ಹೋಟೆಲ್ ಆಹಾರಗಳನ್ನು ಸೇವಿಸುವುದಕ್ಕೂ ಮುಂಚೆ ನಾವೀಗ ಒಂದೆರಡು ಸಲ ಯೋಚನೆ ಮಾಡುವಂಥ ಪರಿಸ್ಥಿತಿ ಬಂದಿದೆ. ತಮಿಳುನಾಡಿನಲ್ಲಿ ಹೋಟೆಲ್ ನಲ್ಲಿ ಆಹಾರ ಸೇವನೆ ಮಾಡಿ ಜೀವ ಕಳೆದುಕೊಳ್ಳುವವರ ಸಂಖ್ಯೆ ಹೆಚ್ಚಾಗುತ್ತಿದೆ. ಇತ್ತೀಚೆಗಷ್ಟೇ ಪುಟ್ಟ ಬಾಲಕ ಪರೋಟ ತಿಂದು ಜೀವವನ್ನು ಕಳೆದುಕೊಂಡಿದ್ದ. ಹಾಗೆ ಚಿಕನ್ ಶವರ್ಮ ತಿಂದು 15 ವಿದ್ಯಾರ್ಥಿಗಳು ಅಸ್ವಸ್ಥಗೊಂಡಿದ್ದರು ಹಾಗೆ ಒಂದು ವಿದ್ಯಾರ್ಥಿನಿ ತನ್ನ ಜೀವವನ್ನೇ ಕಳೆದುಕೊಂಡರು. ಇಂಥ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇವೆ.

ಆಪಲ್ ತಿಂಡಿಗಳನ್ನು ತಿಂದು ಜೀವ ಕಳೆದುಕೊಂಡವರ ಸಂಖ್ಯೆ ಹೆಚ್ಚಾಗುತ್ತಿದೆ. ಅದರಲ್ಲೂ ವಿಶೇಷವಾಗಿ ವಿದ್ಯಾರ್ಥಿಗಳಲ್ಲಿ ಈ ಬದಲಾವಣೆಗಳು ಕಂಡು ಬರುತ್ತಿರುವುದು ನಿಜಕ್ಕೂ ಶಾಕಿಂಗ್ ವಿಷಯ. ಇದೀಗ ಇಂಥಹದ್ದೇ ಇನ್ನೊಂದು ಘಟನೆ ಚೆನ್ನೈನಲ್ಲಿ ನಡೆದಿದೆ. ತಿರು ಮುರುಗನ್ ಎಂಬ 17ವರ್ಷದ ವಿದ್ಯಾರ್ಥಿ. ಈತ ತಿರುವಣ್ಣಾಮಲೈ ಜಿಲ್ಲೆಯ ಅರಣಿ ಪಟ್ಟಣದ ಆಪಲ್ ಶಾಲೆಯ ಮಾಲೀಕ ಗಣೇಶ್ ಅವರ ಪುತ್ರ.  ಗಣೇಶನಿಗೆ ಇಬ್ಬರು ಪುತ್ರರು ಇಬ್ಬರು ಪುತ್ರಿಯರು ಒಬ್ಬ ಪುತ್ರ ತಿರುಮುರುಗನ್.

ತಿರುಮುರುಗನ್ ಎರಡನೇ ಪಿಯುಸಿ ಪರೀಕ್ಷೆ ಬರೆದು ತನ್ನ ರಿಸಲ್ಟ್ ಗೆ ಕಾಯುತ್ತಿದ್ದ. ರಜೆಯಿದ್ದ ಕಾರಣ ತನ್ನ ಸ್ನೇಹಿತರೊಂದಿಗೆ ಹೊರಗಡೆ ರೆಸ್ಟೋರೆಂಟ್ ಗೆ ಊಟ ಮಾಡಲು ಹೋಗೋಕೆ ರೆಡಿಯಾಗಿದ್ದ. ಮೇ 24 ರಂದು ತಿರುಮುರುಗನ್ ತನ್ನ ಸ್ನೇಹಿತರೊಂದಿಗೆ ಅರಣಿ ಟೌನ್ ಗಾಂಧಿ ರಸ್ತೆಯ 5 ಸ್ಟಾರ್ ಎಲೈಟ್ ಹೋಟೆಲ್​ನಲ್ಲಿ ಭರ್ಜರಿಯಾಗಿ ಊಟ ಮಾಡೋಕೆ ಹೋಗಿದ್ದ. ಆಗ ತಿರುಮುರುಗನ್ ಮತ್ತು ಅವನ ಸ್ನೇಹಿತರು ಊಟಕ್ಕೆಂದು ತಂದೂರಿ ಚಿಕನ್ ಮತ್ತು ಫ್ರೈಡ್ ರೈಸ್ ಆರ್ಡರ್ ಮಾಡಿದ್ದರು.

ಆದರೆ ಆ ದಿನದಿಂದ ಊಟವೇ ಇವನ ಶಿವ ಬಲಿತೆಗೆದುಕೊಳ್ಳುತ್ತದೆ ಎಂದು ಅವನಿಗೆ ತಿಳಿದಿರಲಿಲ್ಲ. ಊಟ ತಿಂಡಿ ರಾತ್ರಿ ಮೇ 24 ರಂದು ತಿರುಮುರುಗನ್ ಗೆ ಹೊಟ್ಟೆನೋವು ಮತ್ತು ವಾಂತಿ-ಬೇಧಿ ಶುರುವಾಯಿತು. ತಕ್ಷಣವೇ ಆತನನ್ನು ಆಸ್ಪತ್ರೆಗೆ ಕರೆದುಕೊಂಡು ಹೋದರು. ಮತ್ತೆ ಮೇ 29 ನೇ ತಾರೀಕಿನಂದು ತಿರುಮಲದಲ್ಲಿರುವ ತೀವ್ರವಾದ ಹೊಟ್ಟೆನೋವು ಕಾಣಿಸಿಕೊಂಡಿತ್ತು. ದುರದೃಷ್ಟವಶಾತ್ ಈತನನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗುವ ದಾರಿಯಲ್ಲೇ ತಿರುಮುರುಗನ್ ಕೊನೆ ಉಸಿರು ಬಿಟ್ಟ.

ತಿರುಮುರುಗನ್ ಜೊತೆ ಹೋಟೆಲ್ ನಲ್ಲಿ ಊಟ ಮಾಡಿದ ಅವನ ಸ್ನೇಹಿತರಿಗೆ ಕೂಡ ಆರೋಗ್ಯದಲ್ಲಿ ಏರುಪೇರು ಕಂಡುಬಂದಿತ್ತು ಈ ವಿಷಯ ತಿಳಿದ ಕೂಡಲೇ ತಿರುಮುರುಗನ್ ತಂದೆ ಗೆ ಹೋಟೆಲ್ ನ ಅಹಾರದ ಮೇಲೆ ಸಂಶಯ ಹುಟ್ಟುತ್ತದೆ. ನನ್ನ ಮಗನ ಸಾ’ ವಿಗೆ ಆ ಹೋಟೆಲ್ ನ ಆಹಾರವೇ ಕಾರಣ ಎಂದು ತಿರುಮುರುಗನ್ ತಂದೆ ಗಣೇಶ್ ಇದೀಗ ದೂರನ್ನು ದಾಖಲಿಸಿದ್ದಾರೆ. ಈಗಿನ ಕಾಲದಲ್ಲಿ ಆಹಾರದ ಗುಣಮಟ್ಟವನ್ನು ಹೋಟೆಲ್ ಗಳು ಕಳೆದುಕೊಳ್ಳುತ್ತಿವೆ. ಈ ರೀತಿಯಾದ ಘಟನೆಗಳನ್ನು ಕೇಳಿದಮೇಲೆ ನಮಗೆಲ್ಲ ಹೋಟೆಲ್ ಗೆ ಹೋಗಿ ತಿಂಡಿ ತಿನ್ನಬೇಕೋ ಬೇಡವೋ ಎಂದು ಯೋಚಿಸಬೇಕಾದ ಪರಿಸ್ಥಿತಿ ಬಂದಿದೆ.

By admin

Leave a Reply

Your email address will not be published.