ಹಣ ವಸೂಲಿ ಮಾಡ್ತಿದ್ದ RTO ಅಧಿಕಾರಿಗಳನ್ನು, ಲಾರಿ ಚಾಲಕನ ವೇಷದಲ್ಲಿ ರೆಡ್ ಹ್ಯಾಂಡ್ ಆಗಿ ಹಿಡಿದ ಎಸ್​ಪಿ ರವಿ ಚನ್ನಣ್ಣನವರ್


ರಾಜ್ಯದಲ್ಲಿ ಕೊರೋನಾ ಎಫೆಕ್ಟ್ ನಿಂದ ಇಡೀ ದೇಶವೇ ಲಾಕ್ ಡೌನ್ ಆಗಿರುವ ಹಿನ್ನಲೆಯಲ್ಲಿ ರಾಜ್ಯದಲ್ಲಿ ಯಾವುದೇ ವಾಹನಗಳು ಓಡಾಡದೆ ಇರುವ ಕ್ರಮ ಇರುವಾಗ, ಬರಿ ಸರಕು ಲಾರಿಗಳನ್ನು ಬಿಡುವ ಆದೇಶ ಇರುವ ನಿಟ್ಟಿನಲ್ಲಿ ಪರ್ಮಿಟ್ ಇಲ್ಲದ ಗಾಡಿಗಳನ್ನು ಟೆಂಪ್ರವರಿ ಪರ್ಮಿಟ್ ಕೊಡುವ ಮೂಲಕ 500 ರಿಂದ 1000 ರೂಗಳನ್ನು ವಸಲಿ ಮಾಡುತ್ತಿದ್ದರು. ಈ ಒಂದು ಭ್ರಷ್ಟ ಕೃತ್ಯಕ್ಕೆ ಕಡಿವಾಣ ಹಾಕಲು ಲಾರಿ ಚಾಲಕನ ವೇಷದಲ್ಲಿ ಕರ್ನಾಟಕದ ಸಿಂಗಂ ಅನಿಸಿಕೊಂಡಿರುವ ಎಸ್ ಪಿ ರವಿ ಚನ್ನಣ್ಣನವರ್ ಆರ್​ಟಿಒ ಅಧಿಕಾರಿಗಳನ್ನು ರೆಡ್ ಹ್ಯಾಂಡಾಗಿ ಹಿಡಿದಿದ್ದಾರೆ.

ಹೌದು ಅತ್ತಿಬೆಲೆಯಲ್ಲಿರುವ ಕರ್ನಾಟಕ-ತಮಿಳುನಾಡು ಗಡಿಭಾಗ ಚೆಕ್​ಪೋಸ್ಟ್​ನಲ್ಲಿ ನಿನ್ನೆ ರಾತ್ರಿ ಈ ಘಟನೆ ನಡೆದಿದ್ದು, ಹೋಮ್ ಗಾರ್ಡ್ ವಿವೇಕ್, ಆರ್​ಟಿಒ ಬ್ರೇಕ್ ಇನ್ಸ್​ಪೆಕ್ಟರ್​ಗಳಾದ ಕರಿಯಪ್ಪ ಮತ್ತು ಜಯಣ್ಣ ಅವರನ್ನು ಬಂಧಿಸಲಾಗಿದೆ. ಇವರಿಂದ 12,350 ರೂಪಾಯಿ ವಶಪಡಿಸಲಾಗಿದೆ ಅಷ್ಟೇ ಅಲ್ಲದೆ ಬ್ರೇಕ್ ಇನ್ಸ್​ಪೆಕ್ಟರ್​ಗಳನ್ನ ಸೇವೆಯಿಂದ ತಗೆಯಲಾಗಿದೆ ಅನ್ನೋದನ್ನ ಹೇಳಾಗಿದೆ.

ಇನ್ನು ರವಿ ಡಿ ಚನ್ನಣ್ಣನವರ್ ಅವರು ಬೆಂಗಳೂರು ಗ್ರಾಮಾಂತರ ಎಸ್​ಪಿ ಆಗುವುದಕ್ಕಿಂತ ಮುಂಚೆ ಹಲವು ಜಿಲ್ಲೆಗಳನ್ನು ತಮ್ಮ ಕರ್ತವ್ಯವನ್ನು ಮಾಡಿದ್ದೂ ಜನರ ಪ್ರೀತೆ ಪಾತ್ರರಾಗಿದ್ದಾರೆ ಮತ್ತೊಮ್ಮೆ ಭ್ರಷ್ಟ ಅಧಿಕಾರಗಳ ಬೇಟೆಯನ್ನು ಕರ್ನಾಟಕದ ಸಿಂಗಂ ಮುಂದುವರೆಸಿದ್ದಾರೆ.


Leave A Reply

Your email address will not be published.