಅಷ್ಟು ಸುಲಭವಲ್ಲ. ಗಂಡ ಹಾಗೂ ಅವರ ಮನೆಯವರನ್ನೆ ನಂಬಿ ಬಂದ ಹೆಣ್ಣಿಗೆ ಅದೇ ಪ್ರಪಂಚವಾಗಿರುತ್ತದೆ.
ಹೀಗೆ ವಾಂಖೀಡ್ ಗ್ರಾಮದಲ್ಲಿ ಆಕೆ ಪತಿಯನ್ನು ಕಳೆದುಕೊಂಡು ಮಕ್ಕಳ ಭವಿಷ್ಯವನ್ನು ಕಣ್ಣ ಮುಂದೆ ತಂದುಕೊಂಡು ದುಃಖಿಸುತ್ತಿರುತ್ತಾಳೆ. ಆಗ ಆಕೆಯ ಮೈಧುನ ಅಂದರೆ ಸ’ತ್ತ ವ್ಯಕ್ತಿಯ ಕಿರಿಯ ಸಹೋದರ ಹರಿದಾಸ್ ಧಾಮಧರ್ ಆಕೆಯನ್ನು ಅಂದರೆ ತನ್ನ ಅತ್ತಿಗೆಯನ್ನು ಮದುಮೆಯಾಗಲು ನಿರ್ಧಾರ ಮಾಡುತ್ತಾನೆ. ಇದಕ್ಕೆ ಸಂಬಂಧಿಕರೆಲ್ಲರೂ ಬೆಂಬಲವನ್ನು ಸೂಚಿಸುತ್ತಾರೆ. ಈ ಮದುವೆಗೆ ಆಕೆಯನ್ನು ಒಪ್ಪಿಸುವುದೂ ಒಂದು ಸವಾಲಾಗಿತ್ತು. ಆದರೆ ತನ್ನ ಪುಟ್ಟ ಮಕ್ಕಳ ಭವಿಷ್ಯಕ್ಕೋಸ್ಕರ ಆಕೆ ಈ ಮದುವೆಯನ್ನು ಆಗಲು ಒಪ್ಪುಕೊಳ್ಳುತ್ತಾಳೆ.
ಇದೀಗ ಅತ್ತಿಗೆ ಮೈಧುನ ಪತಿ ಪತ್ನಿಯರಾಗಿ ಹಸೆಮಣೆ ಏರಿದ್ದಾರೆ. ಹರಿದಾಸ್ ಧಾಮಧರ್ ಅವರು ಸಮಾಜಕ್ಕೋ ಅಥವಾ ಇತರರ ಮಾತಿಗೋ ಕಿವಿಗೊಡದೇ, ಅಣ್ಣ ತೀ’ರಿಕೊಂಡನಂತರ ವಿಧವೆ ಅತ್ತಿಗೆಯನ್ನು ವಿವಾಹವಾಗಿ ಆಕೆಗೆ ಬಾಳು ನೀಡಿದ್ದಲ್ಲದೇ, ಅಣ್ಣನ ಮಕ್ಕಳ ಭವಿಷ್ಯದ ಜವಾಬ್ದಾರಿಯನ್ನೂ ಹೊತ್ತಿದ್ದಾರೆ. ಅಪರೂಪದ ಈ ಜೋಡಿಗೆ ಇಡೀ ಗ್ರಾಮಸ್ಥರು ಹಾರೈಸಿದ್ದಾರೆ.