ನಿಮ್ಮ ಸ್ನೇಹಿತರಿಗೆ ಗೊತ್ತಾಗದ ಹಾಗೆ ನೀವು ಅವರ ವಾಟ್ಸಪ್ ಸ್ಟೇಟಸ್ ನೋಡಬಹುದು ಹೇಗೆ ಗೊತ್ತಾ?

ಇಂದು ವಾಟ್ಸಪ್ ಬಳಸದೇ ಇರುವವರು ಯಾರಿದ್ದಾರೆ ಹೇಳಿ. ನಿಮ್ಮ ಕೈಯಲ್ಲಿ ಸ್ಮಾರ್ಟ್ ಫೋನ್ ಇದೆ ಅಂತ ಆದರೆ ಅದರಲ್ಲಿ ವಾಟ್ಸಪ್ ಇದ್ದೇ ಇರುತ್ತೆ ಹಾಗೂ ಅದನ್ನು ದಿನವೂ ಬಳಸುತ್ತಲೇ ಇರುತ್ತೀರಿ. ಆದರೆ ಈ ವಾಟ್ಸಪ್ ನಲ್ಲಿ ಹಲವಾರು ವಿಚಾರಗಳಿವೆ. ನಾವು ಮೇಲ್ನೋಟಕ್ಕೆ ಸಂದೇಶಗಳನ್ನು ಕಳಿಸುವುದಕ್ಕೆ, ವಿಡಿಯೋ ಫೋಟೋಗಳನ್ನು ರವಾನೆ ಮಾಡುವುದಕ್ಕಾಗಿ, ಅಥವಾ ಸ್ಟೇಟಸ್ ಹಾಕಿ ನಮ್ಮ ದೈನಂದಿನ ವಿಚಾರಗಳನ್ನು ವಿನಿಮಯ ಮಾಡಿಕೊಳ್ಳುವುದಕ್ಕಾಗಿಯೋ ಅಥವಾ ವಿಡಿಯೋ ಕಾಲ್, ವಾಯ್ಸ್ ಕಾಲ್ ಮಾಡುವುದಕ್ಕಾಗಿಯೋ ವಾಟ್ಸಪ್ ಅನ್ನು ಬಳಸುತ್ತೇವೆ. ಆದರೆ ಇವುಗಳ ಹೊರತಾಗಿ ವಾಟ್ಸಪ್ ನಲ್ಲಿ ಹಲವಾರು ಬೇರೆ ಬೇರೆ ರೀತಿಯ ಫೀಚರ್ಸ್ ಗಳಿವೆ. ಇವುಗಳನ್ನು ಕೂಡ ನಾವು ಕಲಿತುಕೊಂಡರೆ ವಾಟ್ಸಪ್ ನಮಗೆ ಇನ್ನಷ್ಟು ಪ್ರಯೋಜನಕಾರಿಯಾಗುತ್ತದೆ.

ವಾಟ್ಸಾಪ್ ಎನ್ನುವ ಆಪ್ ಗ್ರಾಹಕರಿಗೆ ಬೇಕಾದ ಹಾಗೆ ತನ್ನಲ್ಲಿ ಸಾಕಷ್ಟು ಬದಲಾವಣೆಗಳನ್ನು ಮಾಡಿಕೊಳ್ಳುತ್ತಾ, ಹೊಸ ಹೊಸ ಫೀಚರ್ ಗಳನ್ನು ಅಳವಡಿಸಿಕೊಳ್ಳುತ್ತಾ ಬಂದಿದೆ. ವಾಟ್ಸಾಪ್ ಸೆಟ್ಟಿಂಗ್ ಅನ್ನು ನೋಡಿದರೆ ಅದರಲ್ಲಿ ಸಾಕಷ್ಟು ನಮಗೆ ಗೊತ್ತಿಲ್ಲದೇ ಇರುವ ವಿಚಾರಗಳು ಅಡಕವಾಗಿವೆ. ಉದಾಹರಣೆಗೆ ನಿಮ್ಮ ಸ್ನೇಹಿತರು ಯಾವುದೇ ಸ್ಟೇಟಸ್ ಅನ್ನು ಹಾಕಿದರೂ ಅದನ್ನು ನೀವು ನೋಡುತ್ತೀರಿ.

ನೀವು ನೋಡಿದ್ದು ಅವರಿಗೂ ಗೊತ್ತಾಗುತ್ತದೆ. ಹಾಗಾಗಿ ಇಷ್ಟವಿದ್ದರೂ ಇಲ್ಲದಿದ್ದರೂ ಇತರರ ಸ್ಟೇಟಸ್ ಗೆ ರಿಪ್ಲೈ ಮಾಡುವ ಅನಿವಾರ್ಯತೆ ಕ್ರಿಯೇಟ್ ಆಗುತ್ತೆ. ಚಿಂತೆ ಬೇಡ, ನೀವು ಬೇರೆಯವರ ಸ್ಟೇಟಸ್ ಅನ್ನು ನೋಡಿ ಆದರೆ ನೀವು ನೋಡಿದ್ದೀರಿ ಅಂತ ಅವರಿಗೆ ಗೊತ್ತಾಗದ ರೀತಿಯಲ್ಲಿ ಸ್ಟೇಟಸ್ ಅನ್ನು ನೋಡಬಹುದು. ಹೇಗೆ ಅಂತೀರಾ ಇಲ್ಲಿದೆ ಸುಲಭ ಟ್ರಿಕ್ಸ್.

ಮೊದಲು ನಿಮ್ಮ ಮೊಬೈಲ್ ನಲ್ಲಿ ವಾಟ್ಸಪ್ ನ್ನು ಓಪನ್ ಮಾಡಿ. ಅಲ್ಲಿ ಸೆಟ್ಟಿಂಗ್ಸ್ ಮೆನುವಿಗೆ ಹೋಗಬೇಕು. ಸೆಟ್ಟಿಂಗ್ಸ್ ನಲ್ಲಿ ಪ್ರೈವೆಸಿ ಸೆಟ್ಟಿಂಗ್ ಎನ್ನುವ ಆಯ್ಕೆ ಇರುತ್ತದೆ. ಅದನ್ನು ತೆರೆಯಿರಿ. ಅಲ್ಲಿ ರೀಡರ್ ರೆಸಿಪೆಂಟ್ಟ್ಸ್ ಅನ್ನು ರಿಮೂವ್ ಮಾಡಿ. ಅಷ್ಟೇ. ಈಗ ನೀವು ಯಾರದೇ ವಾಟ್ಸಪ್ ಸ್ಟೇಟಸ್ ನೋಡಿದರೂ ನೀವು ನೋಡಿದ್ದು ಅವರಿಗೆ ಗೊತ್ತಾಗುವುದಿಲ್ಲ.

Leave a Comment

error: Content is protected !!