ಬೀದಿ ನಾಯಿಗಳ ಹಾವಳಿಯ ನಿಯಂತ್ರಣಕ್ಕೆ ರಾಜ್ಯ ಸರ್ಕಾರ ತೆಗೆದುಕೊಂಡ ಮಹತ್ವದ ನಿರ್ಧಾರ ಏನು?

Stray Dogs ರಾಜ್ಯದಲ್ಲಿ ಹೆಚ್ಚುತ್ತಿರುವ ಬೀದಿ ನಾಯಿಗಳ(Stray Dogs) ಕಾಟಕ್ಕೆ ಕೊನೆಗೂ ರಾಜ್ಯ ಸರ್ಕಾರ ಒಂದು ಮಹತ್ವದ ನಿರ್ಧಾರವನ್ನು ತೆಗೆದುಕೊಂಡಂತಿದೆ. ಇದರ ಮೊದಲ ಹೆಜ್ಜೆಯಾಗಿ ಬೀದಿನಾಯಿಗಳ ಸಂತಾನ ನಿಯಂತ್ರಣ ನಿಯಮವನ್ನು ಜಾರಿಗೆ ತರಲಾಗಿದೆ. ನಗರ ಅಭಿವೃದ್ಧಿ ಇಲಾಖೆ ಹಾಗೂ ಪಶುಪಾಲನೆ ಹಾಗೂ ಪಶುವೈದ್ಯ ಇಲಾಖೆಯ ಜಂಟಿ ಆಯೋಜನೆಯಲ್ಲಿ ಇದರ ಅನುಷ್ಠಾನವನ್ನು ನಿರ್ವಹಿಸಲಾಗುವುದು ಎಂಬ ಸುತ್ತೋಲೆ ಹೊರಬಂದಿದೆ.

ಪುರಸಭೆ ನಗರಸಭೆ ಪಟ್ಟಣ ಪಂಚಾಯಿತಿ ನಗರ ಪಾಲಿಕೆಗಳ ಸುತ್ತಳತೆಯ ವ್ಯಾಪ್ತಿಯಲ್ಲಿ ಕಂಡುಬರುವಂತಹ ಬೀದಿ ನಾಯಿಗಳ(Stray Dogs) ಸಂತಾನ ನಿಯಂತ್ರಣದ ಯೋಜನೆಯನ್ನು ಅದಕ್ಕೆ ಸಂಬಂಧಪಟ್ಟಂತಹ ಇಲಾಖೆಗಳಿಗೆ ನಿಯೋಜಿಸಲಾಗಿದ್ದು ಅದು ಅವುಗಳ ಆಧ್ಯ ಕರ್ತವ್ಯ ಎಂಬುದಾಗಿ ಕೂಡ ಈಗಾಗಲೇ ಅಧಿಕೃತವಾಗಿ ಪ್ರಕಟಣೆಯನ್ನು ಹೊರಡಿಸಲಾಗಿದೆ. ನಾಯಿಗಳು ಮೂಕ ಪ್ರಾಣಿಗಳು ನಿಜ ಆದರೆ ಕೆಲವು ಕಡೆಗಳಲ್ಲಿ ಅವುಗಳಿಂದ ತೊಂದರೆಗಳು ಕೂಡ ಉಂಟಾಗುತ್ತಿದ್ದು ಇನ್ನೂ ಕೆಲವು ಕಡೆಗಳಲ್ಲಿ ಅವುಗಳನ್ನು ನೋಡಿಕೊಳ್ಳದೆ ಇರುವುದರಿಂದಾಗಿ ಬೀದಿ ನಾಯಿಗಳು ಅನಾವಶ್ಯಕವಾಗಿ ಮರಣ ಹೊಂದಬೇಕಾದ ಪರಿಸ್ಥಿತಿ ಕೂಡ ಎದುರಾಗುತ್ತಿದೆ.

ಈಗ ರಾಜ್ಯ ಸರ್ಕಾರ ಹೊರಡಿಸಿರುವಂತಹ ಈ ಹೊಸ ನಿಯಮ ಸರಿಯಾದ ರೀತಿಯಲ್ಲಿ ಅನುಷ್ಠಾನಕ್ಕೆ ಬಂದರೆ ಖಂಡಿತವಾಗಿ ಬೀದಿ ನಾಯಿಗಳ(Stray Dogs) ಸಂಖ್ಯೆ ಗಣನೀಯವಾಗಿ ನಿಯಂತ್ರಣಗೊಂಡು ಕಡಿಮೆ ಆಗಲಿದೆ. ಈ ಮೂಲಕ ನಾಯಿಗಳಿಂದ ಹರಡಬಹುದಾದಂತಹ ರೋ’ಗದ ಲಕ್ಷಣಗಳನ್ನು ಅತ್ಯಂತ ಪರಿಣಾಮಕಾರಿಯಾಗಿ ಬಗೆಹರಿಸಬಹುದಾಗಿದೆ ಎಂಬುದಾಗಿ ಹೇಳಬಹುದಾಗಿದೆ.

ಒಟ್ಟಾರೆಯಾಗಿ ಸಂಬಂಧಪಟ್ಟಂತಹ ಪ್ರದೇಶ ವ್ಯಾಪ್ತಿಯಲ್ಲಿ ಬೀದಿ ನಾಯಿಗಳ ನಿಯಂತ್ರಣಕ್ಕೆ ಎಬಿಸಿ ಸಂಸ್ಥೆ(ABC) ರೂಪಿಸಿರುವ ಅಂತಹ ಯೋಜನೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಕ್ಕೆ ತಂದು ಅಲ್ಲಿ ಬೀದಿನಾಯಿಗಳ ಸಮಸ್ಯೆಗೆ ಒಂದು ಶಾಶ್ವತ ಪರಿಹಾರವನ್ನು ಹುಡುಕುವಂತಹ ಕೆಲಸ ಇದಾಗಿದ್ದು ಮುಂದಿನ ದಿನಗಳಲ್ಲಿ ಇದು ಯಾವ ರೀತಿ ಕಾರ್ಯನಿರ್ವಹಿಸುತ್ತದೆ ಹಾಗೂ ಯಾವ ರೀತಿ ಪರಿಣಾಮಕಾರಿಯಾಗಿ ಕಂಡುಬರಲಿದೆ ಎಂಬುದನ್ನು ಕಾದು ನೋಡಬೇಕಾಗಿದೆ. ಈ ಬಗ್ಗೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ತಪ್ಪದೇ ಕಾಮೆಂಟ್ ಬಾಕ್ಸ್ ನಲ್ಲಿ ಕಾಮೆಂಟ್ ಮಾಡುವ ಮೂಲಕ ನಮ್ಮೊಂದಿಗೆ ಹಂಚಿಕೊಳ್ಳಿ.

Leave a Comment

error: Content is protected !!