ಪದವಿ ಪೂರ್ವ ಕಾಲೇಜಿನಲ್ಲಿ ಕೂಲಿ ಕೆಲಸ ಮಾಡುವ ಮಹಿಳೆಯ ಮಗ ಇಂದು ಕರ್ನಾಟಕ ರಾಜ್ಯಕ್ಕೆ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಪ್ರಥಮ ಸ್ಥಾನ ಗಳಿಸಿದ್ದಾನೆ. ಮನಸ್ಸಿದ್ದರೆ ಮಾರ್ಗ ಉಂಟು. ಪರಿಶ್ರಮ ಮತ್ತು ಗುರಿ ಇದ್ದರೆ ಮನುಷ್ಯನಿಗೆ ಬಡತನ ಅಡ್ಡಿಯಾಗುವುದಿಲ್ಲ ಎಂದು ಈ ಹುಡುಗ ಸಾಬೀತು ಮಾಡಿದ್ದಾನೆ. ಇಂದು (19 ಮೇ) ರಂದು ಹತ್ತನೇ ತರಗತಿಯ ಫಲಿತಾಂಶ ಹೊರಬಿದ್ದಿದೆ ಕರ್ನಾಟಕ ರಾಜ್ಯದಲ್ಲಿ 145 ವಿದ್ಯಾರ್ಥಿಗಳು 625 ಕ್ಕೆ 625 ಅಂಕಗಳನ್ನು ಪಡೆದು ಸಾಧನೆ ಮಾಡಿದ್ದಾರೆ.

ಈ 145 ವಿದ್ಯಾರ್ಥಿಗಳಲ್ಲಿ ಅಮಿತ್ ಕೂಡ ಒಬ್ಬ. ಈ ಬಾಲಕ ಅಮಿತ್ ಮಾದರ್ ಟಾಪರ್ ಎಂದು ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ಪ್ರಕಟಣೆ ನೀಡಿದೆ. ಇದರ ಬೆನ್ನಲ್ಲೆ ಆಮಿತ್ ಗೆ ಶಿಕ್ಷಕರು, ಜಿಲ್ಲಾ ಶಿಕ್ಷಣಾಧಿಕಾರಿಗಳು ಕರೆ ಮಾಡಿ ವಿಷಯ ತಿಳಿಸಿದ್ದಾರೆ. ಅಮಿತ್ ಕುಟುಂಬವರು ತುಂಬಾ ಸಂತೋಷದಲ್ಲಿದ್ದಾರೆ. 145 ವಿದ್ಯಾರ್ಥಿಗಳಲ್ಲಿ ಅಮಿತ್ ನದ್ದು ವಿಶೇಷ ಸಾಧನೆ. ಏಕೆಂದರೆ ಅಮಿತ್ ಒಬ್ಬ ಸಾಧಾರಣ ಕೂಲಿ ಕೆಲಸ ಮಾಡುವ ಮಹಿಳೆಯ ಮಗ.

ಅಮಿತ್ ವಿಜಯಪುರ ಜಿಲ್ಲೆ, ವಿಜಯಪುರ ಗ್ರಾಮಾಂತರ ತಾಲ್ಲೂಕಿನ ಜುಮನಾಳ ಎಂಬ ಗ್ರಾಮದ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿ. ಈತನ ತಾಯಿಯ ಹೆಸರು ಮಾದೇವಿ. ಈತನಿಗೆ ತನ್ನ ತಾಯಿಯೇ ಸರ್ವಸ್ವ. ಅಮಿತ್ ಹುಟ್ಟಿದ ಕೆಲವೇ ತಿಂಗಳಿನಲ್ಲಿ ಅವನ ತಂದೆ ತೀರಿಕೊಂಡಿದ್ದರು.ಅಮಿತ್ ತಾಯಿ ಮಾದೇವಿ ಜುಮನಾಳ ಗ್ರಾಮದಲ್ಲಿ ಕೂಲಿ ಮಾಡಿ ಮಕ್ಕಳನ್ನು ಸಾಕುತ್ತಿದ್ದಳು ಈಕೆಗೆ 3 ಜನ ಮಕ್ಕಳು. ಪ್ರತಿದಿನ ಮಾದೇವಿ 200 ರೂಪಾಯಿ ಸಂಪಾದನೆ ಮಾಡುತ್ತಾಳೆ. ತಾನು ಕೂಲಿ ಮಾಡಿದರೂ ಸರಿ ತನ್ನ ಮಕ್ಕಳು ವಿದ್ಯಾವಂತರಾಗಬೇಕು ಎಂಬುದು ಮಾದೇವಿಯ ಛಲ..

ಮಾದೇವಿಯ ಹಿರಿಯ ಮಗಳು ಪದವಿ ಅಂತಿಮ ವರ್ಷ ದಲ್ಲಿ ಓದುತ್ತಿದ್ದಾಳೆ, ಎರಡನೇ ಮಗ ಪದವಿ ಪೂರ್ವ ಕಾಲೇಜಿನಲ್ಲಿ ಪ್ರಥಮ ವರ್ಷ ಓದುತ್ತಿದ್ದಾನೆ. ಈಗ ಕಿರಿಯ ಮಗ ಅಮಿತ್ ಎಸ್ಎಸ್ಎಲ್ಸಿ ಮುಗಿಸಿ ರಾಜ್ಯಕ್ಕೆ ಪ್ರಥಮ ಸ್ಥಾನವನ್ನು ಗಳಿಸುವ ಮೂಲಕ ತಾಯಿಯ ಶವವನ್ನು ಸಾರ್ಥಕ ಮಾಡಿದ್ದಾನೆ. ಅಮಿತ್ ಬಹಳ ಚುರುಕಾದ ಬಾಲಕ. ಈತ ಯೋಚನೆ ಮಾಡುವುದು ಬೇರೆ ಮಕ್ಕಳಿಗಿಂತ ವಿಭಿನ್ನವಾಗಿತ್ತು. ಈತನ ವಿದ್ಯಾಭ್ಯಾಸದ ಶಿಸ್ತಿನ ಕ್ರಮ ಹೇಗಿತ್ತು ಗೊತ್ತಾ..

ಅಮಿತ್ ತನ್ನ ವಯಸ್ಸಿನ ಹುಡುಗಾಟಗಳನ್ನೆಲ್ಲ ಬದಿಗಿರಿಸಿ ಪ್ರತಿದಿನ ಎಂಟರಿಂದ ಹತ್ತು ತಾಸುಗಳ ಕಾಲ ಓದುತ್ತಿದ್ದ.ಲಾಕ್ ಡೌನ್ ಸಮಯದಲ್ಲಿ ಶಾಲೆಗಳು ತೆರೆಯದೇ ಇದ್ದಾಗ ಅಮಿತ್ ಹಾಗೂ ಹೀಗೂ ಸಾಲ ಮಾಡಿ ಸ್ಮಾರ್ಟ್ ಫೋನ್ ಖರೀದಿ ಮಾಡಿದ್ದ. ಅಮಿತ್ ಸ್ಮಾರ್ಟ್ ಫೋನ್ ನಲ್ಲಿ ತನ್ನ ಟೀಚರ್ ಗಳಿಗೆ ಕರೆ ಮಾಡಿ ತನ್ನ ಡೌಟ್ ಗಳನ್ನು ಕೇಳುತ್ತಿದ್ದ ಮತ್ತು ಮೊಬೈಲ್ ನಲ್ಲಿಯೇ ಪಾಠಗಳನ್ನು ಕೇಳಿಸಿಕೊಳ್ಳುತ್ತಿದ್ದ. ಹಾಗೆ ತಾನೇ ಸ್ವಯಂ ಇಚ್ಛೆಯಿಂದ ಮುಂದೆ ಬಂದು ಸ್ನೇಹಿತರನ್ನೆಲ್ಲ ಒಟ್ಟುಗೂಡಿಸಿ ವಾಟ್ಸ್ ಆ್ಯಪ್ ಗ್ರೂಪ್ ರಚಿಸಿ ಶಿಕ್ಷಕರಿಗೆ ಪಾಠ ಮಾಡುವಂತೆ ಒತ್ತಾಯ ಮಾಡುತ್ತಿದ್ದ. ಇಂದು ಅಮಿತ್ ನ ಈ ಎಲ್ಲ ಪರಿಶ್ರಮಕ್ಕೆ ತಕ್ಕ ಪ್ರತಿಫಲ ಸಿಕ್ಕಿದೆ.

By admin

Leave a Reply

Your email address will not be published.