ಸೈಮಾ ಅವಾರ್ಡ್ಸ್: ಪುನೀತ್ ಬೆಸ್ಟ್ ಆಕ್ಟರ್ ರಾಬರ್ಟ್ ಸಿನಿಮಾಗೆ ಎಷ್ಟು ಪ್ರಶಸ್ತಿ ಬಂತು? ಇಲ್ಲಿದೆ ಡಿಟೇಲ್ಸ್

ಬೆಂಗಳೂರಿನಲ್ಲಿ ನಡೆದ ಚೊಚ್ಚಲ SIIMA 2022 ಅವಾರ್ಡ್‌ ಕಾರ್ಯಕ್ರಮ ಮೊದಲ ದಿನವಾದ ಶನಿವಾರ ಹಲವು ವಿಶೇಷತೆಗಳಿಂದ ಕೂಡಿತ್ತು. ಕನ್ನಡ, ತೆಲುಗು, ತಮಿಳು, ಮಲಯಾಳಂ ಇಂಡಸ್ಟ್ರಿ ಮಂದಿಯ ಸಮಾಗಮದಿಂದ ಇಡೀ ಕಾರ್ಯಕ್ರಮಕ್ಕೆ ಹಬ್ಬದ ಕಳೆ ಬಂದಿತ್ತು. ಶನಿವಾರ ಕನ್ನಡ ಮತ್ತು ತೆಲುಗು ಎರಡು ಭಾಷೆಗಳ ಅವಾರ್ಡ್‌ ಪಟ್ಟಿ ಪ್ರಕಟಗೊಂಡಿದ್ದು, ಯುವರತ್ನ’ ಚಿತ್ರದ ನಟನೆಗಾಗಿ ಪುನೀತ್‌ ರಾಜ್‌ಕುಮಾರ್‌ಗೆ ಅತ್ಯುತ್ತಮ ನಟ ಪ್ರಶಸ್ತಿ ದೊರೆತರೆ, ರಾಬರ್ಟ್‌ ಚಿತ್ರದ ನಿರ್ದೇಶಕನಕ್ಕೆ ತರುಣ್‌ ಸುಧೀರ್‌ಗೆ ಅತ್ಯುತ್ತಮ ನಿರ್ದೇಶಕ ಪ್ರಶಸ್ತಿ ಲಭಿಸಿದೆ. ಪ್ರಶಸ್ತಿ ವಿಜೇತರ ಪಟ್ಟಿ ಇಲ್ಲಿದೆ.

ಪುನೀತ್ ರಾಜ್‌ಕುಮಾರ್ ಅವರಿಗೆ ಯುವರತ್ನ ಸಿನಿಮಾದ ನಟನೆಗಾಗಿ ಅತ್ಯುತ್ತಮ ನಟ ಪ್ರಶಸ್ತಿ ಲಭಿಸಿದೆ. ಮದಗಜ ಚಿತ್ರದ ನಟನೆಗಾಗಿ ಆಶಿಕಾ ರಂಗನಾಥ್ ಗೆ ಅತ್ಯುತ್ತಮ ನಟಿ ಪ್ರಶಸ್ತಿ ಸಿಕ್ಕಿದೆ. ಬಡವ ರಾಸ್ಕಲ್ ಚಿತ್ರದ ನಾಯಕಿ ಅಮೃತ ಅಯ್ಯಂಗಾರ್ ಅವರಿಗೆ ಅತ್ಯುತ್ತಮ ನಟಿ (ಕ್ರಿಟಿಕ್ಸ್) ಪ್ರಶಸ್ತಿ ಸಿಕ್ಕಿದೆ. ರಾಜ್ ಬಿ ಶೆಟ್ಟಿ ನಿರ್ದೇಶನದ ‘ಗರುಡ ಗಮನ ವೃಷಭ ವಾಹನ’ ಸಿನಿಮಾಗೆ ಅತ್ಯುತ್ತಮ ಚಿತ್ರ ಲಭಿಸಿದೆ. ರಾಬರ್ಟ್ ಚಿತ್ರಕ್ಕೆ ತರುಣ್ ಸುಧೀರ್ ಅವರಿಗೆ ಅತ್ಯುತ್ತಮ ನಿರ್ದೇಶಕ ಪ್ರಶಸ್ತಿ ಸಿಕ್ಕಿದೆ. ರಾಬರ್ಟ್ ಸಿನಿಮಾಗಾಗಿ ಸುಧಾಕರ್ ರಾಜ್ ಅವರಿಗೆ ಅತ್ಯುತ್ತಮ ಛಾಯಾಗ್ರಾಹಕ ಪ್ರಶಸ್ತಿ ದೊರೆತಿದೆ.

ರತ್ನನ್ ಪ್ರಪಂಚ ಸಿನಿಮಾದಲ್ಲಿನ ನಟನೆಗಾಗಿ ಪ್ರಮೋದ್ ಅವರಿಗೆ ಅತ್ಯುತ್ತಮ ಪೋಷಕ ನಟ ಪ್ರಶಸ್ತಿ ಸಿಕ್ಕಿದೆ. ದೃಶ್ಯ 2 ಸಿನಿಮಾದಲ್ಲಿನ ನಟನೆಗಾಗಿ ಆರೋಹಿ ನಾರಾಯಣ ಅವರಿಗೆ ಪೋಷಕ ಪಾತ್ರದಲ್ಲಿ ಅತ್ಯುತ್ತಮ ನಟಿ ಲಭಿಸಿದೆ. ಹೀರೊ ಚಿತ್ರದ ನಟನೆಗಾಗಿ ಪ್ರಮೋದ್ ಶೆಟ್ಟಿ ಅವರಿಗೆ ಅತ್ಯುತ್ತಮ ಖಳನಟ ಪ್ರಶಸ್ತಿ ದೊರೆತಿದೆ. ಹೀರೊ ಚಿತ್ರದ ನಟನೆಗಾಗಿ ಪ್ರಮೋದ್ ಶೆಟ್ಟಿ ಅವರಿಗೆ ಅತ್ಯುತ್ತಮ ಖಳನಟ ಪ್ರಶಸ್ತಿ ದೊರೆತಿದೆ. ಪೊಗರು ಚಿತ್ರದ ನಟನೆಗಾಗಿ ಚಿಕ್ಕಣ್ಣ ಅವರಿಗೆ ಅತ್ಯುತ್ತಮ ಹಾಸ್ಯನಟ ಪ್ರಶಸ್ತಿ ಸಿಕ್ಕಿದೆ. ಇಕ್ಕಟ್ ಸಿನಿಮಾಗಾಗಿ ನಾಗಭೂಷಣ ಎನ್ ಎಸ್ ಅವರಿಗೆ ಅತ್ಯುತ್ತಮ ಉದಯೋನ್ಮುಖ ನಟ ಪ್ರಶಸ್ತಿ ಲಭಿಸಿದೆ.

ಶರಣ್ಯ ಶೆಟ್ಟಿ ಅವರಿಗೆ 1980 ಚಿತ್ರದ ನಟನೆಗಾಗಿ ಅತ್ಯುತ್ತಮ ಉದಯೋನ್ಮುಖ ನಟಿ ಪ್ರಶಸ್ತಿ ಲಭಿಸಿದೆ. ಬಡವ ರಾಸ್ಕಲ್ ಸಿನಿಮಾ ನಿರ್ದೇಶನಕ್ಕಾಗಿ ಗುರು ಶಂಕರ್ ಅವರಿಗೆ ಅತ್ಯುತ್ತಮ ಉದಯೋನ್ಮುಖ ನಿರ್ದೇಶಕ ಪ್ರಶಸ್ತಿ ಸಿಕ್ಕಿದೆ. ಅರ್ಜುನ್ ಜನ್ಯ ಅವರಿಗೆ ಅತ್ಯುತ್ತಮ ಸಂಗೀತ ನಿರ್ದೇಶಕ ಪ್ರಶಸ್ತಿ ದೊರೆತಿದೆ. ನಿನ್ನ ಸನಿಹಕೆ ಸಿನಿಮಾದ ನಿನ್ನ ಸನಿಹಕೆ ಹಾಡಿಗಾಗಿ ವಾಸುಕಿ ವೈಭವ್ ಗೆ ಅತ್ಯುತ್ತಮ ಗೀತರಚನೆಕಾರ ಪ್ರಶಸ್ತಿ ಸಿಕ್ಕಿದೆ. ಯುವರತ್ನ ಸಿನಿಮಾದ ನೀನಾದೆ ನಾ ಹಾಡಿಗಾಗಿ ಅರ್ಮಾನ್ ಮಲಿಕ್, ಥಮನ್ ಎಸ್ ಅತ್ಯುತ್ತಮ ಹಿನ್ನೆಲೆ ಗಾಯಕ ಪ್ರಶಸ್ತಿ ಸಿಕ್ಕಿದೆ. ಗರುಡ ಗಮನ ವೃಷಭ ವಾಹನ ಚಿತ್ರದ ಸೂಜುಗದ ಸೂಜುಮಲ್ಲಿಗೆ ಹಾಡಿಗಾಗಿ ಚೈತ್ರ ಜೆ ಆಚಾರ್ ಅವರಿಗೆ ಅತ್ಯುತ್ತಮ ಹಿನ್ನೆಲೆ ಗಾಯಕಿ ದೊರೆತಿದೆ.

ಕೇರಳದ ಶ್ರೀಮಹಾಭೈರವಿ ಜೋತಿಷ್ಯ ತಂತ್ರಿಕ ಪೀಠ ಪ್ರಧಾನ್ ತಾಂತ್ರಿಕ ಶ್ರೀ ರಘುನಾಥ್ ಪಣಿಕಾರ್ ಆಚಾರ್ಯರು ಇವರು ನಿಮ್ಮ ಎಲ್ಲಾ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಸೂಚಿಸುತ್ತಾರೆ 9900804442
ಅಮಾವಾಸ್ಯೆಯ (ಅಮಾವಾಸ್ಯೆಯ ದಿನ) ರಾತ್ರಿಯ ಈ ಯಾಗವು ಸಂಪೂರ್ಣವಾಗಿ ಪ್ರಯೋಜನಕಾರಿಯಾಗಿದೆ ಮತ್ತು ಋಣಭಾರದ ಸಮಸ್ಯೆಗಳನ್ನು ನಾಶಪಡಿಸುತ್ತದೆ; ಶತ್ರು ಸಂಹಾರ, ಮಾಟ-ಮಂತ್ರ ಸೇರಿದಂತೆ ಶತ್ರುಗಳಿಂದ ಉಂಟಾಗುವ ದೋಷಗಳನ್ನು ಓಡಿಸಿ; ಕಾನೂನು ವಿಷಯಗಳಲ್ಲಿ ವಿಜಯವನ್ನು ಖಚಿತಪಡಿಸಿಕೊಳ್ಳಿ; ಹಿಂದಿನ ಜನ್ಮದ ಪಾಪಗಳನ್ನು ಕೊನೆಗೊಳಿಸಿ (ಪೂರ್ವ ಜನ್ಮ ಪಾಪ ನಿವಾರ್ಥಿ), ಪೂರ್ವಜರ ಶಾಪ (ಪಿತೃ ದೋಷ), ರೋಗಗಳನ್ನು ಕೊನೆಗೊಳಿಸಿ; ರಘು ದೋಷ ಶಾಂತಿ ಮತ್ತು ನಿಮಗೆ ಜೀವನದಲ್ಲಿ ಬಹಳಷ್ಟು ಸಂತೋಷ, ಶಾಂತಿ, ಸೌಕರ್ಯ ಮತ್ತು ಸಮೃದ್ಧಿಯನ್ನು ಒದಗಿಸುತ್ತದೆ.

Leave a Comment

error: Content is protected !!