ದಪ್ಪ ಇದೀನಿ ಅಂತ ಡಯಟ್ ಪ್ಲಾನ್ ಮಾಡಿ ಜೀವನವನ್ನೇ ಹಾಳು ಮಾಡಿಕೊಂಡ ಚಿತ್ರರಂಗದ ಖ್ಯಾತ ನಟನ ಪತ್ನಿ

ಇತ್ತೀಚಿನ ದಿನಗಳಲ್ಲಿ ಪ್ರತಿಯೊಬ್ಬರೂ ಕೂಡ ಡಯಟ್ ವರ್ಕೌಟ್ ಎಂಬುದಾಗಿ ತಮ್ಮ ಫಿಟ್ನೆಸ್ ಅನ್ನು ಕಾಪಾಡಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ ಕೆಲವೊಮ್ಮೆ ಇಂತಹ ಜೀವನ ಕ್ರಮಗಳು ನಿಮ್ಮ ಪ್ರಾಣಕ್ಕೆ ಸಂಚಕಾರವನ್ನು ತರುವಂತಹ ಸಾಧ್ಯತೆ ಇರುತ್ತದೆ ಇದು ಈಗಾಗಲೇ ಸಾಬೀತು ಕೂಡ ಆಗಿದೆ. ಹೌದು ಗೆಳೆಯರೇ ನಾವು ಮಾತನಾಡಲು ಹೊರಟಿರುವುದು ಕನ್ನಡ ಚಿತ್ರರಂಗ ಕಂಡಂತಹ ಖ್ಯಾತ ನಟ ಕಲ್ಯಾಣಕುಮಾರ್ ಅವರ ಪುತ್ರ ಭರತ್ ಕುಮಾರ್ ಅವರ ಪತ್ನಿ ಪ್ರಿಯದರ್ಶಿನಿ ಅವರ ಬಗ್ಗೆ.

ಭರತ್ ಕುಮಾರ್ ಅವರ ಪತ್ನಿ ಪ್ರಿಯದರ್ಶಿನಿ ಅವರು ಇತ್ತೀಚೆಗೆ ತಮ್ಮ ಆಹಾರ ಕ್ರಮದಲ್ಲಿ ಏಕಾಏಕಿಯಾಗಿ ದೊಡ್ಡ ಮಟ್ಟದ ಬದಲಾವಣೆಯನ್ನು ತಂದಿದ್ದರು. ಇದರಲ್ಲಿ ಡೈರಿ ಫುಡ್ ಗಳು ಯಾವುದು ಕೂಡ ಇರಲಿಲ್ಲ. ಹಣ್ಣು ತರಕಾರಿ ಹಾಗೂ ಮೀನಿನಂತಹ ಸಂಸ್ಕರಿಸಿದ ಫುಡ್ ಗಳನ್ನು ಮಾತ್ರ ಪ್ರಿಯದರ್ಶಿನಿ ಅವರು ಸೇವಿಸುತ್ತಿದ್ದರು ಹೀಗಾಗಿ ಅವರ ಶುಗರ್ ಲೆವೆಲ್ ತುಂಬಾನೇ ಮಿತಿಮೀರಿ ಹೋಗಿತ್ತು. ಹೀಗಾಗಿ ಅವರು ಕೋಮಾ ಪರಿಸ್ಥಿತಿಗೆ ಹೋಗಿದ್ದರು.

ನಿಮಗೆ ಗೊತ್ತಾ ಗೆಳೆಯರೇ ಭರತ್ ಕುಮಾರ್ ಅವರ ಪತ್ನಿ ಪ್ರಿಯದರ್ಶಿನಿ ಅವರು ಕೋಮಾಗೆ ತೆರಳಿದ್ದು ಮೂರು ತಿಂಗಳ ಹಿಂದೆ. ಮೂರು ತಿಂಗಳಿನಿಂದಲೂ ಕೂಡ ಚೆನ್ನೈನ ಪ್ರತಿಷ್ಠಿತ ಆಸ್ಪತ್ರೆ ಒಂದರಲ್ಲಿ ಅವರಿಗೆ ಚಿಕಿತ್ಸೆಯನ್ನು ನೀಡಲಾಗುತ್ತಿತ್ತು ಅವರನ್ನು ಉಳಿಸಿಕೊಳ್ಳುವಂತಹ ಎಲ್ಲಾ ಪ್ರಯತ್ನವನ್ನು ಕೂಡ ಶತಾಯಗತಾಯ ಎನ್ನುವಂತೆ ಮಾಡಲಾಗುತ್ತಿತ್ತು. ಆದರೆ ಕೊನೆಗೂ ಕೂಡ ವೈದ್ಯರು ನಡೆಸಿದಂತಹ ಪ್ರಯತ್ನ ನೀರಿನಲ್ಲಿ ಹೋಮ ಮಾಡಿದಂತಾಗಿದೆ ಹಾಗೂ ಪ್ರಿಯದರ್ಶಿನಿ ಅವರು ಈಗ ಕೊನೆ ಉಸಿರನ್ನು ಎಳೆದಿದ್ದಾರೆ.

ಭರತ್ ಕುಮಾರ್ ಹಾಗೂ ಪ್ರಿಯದರ್ಶಿನಿ ದಂಪತಿಗಳಿಗೆ ಒಬ್ಬ ಮಗ ಹಾಗೂ ಮಗಳು ಕೂಡ ಇದ್ದು ಪ್ರಿಯದರ್ಶಿನಿ ಅವರು ಈಗ ಇಬ್ಬರೂ ಮಕ್ಕಳನ್ನು ಬಿಟ್ಟು ಬಾರದ ಲೋಕದತ್ತ ಪ್ರಯಾಣವನ್ನು ಬೆಳೆಸಿದ್ದಾರೆ ಇದು ನಿಜಕ್ಕೂ ಕೂಡ ಇಡೀ ಕುಟುಂಬವನ್ನೇ ತಲ್ಲಣ ಗೊಳಿಸಿದೆ. ಇನ್ನು ಭರತ್ ಕುಮಾರ್ ಅವರು ಕನ್ನಡ ಚಿತ್ರರಂಗದ ಅರವತ್ತು ಹಾಗೂ ಎಪ್ಪತ್ತರ ದಶಕದಲ್ಲಿ ಸೂಪರ್ ಸ್ಟಾರ್ ಆಗಿ ಕಾಣಿಸಿಕೊಂಡಿದ್ದ ಕಲ್ಯಾಣ್ ಕುಮಾರ್ ಅವರ ಪುತ್ರ ಆದರೆ ಅವರು ತಮಿಳು ಚಿತ್ರರಂಗದಲ್ಲಿ ತಮ್ಮ ಕರಿಯರ್ ಅನ್ನು ಕಂಡುಕೊಂಡಿದ್ದಾರೆ.

Leave a Comment

error: Content is protected !!