ಇದೆ ನೋಡಿ ಭಾರತದ ಅತ್ಯಂತ ಸ್ವಚ್ಛ ಹಳ್ಳಿ

ಏಶ್ಯದ ಸ್ವಚ್ಛ ಗ್ರಾಮ ಇರುವುದು ನಮ್ಮ ಭಾರತದಲ್ಲಿ ಆ ಗ್ರಾಮದ ಮನೆಗೆ ಆಗಲಿ ಅಂಗಡಿಗಳಿಗೆ ಆಗಲಿ ಬಾಗಿಲುಗಳೇ ಇಲ್ಲ ಅಂತಹ ವಿಚಿತ್ರ ಊರು ಯಾವುದು ಎಂದರೆ ಎಂಆಲಿನ್ನೊಂಗ್ ಮ್ ಮೌಲಿನ್ನೊಂಗ್ ಗ್ರಾಮ ಈ ಗ್ರಾಮವನ್ನು ದೇವರ ಸ್ವಂತ ತೋಟ ಎಂದು ಕರೆಯುತ್ತಾರೆ ಈ ಗ್ರಾಮವು ಭಾರತದ ಮೇಘಾಲಯ ರಾಜ್ಯದ ಪೂರ್ವ ಕಾಶಿ ಹಿಲ್ಸ್ ಜಿಲ್ಲೆಯಲ್ಲಿದೆ

2007 ರಿಂದ ಇಲ್ಲಿನ ಎಲ್ಲ ಮನೆಗಳು ಕ್ರಿಯಾತ್ಮಕ ಸೌಚಾಲಯಗಳನ್ನು ಹೊಂದಿವೆ ಗ್ರಾಮದ್ಯಂತ ಬಿದರಿನ ಕಸದ ಬುಟ್ಟಿಗಳನ್ನು ನಿರ್ಮಿಸಿದ್ದಾರೆ ಮರದಿಂದ ಬೀಳುವ ಎಲೆಗಳು ನೇರವಾಗಿ ಕಸದ ಬುಟ್ಟಿಗೆ ಬೀಳುತ್ತದೆ ಪ್ಲಾಸ್ಟಿಕ್ ಚೀಲಗಳನ್ನು ಇಲ್ಲಿ ಸಂಪೂರ್ಣವಾಗಿ ನಿಶೇದಿಸಲಾಗಿದೆ ಮತ್ತು ಇಲ್ಲಿ ಧೂಮಪಾನ ಹಾಗು ಮದ್ಯಪಾನ ಮಾಡುವುದಿಲ್ಲ ಇದು ಈ ಹಳ್ಳಿಯ ಜನರು ತಮ್ಮನ್ನು ತಾವೇ ನಿರ್ಬಂಧಿಸಿಕೊಂಡ ಕೆಲವು ವಿಷಯಗಳು

ಮೌಲಿನ್ನೊಂಗ್ ಗ್ರಾಮದಲ್ಲಿ ಕಸವನ್ನು ಕೊಳಗೆ ಮಾರ್ಪಡಿಸಿ ಗೊಬ್ಬರವನ್ನು ತಯಾರಿಸುತ್ತಾರೆ ಈ ಗ್ರಾಮದಲ್ಲಿ ತಮ್ಮ ಮನೆಗಳನ್ನು ಸ್ವಚ್ಛವಾಗಿ ಇಟ್ಟುಕೊಳ್ಳುವುದಲ್ಲದೆ ಅವರು ರಸ್ತೆಯನ್ನ ಸಹ ಗುಡಿಸುತ್ತ ಬರುತ್ತಾರೆ ಮತ್ತು ಗಿಡಗಳನ್ನು ನೆಡುತ್ತಾರೆ ಇವರ ಪ್ರಮುಖ ಉದ್ಯೋಗ ಕೃಷಿ ಆಗಿದ್ದು ಅಡಿಕೆ ಹೆಚ್ಚಾಗಿ ಬೆಳೆಯುತ್ತಾರೆ ಈ ಗ್ರಾಮದಲ್ಲಿ ಸುಮಾರು 95 ಮನೆಗಳಿವೆ ನೂರರಷ್ಟು ಸಾಕ್ಷರತೆ ಪ್ರಮಾಣ ಇದೆ

ಈ ಹಳ್ಳಿಯಲ್ಲಿ ಸಣ್ಣ ಪ್ರಮಾಣದ ಚಹಾ ಅಂಗಡಿ ಇದ್ದು ಈ ಅಂಗಡಿಯಲ್ಲಿ ಸಣ್ಣ ಪುಟ್ಟ ಆಹಾರ ಪದಾರ್ಥಗಳು ಸಿಗುತ್ತವೆ ವರ್ಷ ಪ್ರತಿ ಮೌಲಿನ್ನೊಂಗ್ ಗ್ರಾಮ ಹಿತಕರವಾಗಿರುತ್ತೆ ಅದರಲ್ಲೂ ಮಾನ್ಸೂನ್ ಕಾಲದಲ್ಲಿ ಈ ಗ್ರಾಮಕ್ಕೆ ಭೇಟಿ ನೀಡುವುದು ಹಿತಕರ ವಾಗಿರುತ್ತೆ ಪ್ರಧಾನಿ ಮೋದಿಯವರು ಸಹ ಈ ಗ್ರಾಮದ ಸ್ವಚ್ಛತೆ ಬಗ್ಗೆ ತಮ್ಮ ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ ಹೊಗಳಿದ್ದು ಈ ಗ್ರಾಮವು ಸ್ವಚ್ಛತಾ ಗ್ರಾಮ ಅಭಿಯಾನಕ್ಕೆ ಒಂದು ಮಾದರಿಯಾಗಿದೆ ಎಂದು ಹೆಗ್ಗಳಿಕೆಯನ್ನು ವ್ಯಕ್ತಪಡಿಸಿದ್ದಾರೆ

ಕಳ್ಳರು ಖದೀಮರ ಭಯದಿಂದ ಲಾಕರ ಸಿಸಿ ಕ್ಯಾಮೆರಾ ಅಳವಡಿಸುವ ಈ ಕಾಲದಲ್ಲಿ ಮನೆಗೆ ಬೀಗ ಇರಲಿ ಬಾಗಿಲುಗಳೇ ಇಲ್ಲದಿರುವುದು ವಿಶೇಷ ಏಕೆಂದರೆ ಈ ಊರಿನ ಪ್ರತಿ ಒಬ್ಬರಮೇಲೆ ಇರುವ ನಂಬಿಕೆ ಹಾಗು ನಡವಳಿಕೆ ಹೀಗಾಗಿಯೇ ಇದು ಪುಟ್ಟ ಗ್ರಾಮವಾಗಿದ್ದರು ಪ್ರಪಂಚವೇ ತನ್ನತ್ತ ನೀಡುವಂತೆ ಆಕರ್ಷಿಸಿದೆ ಈ ಗ್ರಾಮದ ಸ್ವಚ್ಛತೆ ಬಗ್ಗೆ ಎಷ್ಟು ಹೊಗಳಿದರು ಕಮ್ಮಿ ಈ ಹಳ್ಳಿಯ ಜನರ ಸಾಧನೆಯನ್ನ ಮೆಚ್ಚಲೆಬೇಕು ಇಂತಹ ಊರು ನಮ್ಮ ಭಾರತದಲ್ಲಿ ಇದೆ ಎಂಬುದೇ ನಮ್ಮ ಹೆಮ್ಮೆ ಇದನ್ನು ಆದರ್ಶವಾಗಿ ತಗೆದುಕೊಂಡು ಪ್ರತಿ ಗ್ರಾಮವು ಶುಚಿಯಾಗಿರಲಿ ಎಂಬುದೇ ಇದರ ಸಂದೇಶ

Leave a Comment

error: Content is protected !!