ದಯವಿಟ್ಟು ಶೇರ್ ಮಾಡಿ ಗೆಳೆಯರೇ

ಪತಿ ಇನ್ನೊಬ್ಬರನ್ನು ಪ್ರೀತಿಸಿದ್ದಾರೆ ಎಂದ ಕ್ಷಣ ಪತಿಯೊಂದಿಗೆ ಜಗಳವಾಡಿ ಪ್ರೀತಿಸಿದವರನ್ನು ದೂರ ಮಾಡಿರುವವರನ್ನು ನೋಡಿದ್ದೇವೆ. ಸಾಕಪ್ಪ ಎಂದೆನಿಸಿ, ಪತಿರಾಯನನ್ನು ಬಿಟ್ಟು ಹೋದವರನ್ನು ನೋಡಿದ್ದೇವೆ.ಆದರೆ ಇಲ್ಲೊಂದು ಕಡೆ ಪತಿಗೆ ಆತನ ಪ್ರೇಯಸಿಯೊಂದಿಗೆ ಸ್ವತಃ ಹೆಂಡತಿಯೇ ನಿಂತು ಮದುವೆ ಮಾಡಿಸಿದ್ದಾರೆ. ಆಂಧ್ರಪ್ರದೇಶದ ಹೈದರಾಬಾದ್ ನಲ್ಲಿ ಇಂಥದೊಂದು ಘಟನೆ ನಡೆದಿದೆ. ಈ ಮಹಿಳೆಯ ವಿಶಾಲ ಮನೋಭಾವ ಎಷ್ಟಿದೆ ನೋಡಿ.

ತಾನು ಇಷ್ಟಪಟ್ಟ ಪತಿಯೊಂದಿಗೆ, ಆತ ಇಷ್ಟ ಪಟ್ಟ ಪ್ರೇಯಸಿಯೋಡನೆ ಸಾಂಪ್ರದಾಯಿಕ ರೀತಿಯಲ್ಲಿ ಮದುವೆ ಮಾಡುವುದು ಸುಲಭದ ಸಂಗತಿ ಏನಲ್ಲ. ಅಕ್ಕ ಪಕ್ಕದವರು ಏನೆನ್ನುತ್ತಾರೆ ಎಂಬ ಭಯವಾದರೂ ಇದ್ದೇ ಇರುತ್ತೆ. ಇವೆಲ್ಲವನ್ನ ಮೀರಿ ಈ ಮಹಿಳೆ ಮದುವೆ ಮಾಡಿಸಿದ್ದು, ವಿಡಿಯೋ ಕೂಡ ವೈರಲ್ ಆಗಿದೆ.

ತಿರುಪತಿಯ ದಕ್ಕಲಿಯ ಅಂಬೇಡ್ಕರ್ ನಗರದಲ್ಲಿ ನೆಲೆಸಿದ್ದ ಕಲ್ಯಾಣ ಯೂಟ್ಯೂಬ್ ಮತ್ತು ಶೇರ್ ಚಾಟ್ ಗಳಲ್ಲಿ ರೀಲ್ಸ್ ಗಳನ್ನು ಮಾಡಿ ಎಲ್ಲರಿಗೂ ಪರಿಚಯವಾಗಿದ್ದರು. ಇದೆ ವೇಳೆಯಲ್ಲಿ ಅವರನ್ನು ಫಾಲೋ ಮಾಡುತ್ತಿದ್ದ ಕಡಪಾ ಮೂಲದ ವಿಮಲಾ ಎಂಬಾಕೆಯ ಪರಿಚಯವಾಯಿತು.ಇಬ್ಬರೂ ಒಳ್ಳೆಯ ಸ್ನೇಹಿತರಾಗಿದ್ದರು. ಅದೇ ನಂತರದಲ್ಲಿ ಮುಂದುವರೆದು ಒಬ್ಬರನ್ನೊಬ್ಬರು ಪ್ರೀತಿಸಿ ಮದುವೆ ಕೂಡ ಆದರು. ಸೋಶಿಯಲ್ ಮೀಡಿಯಾದಲ್ಲಿ ಇವರಿಬ್ಬರು ಜೊತೆಯಾಗಿ ರಿಲ್ಸ್ ಗಳನ್ನು ಮಾಡಿ ಹೆಚ್ಚು ಜನಪ್ರಿಯವಾದರು. ಫಾಲೋವರ್ಸ್ ಸಂಖ್ಯೆ ಕೂಡ ಜಾಸ್ತಿಯಾಯ್ತು.

ಮದುವೆಯಾಗಿ ವರ್ಷಗಳೇ ಕಳೆದು ಹೋದ ಮೇಲೆ ಗಂಡನ ಸ್ವಭಾವದಲ್ಲಿ ಅಲ್ಪ ಪ್ರಮಾಣದ ಬದಲಾವಣೆಯನ್ನು ವಿಮಲಾ ಗುರುತು ಹಿಡಿದಳು. ದಿನದಿಂದ ದಿನಕ್ಕೆ ಹೆಚ್ಚಾದ ಗೊಂದಲದಿಂದ ಹಳೆಯ ವಿಷಯಗಳನ್ನೆಲ್ಲ ಕೆದಕಿದ ಮೇಲೆ ತನ್ನ ಪತಿಗೆ ವಿಶಾಖಪಟ್ಟಣದ ಯುವತಿ ಒಬ್ಬಳ ಜೊತೆ ಗೆಳೆತನವಿತ್ತು ಆಕೆಯ ಹೆಸರು ನಿತ್ಯಾ ಎಂಬ ವಿಷಯ ತಿಳಿಯಿತು .ನಂತರದಲ್ಲಿ ಇವರಿಬ್ಬರ ನಡುವೆ ಯಾವುದೇ ಸಂಪರ್ಕಗಳಿಲ್ಲ ಎಂಬುದು ಖಚಿತವಾಯಿತು. ಇದರ ಮಧ್ಯೆ ಕಲ್ಯಾಣ ಅವರ ಪ್ರೇಯಸಿ ನಿತ್ಯಾ ಬಂದು ಕಲ್ಯಾಣ್ ಅವರನ್ನು ಮದುವೆಯಾಗಲು ನಿಮ್ಮ ಒಪ್ಪಿಗೆ ಬೇಕು ಎಂದು ಬೇಡಿಕೊಂಡಿದ್ದಾರೆ.ಅಲ್ಲದೆ ನಾವು ಮೂವರು ಒಟ್ಟಿಗೆ ಒಂದೇ ಮನೆಯಲ್ಲಿ ವಾಸಿಸೋಣ ಎಂದು ಹೇಳಿದ್ದಾರೆ.

ಯೋಚಿಸಲು ಕೊಂಚ ಸಮಯ ತೆಗೆದುಕೊಂಡರೂ, ಇವರಿಬ್ಬರ ಮದುವೆಗೆ ವಿಮಲಾ ಒಪ್ಪಿಗೆ ಸೂಚಿಸಿದರು.ವಿಮಲಾ ಅವರು ತಾವೇ ಮುಂದಾಗಿ ಪತಿ ಕಲ್ಯಾಣ ಮತ್ತು ಅವನ ಪ್ರೇಯಸಿ ನಿತ್ಯಾ ರ ಮದುವೆಯನ್ನು ಆಂಧ್ರ ಪ್ರದೇಶದ ತಿರುಪತಿಯಲ್ಲಿ ಸಾಂಪ್ರದಾಯಿಕ ರೀತಿಯಲ್ಲಿ ನೆರವೇರಿಸಿಕೊಟ್ಟಿದ್ದಾರೆ. ಇವರು ಮದುವೆ ಫೋಟೋವನ್ನು ಸೋಶಿಯಲ್ ಮೀಡಿಯಾದಲ್ಲಿ ಹರಿಬಿಟ್ಟಿದ್ದು ಅದು ಕೂಡ ವೈರಲ್ ಆಗಿದೆ.

By admin

Leave a Reply

Your email address will not be published.