ಚಿನ್ನದ ಬೆಲೆಯಲ್ಲಿ ಇಳಿಕೆ ಯಾಗುವ ಸಂಭವ ಎಷ್ಟಿದೆ ಈಗಿನ ಚಿನ್ನದ ಬೆಲೆ?

42 ಸಾವಿರ ಗಡಿದಾಟಿದ್ದ ಚಿನ್ನದ ಬೆಲೆ ಇದೀಗ ಇಳಿಕೆಯಾಗುವ ಸಂಭವವಿದೆ.ಇದರಿಂದ ಜನ ಸಾಮಾನ್ಯರ ಮುಖದಲ್ಲಿ ಸಂತಸ ತಂದಿದೆ. ಕಳೆದ ತಿಂಗಳು ಚಿನ್ನದ ಬೆಲೆ ಭಾರಿ ಏರಿಕೆ ಇತ್ತು. ಚಿನ್ನದ ಬೆಲೆಯ ಏರಿಕೆಯಾಗಲು ಕಾರಣ ಅಂತರಾಷ್ಟ್ರೀಯ ವ್ಯಾಪಾರದಲ್ಲಿ ಏರುಪೇರಾಗುತ್ತಿದ್ದು, ರೂಪಾಯಿಯ ಎದುರು ಡಾಲರ್ ಮೊತ್ತ ಹೆಚ್ಚಾಗುತ್ತಿದೆ.ಆದರೆ ಈಗ ಚಿನ್ನದ ಬೆಲೆ ಕಡಿಮೆ ಯಾಗಿದ್ದು ಭಾರತೀಯರಿಗೆ ಸಂತಸ ತಂದಿದೆ.

ಅತಿ ಹೆಚ್ಚು ಚಿನ್ನವನ್ನು ಬಳಸುವ ಹಾಗೂ ಇಷ್ಟ ಪಡುವ ದೇಶವೆಂದರೆ ಅದು ಭಾರತ. ಅದರಲ್ಲೂ ಮಹಿಳೆಯರು ಆಭರಣ ಪ್ರಿಯರು. ಚಿನ್ನ ಇಲ್ಲದೆ ಯಾವುದೇ ಶುಭ ಸಮಾರಂಭವು ನಡೆಯಲಾಗದು.
ಮಾರುಕಟ್ಟೆ ತಜ್ಞರ ಪ್ರಕಾರ ಮುಂದಿನ ದಿನಗಳಲ್ಲಿ ಚಿನ್ನದ ಬೆಲೆಯು ಕಡಿಮೆ ಯಾಗುವ ಸಂಭವ ಇದೆ ಎಂದು ಅಭಿಪ್ರಾಯ ಪಟ್ಟಿದ್ದಾರೆ. ಚಿನ್ನದ ಬೆಲೆ ಎಷ್ಟಿದೆ ಎಂದು ನೋಡಿದಾಗ.

22 ಕ್ಯಾರೆಟ್ ಚಿನ್ನದ ಬೆಲೆ 36,000 , 24 ಕ್ಯಾರೆಟ್ ಚಿನ್ನದ ಬೆಲೆ 42,000 ಇದೆ .ನಿರೀಕ್ಷಿತ ಪ್ರಮಾಣದಲ್ಲಿ ಚಿನ್ನದ ಬೆಲೆ ಇಳಿಕೆಯಾಗದೆ ಅಲ್ಪ ಪ್ರಮಾಣದಲ್ಲಿ ಚಿನ್ನದ ದರವು ಕಡಿಮೆಯಾಗಿದ್ದು, ಮುಂಬರುವ ದಿನಗಳಲ್ಲಿ ಚಿನ್ನವು ಕಡಿಮೆ ಬೆಲೆಯಲ್ಲಿ ದೊರೆಯಲಿದೆ ಎಂದು ಆರ್ಥಿಕ ತಜ್ಞರು ಹೇಳಿದ್ದಾರೆ.

Leave a Comment

error: Content is protected !!