ಸ್ಟಾರ್ ಬಾಲಿವುಡ್ ಗಾಯಕ ಯೋ ಯೋ ಹನಿಸಿಂಗ್ ತಮ್ಮ ಹೆಂಡತಿಗೆ ಡಿವೋರ್ಸ್ ಗಾಗಿ ನೀಡಿದ ಹಣವೆಷ್ಟು ಗೊತ್ತಾ..


ಸಾಮಾನ್ಯವಾಗಿ ಬಾಲಿವುಡ್ ಚಿತ್ರರಂಗದ ಬಗ್ಗೆ ಗೊತ್ತಿಲ್ಲದವರಿಗು ಕೂಡ ಈ ಒಬ್ಬ ಗಾಯಕನ ಹೆಸರು ಖಂಡಿತವಾಗಿ ಗೊತ್ತಿರುತ್ತದೆ. ಅದರಲ್ಲಿಯೂ ನಮ್ಮ ಕಾಲದ ಹುಡುಗರಿಗಂತೂ ಇವರ ಹಾಡು ಸಾಕಷ್ಟು ಮನೋರಂಜನಾತ್ಮಕವಾಗಿ ಜೊತೆಗಿತ್ತು ಎಂಬುದರಲ್ಲಿ ಯಾವುದೇ ಅನುಮಾನವಿಲ್ಲ. ಹೌದು ಮಾತನಾಡುತ್ತಿರುವುದು ಯೋ ಯೋ ಹನಿಸಿಂಗ್ ಅವರ ಬಗ್ಗೆ.

ಯೋ ಯೋ ಹನಿಸಿಂಗ್ ಅವರು ಬಾಲಿವುಡ್ ಚಿತ್ರರಂಗ ಕಂಡಂತಹ ಅತ್ಯಂತ ಯಶಸ್ವಿ ಸಂಗೀತಗಾರರಲ್ಲಿ ಒಬ್ಬರಾಗಿದ್ದಾರೆ. ಸಂಗೀತ ನಿರ್ದೇಶನ ಹಾಗೂ ಹಾಡುಗಾರಿಕೆ ಎರಡರಲ್ಲಿಯೂ ಕೂಡ ಹನಿಸಿಂಗ್ ಅವರು ತಮ್ಮ ಪ್ರಾಬಲ್ಯವನ್ನು ಒಂದು ಕಾಲದಲ್ಲಿ ಸಾಧಿಸಿದ್ದರು. ಇಂದಿನ ದಿನಗಳಲ್ಲಿ ಅವರ ಹಾಡುಗಳು ಅಷ್ಟೊಂದು ಓಡದಿದ್ದರೂ ಕೂಡ ಅಂದಿನ ಕಾಲದಲ್ಲಿ ಅವರ ಹಾಡುಗಳು ಮಾಡಿದ್ದ ಕರಾಮತ್ತು ಇಂದಿಗೂ ಜನರ ಮನಸ್ಸಿನಲ್ಲಿದೆ.

ಆದರೆ ಸದ್ಯಕ್ಕೆ ಯೋ ಯೋ ಹನಿಸಿಂಗ್ ಅವರು ಸುದ್ದಿ ಆಗುತ್ತಿರುವುದು ಅವರ ವೈಯಕ್ತಿಕ ಜೀವನದ ವಿಚಾರವಾಗಿ. ಹೌದು ಅವರು ತಮ್ಮ ಪತ್ನಿಗೆ ವಿವಾಹ ವಿಚ್ಛೇದನವನ್ನು ನೀಡಿದ್ದಾರೆ. 11 ವರ್ಷಗಳ ದೀರ್ಘಕಾಲದ ದಾಂಪತ್ಯ ಜೀವನದ ನಂತರ ಇಬ್ಬರೂ ಕೂಡ ವಿವಾಹ ವಿಚ್ಛೇದನದ ನಿರ್ಧಾರಕ್ಕೆ ಬಂದಿದ್ದು ಈಗಾಗಲೇ ಕಾನೂನಾತ್ಮಕ ಪ್ರಕ್ರಿಯೆಗಳು ಕೂಡ ನಡೆದಿದೆ. ಇನ್ನು ಯೋ ಯೋ ಹನಿಸಿಂಗ್ ಅವರು ತಮ್ಮ ಪತ್ನಿಗೆ ವಿವಾಹ ವಿಚ್ಛೇದನದ ನಂತರ ನೀಡಿರುವ ಹಣದ ಬಗ್ಗೆ ಈಗ ಸಾಕಷ್ಟು ದೊಡ್ಡ ಮಟ್ಟದಲ್ಲಿ ಚರ್ಚೆಗಳು ನಡೆಯುತ್ತಿವೆ.

ಹನಿಸಿಂಗ್ ತಮ್ಮ ಪತ್ನಿ ಆಗಿರುವ ಶಾಲಿನಿ ತಲ್ವಾರ್ ಅವರಿಗೆ ವಿವಾಹ ವಿಚ್ಛೇದನದ ನಂತರ ಜೀವನಾಂಶವಾಗಿ ಬರೋಬ್ಬರಿ 1 ಕೋಟಿ ರೂಪಾಯಿ ಹಣವನ್ನು ನೀಡಿದ್ದಾರೆ. ಈ ಬಗ್ಗೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ತಪ್ಪದೇ ಕಾಮೆಂಟ್ ಮಾಡಿ ತಿಳಿಸಿ.


Leave A Reply

Your email address will not be published.