ಮಗಳು ಬೇಡ ಅತ್ತೆನೇ ಬೇಕು ಎಂದು ಈ ಹುಡುಗ ಮಾಡಿದ್ದೇನು ಗೊತ್ತಾ? ಮುಂದೆ ಆಗಿದ್ದೆ ಬೇರೆ

Kannada Real Story ನಮ್ಮ ದೇಶ ಸಂಬಂಧ ಹಾಗೂ ಸಂಪ್ರದಾಯಗಳಿಗೆ ಬೆಲೆ ನೀಡುವಂತಹ ದೇಶ. ಪ್ರತಿಯೊಬ್ಬರಿಗೂ ಗೌರವವನ್ನು ನೀಡುವುದನ್ನು ಚಿಕ್ಕವಯಸ್ಸಿನಲ್ಲಿಯೇ ಕಲಿಸಿ ಕೊಡುತ್ತಾರೆ. ಆದರೆ ಇತ್ತೀಚಿನ ದಿನಗಳಲ್ಲಿ ಸಂಬಂಧಗಳಿಗೆ ಬೆಲೆ ನೀಡುವಂತಹ ಪದ್ಧತಿಯೇ ನಮ್ಮ ಯುವ ಜನಾಂಗದಲ್ಲಿ ಮಾಯವಾಗುತ್ತಿದೆ ಅದಕ್ಕೆ ಉದಾಹರಣೆ ಎನ್ನುವಂತೆ ರಾಜಸ್ಥಾನದಲ್ಲಿ ಒಂದು ಘಟನೆ(Incident) ನಡೆದಿದೆ. ಹೌದು ಮಿತ್ರರೇ 27 ವರ್ಷದ ಹುಡುಗ 40 ವರ್ಷದ ಮಹಿಳೆಯ ಜೊತೆಗೆ ಓಡಿ ಹೋಗಿದ್ದಾನೆ. ಆ ಮಹಿಳೆಗೆ ನಾಲ್ಕು ಜನ ಮಕ್ಕಳು ಕೂಡ ಇದ್ದಾರೆ.

ಹೌದು ಸ್ವಂತ ಅಳಿಯನೇ ತನ್ನ ಅತ್ತೆಯ ಜೊತೆಗೆ ಓಡಿ ಹೋಗಿರುವ ಘಟನೆ ಇಲ್ಲಿ ನಡೆದಿದೆ. ಅತ್ತೆಗೆ ನಾಲ್ಕು ಮಕ್ಕಳು ಹಾಗೂ ಮದುವೆ ಆಗಿರುವ ಅಳಿಯನಿಗೆ ಕೂಡ ಮೂರು ಮಕ್ಕಳಿದ್ದಾರೆ. ಅತ್ತೆಯನ್ನು ಕಂಡರೆ ತುಂಬಾ ಇಷ್ಟ ಎನ್ನುವ ಕಾರಣದಿಂದಾಗಿ ಮಾವನಿಗೆ ಕುಡಿಸಿ ಅತ್ತೆಯನ್ನು ಕರೆದುಕೊಂಡು ಹೋಗಿದ್ದಾನೆ. ಅತ್ತೆಯನ್ನು ಅಳಿಯನೇ ಅಪಹರಿಸಿಕೊಂಡು ಹೋಗಿದ್ದಾನೆ ಎಂಬುದಾಗಿ ಸಂಬಂಧಿಕರು ಕೂಡಲೇ ಪೊಲೀಸ್ ಠಾಣೆಗೆ(Police Station) ದೂರನ್ನು ದಾಖಲಿಸಿದ್ದಾರೆ.

ಸಾಕಷ್ಟು ಸಮಯಗಳ ಹಿಂದೆನೇ ಇವರಿಬ್ಬರ ನಡುವೆ ಪ್ರೀತಿ ಮೊಳಕೆ ಹೊಡೆದಿತ್ತು ಆದರೆ ಅಳಿಯ ಸರಿಯಾದ ಸಮಯಕ್ಕಾಗಿ ಕಾಯುತ್ತಿದ್ದ. ಒಂದು ದಿನ ಮಾವನಿಗೆ ಕಂಠಪೂರ್ತಿ ಕುಡಿಸಿ ಆತ ಅಮಲಿನಲ್ಲಿದ್ದಾಗ ಅತ್ತೆಯನ್ನು ಹಾರಿಸಿಕೊಂಡು ಹೋಗಿದ್ದಾನೆ. ದೂರಿನಲ್ಲಿ ನನ್ನ ಅಳಿಯ ಹಾಗೂ ಮಗಳು ಡಿಸೆಂಬರ್ 30ಕ್ಕೆ ಬಂದಿದ್ದರು ಈ ಸಂದರ್ಭದಲ್ಲಿ ನಾವು ಪಾರ್ಟಿ(Party) ಮಾಡಿದ್ದೆವು. ಆ ಪಾರ್ಟಿಯಲ್ಲಿ ನನಗೆ ಸರಿಯಾಗಿ ಕೊಡಿಸಿ ಆ ಪರಿಸ್ಥಿತಿಯ ಲಾಭವನ್ನು ಪಡೆದುಕೊಂಡು ನನ್ನ ಹೆಂಡತಿಯನ್ನು ಅಪಹರಿಸಿಕೊಂಡು ಹೋಗಿದ್ದಾನೆ ಎಂಬುದಾಗಿ ಮಾವ ಪೊಲೀಸ್ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದಾರೆ.

ಅಮಲಿನಿಂದ ಎಚ್ಚರವಾದಾಗ ಇಬ್ಬರು ಕೂಡ ಕಾಣಿಸಿ ಕೊಳ್ಳಲಿಲ್ಲ ಎಂಬುದಾಗಿ ದೂರನ್ನು ದಾಖಲಿಸಿದ್ದು ಪೊಲೀಸರು ಕೂಡ ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ. ಒಟ್ಟಾರೆಯಾಗಿ ತಾಯಿ ಸಮಾನರಾದ ಅತ್ತೆಯ ಜೊತೆ ಈ ರೀತಿ ಸಂಬಂಧವನ್ನು ಬೆಳೆಸಿಕೊಂಡಿದ್ದು ನಿಜವಾಗಲೂ ವಿಪರ್ಯಾಸ ಎಂದು ಹೇಳಿದರೆ ತಪ್ಪಾಗಲಾರದು. ಈ ಘಟನೆಯ ಬಗ್ಗೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ನಮ್ಮೊಂದಿಗೆ ತಪ್ಪದೇ ಕಾಮೆಂಟ್ ಬಾಕ್ಸ್(Comment Box) ನಲ್ಲಿ ಕಾಮೆಂಟ್ ಮಾಡುವ ಮೂಲಕ ಮಿಸ್ ಮಾಡದೆ ಹಂಚಿಕೊಳ್ಳಿ.

Leave a Comment

error: Content is protected !!