ಆಡಿಯೋ ರಿಲೀಸ್ ಆದ ಮೇಲೆ ವೈಷ್ಣವಿ ಗೌಡ ಊಟ ತಿಂಡಿ ಮಾಡದೆ ಕಣ್ಣೀರು ಹಾಕುತ್ತಿದ್ದಾರೆ ಎಂದ ವೈಷ್ಣವಿ ಗೌಡ ತಂದೆ. ವೈಷ್ಣವಿ ಗೌಡ ಅವರ ಪರಿಸ್ಥಿತಿಯನ್ನು ಎಳೆ ಎಳೆಯಾಗಿ ಬಿಚ್ಚಿಟ್ಟ ತಂದೆ

ಆಡಿಯೋ ರಿಲೀಸ್ ಆದ ಮೇಲೆ ವೈಷ್ಣವಿ ಗೌಡ ಊಟ ತಿಂಡಿ ಮಾಡದೆ ಕಣ್ಣೀರು ಹಾಕುತ್ತಿದ್ದಾರೆ ಎಂದ ವೈಷ್ಣವಿ ಗೌಡ ತಂದೆ. ವೈಷ್ಣವಿ ಗೌಡ ಅವರ ಪರಿಸ್ಥಿತಿಯನ್ನು ಎಳೆ ಎಳೆಯಾಗಿ ಬಿಚ್ಚಿಟ್ಟ ತಂದೆ.. ವೈಷ್ಣವಿ ಗೌಡ ಅವರು ವಿದ್ಯಾಭರಣ ಎಂಬುವವರ ಜೊತೆ ವಿವಾಹವಾಗುವ ವಿಚಾರ ಮಾಡಿ ಮನೆಯಲ್ಲಿಯೇ ಹೆಣ್ಣು ನೋಡುವ ಶಾಸ್ತ್ರ ಮುಗಿಸಿದ ಫೋಟೋಗಳು ವೈರಲ್ ಆಗುತ್ತಿದ್ದಂತೆಲೇ, ಅನಾಮಧೇಯ ಹೆಣ್ಣುಮಕ್ಕಳಿಬ್ಬರು ಆಡಿಯೋ ರಿಲೀಸ್ ಮಾಡಿದ್ದಾರೆ.

‘ನಾವು ವೈಷ್ಣವಿ ಗೌಡ ಅವರ ಜೀವನವನ್ನು ಹಾಳು ಮಾಡಲು ಕೊಡುವುದಿಲ್ಲ. ವೈಷ್ಣವಿಯವರು ತುಂಬಾ ಮುಗ್ಧ ಹುಡುಗಿ. ವಿದ್ಯಾಭರಣ ಅವರ ಬಗ್ಗೆ ವೈಷ್ಣವಿ ಅವರ ಕುಟುಂಬದವರಿಗೆ ಏನು ತಿಳಿದಿಲ್ಲ. ವಿದ್ಯಾಭರಣ ಅವರಿಗೆ ಕೆಲವು ಹುಡುಗಿಯರ ಜೊತೆ ಸಂಬಂಧವಿತ್ತು. ವಿವಾಹವಾದರೂ ಡಿವೋರ್ಸ್ ಆಗೋದು ಖಂಡಿತ’ ಎಂಬೆಲ್ಲಾ ಹೇಳಿಕೆಗಳು ಆಡಿಯೋದಿಂದ ಕೇಳಿ ಕೇಳಿ ಬರುತ್ತಿತ್ತು.

ಇದೀಗ ವೈಷ್ಣವಿ ಗೌಡ ಅವರ ತಂದೆ ಈ ಆಡಿಯೋ ರಿಲೀಸ್ ಆದಮೇಲೆ ಮೊದಲ ಬಾರಿ ಪ್ರತಿಕ್ರಿಯೆ ನೀಡಿದ್ದು, ಈ ರೀತಿಯಾಗಿ ಹೇಳಿದ್ದಾರೆ…’ಇದೇ ತಿಂಗಳಲ್ಲಿ ನಾವು ನನ್ನ ಮಗಳ ಬೊಟ್ಟಿಡುವ ಶಾಸ್ತ್ರವನ್ನು ಮುಗಿಸಿದ್ದೇವೆ. ಬರುವ ಜನವರಿ ಅಥವಾ ಫೆಬ್ರವರಿ ತಿಂಗಳಿನಲ್ಲಿ ಗ್ರಾಂಡ್ ಆಗಿ ಎಂಗೇಜ್ಮೆಂಟ್ ಮಾಡಿ, ಮುಂಬರುವ ಏಪ್ರಿಲ್ ಅಥವಾ ಮೇ ತಿಂಗಳಿನಲ್ಲಿ ಅದ್ದೂರಿಯಾಗಿ ಮದುವೆ ಮಾಡುವ ಆಲೋಚನೆಯನ್ನು ಹೊಂದಿದ್ದೆವು. ಈ ರೀತಿಯಾಗಿ ಆಡಿಯೋ ರಿಲೀಸ್ ಆಗುತ್ತದೆ ಎನ್ನುವ ಯಾವುದೇ ಕಲ್ಪನೆ ಇರಲಿಲ್ಲ ನಮಗೆ’ ಎಂದಿದ್ದಾರೆ.

Vaishnavi gowda father statement on vaishnavi gowda and vidhyabharan engagement
Vaishnavi gowda father statement on vaishnavi gowda and vidhyabharan engagement

ಅಲ್ಲದೇ ‘ವಿದ್ಯಾಭರಣ ಅವರು ಪರಿಚಯವಾದದ್ದು ಸುಮಾರು ಐದಾರು ವರ್ಷಗಳ ಹಿಂದೆ..ಚಿತ್ರವೊಂದರಲ್ಲಿ ನನ್ನ ಮಗಳು ಹೀರೋಯಿನ್ ಆಗಿ ಆಯ್ಕೆಯಾಗಿದ್ದಳು ಮತ್ತು ವಿದ್ಯಾಭರಣವರೇ ಆ ಚಿತ್ರಕ್ಕೆ ನಾಯಕನಾಗಿದ್ದರು. ಚಿತ್ರಕ್ಕೆ ನಾಂದಿ ಹಾಡುವ ದೇವರ ಪೂಜೆ ಎಲ್ಲವೂ ಮುಗಿದ ನಂತರ ಅದು ಯಾವುದೋ ಕಾರಣಕ್ಕೆ ಚಿತ್ರೀಕರಣ ಮಾಡಲಿಲ್ಲ..ನಂತರ ನಮ್ಮ ಮನೆಯ ಗ್ರಹಪ್ರವೇಶಕ್ಕೆ ನಾನು ವಿದ್ಯಾಭರಣ ಅವರನ್ನು ಇನ್ವೈಟ್ ಮಾಡಲು ಹೋಗಿದ್ದೆ..ನನ್ನ ಮಗಳು ಮತ್ತು ವಿದ್ಯಾಭರಣ ಇಬ್ಬರೂ ಒಂದೇ ರಂಗದಲ್ಲಿ ಇರುವ ಕಾರಣ ಮುಂದಿನ ಜೀವನ ಉತ್ತಮವಾಗಿರಬಹುದು ಎಂದು ಊಹಿಸಿ ನಾವು ವಿವಾಹ ಮಾಡಿಕೊಡಲು ಒಪ್ಪಿದೆವು. ಬೊಟ್ಟಿಡುವ ಶಾಸ್ತ್ರವನ್ನು ನಮ್ಮ ಮನೆಯಲ್ಲಿ ಮಾಡಲಾಯಿತು. ಸುಮಾರು 75ರಿಂದ 80 ಜನರು ಸೇರಿದ್ದರು’ ಎನ್ನುತ್ತಾ ವೈರಲ್ ಆದ ಹೆಣ್ಣು ನೋಡುವ ಶಾಸ್ತ್ರದ ಫೋಟೋದ ಕುರಿತಾಗಿಯೂ ಮಾತನಾಡಿದರು.

‘ನಾವು ಕೂಡ ಒಳ್ಳೆಯ ಕುಟುಂಬವೆಂದು ನಂಬಿ ಮದುವೆ ಕಾರ್ಯವನ್ನು ಮಾಡಲು ಮುಂದಾಗಿದ್ದೆವು. ಕೊನೆಯಲ್ಲಿ ಈ ರೀತಿಯಾಗಿ ಆಗುತ್ತದೆ ಎಂಬುದು ತಿಳಿದಿರಲಿಲ್ಲ. ಮದುವೆಯ ಮೊದಲ ಹೆಜ್ಜೆಯಲ್ಲಿಯೇ ಈ ರೀತಿ ಆಯ್ತಲ್ಲ ಎಂದು ವೈಷ್ಣವಿಯವರು ತುಂಬಾ ಬೇಸರದಲ್ಲಿದ್ದಾರೆ. ಅವಳೇನು ನಿರ್ಧರಿಸುತ್ತಾಳೆಯೋ ಅದನ್ನೇ ನಾವು ಒಪ್ಪುತ್ತೇವೆ. ವೈಷ್ಣವಿಯವರು ಬೇಸರಗೊಂಡಿರುವುದರಿಂದ ಚೇತರಿಸಿಕೊಳ್ಳಲು ಒಂದೆರಡು ದಿನ ತೆಗೆದುಕೊಳ್ಳಬಹುದು. ಇದರ ಬಗ್ಗೆ ಇನ್ನೇನು ನಾನು ಜಾಸ್ತಿ ಹೇಳಲ್ಲ’ ಎಂದಿದ್ದಾರೆ. ಮುಂದೇನು ನಡೆಯಲಿದೆ ಎಂಬುದನ್ನು ಕಾದು ನೋಡಬೇಕಿದೆ.

Vaishnavi gowda father statement on vaishnavi gowda and vidhyabharan engagement
Vaishnavi gowda father statement on vaishnavi gowda and vidhyabharan engagement

Leave a Comment

error: Content is protected !!