ಅಮೇರಿಕಾದಿಂದ ಬಂದ ದಿನವೇ ಮನೆಯ ಮಾಲೀಕರಿಗೆ ಹತ್ತು ವರ್ಷಗಳ ಕಾಲ ಅವರದ್ದೇ ಮನೆಯ ಕಾರು ಚಾಲಕನಾಗಿದ್ದ ವ್ಯಕ್ತಿ ಮಾಡಿದ್ದೇನು ಗೊತ್ತಾ

ಈಗಿನ ಕಾಲದಲ್ಲಿ ನಾವು ಯಾರನ್ನು ನಂಬಿರುತ್ತೇವೊ ಅವರೇ ನಮಗೆ ಮೋಸ ಮಾಡುತ್ತಾರೆ. ಯಾರನ್ನು ನಂಬುವುದು ಯಾರನ್ನು ಬಿಡುವುದು ಎಂಬುದೇ ಗೊತ್ತಾಗಲ್ಲ ಯಾವಾಗ ಯಾರು ನಮ್ಮ ಬೆನ್ನಿಗೆ ಚೂ ರಿ ಹಾಕುತ್ತಾರೆ ಗೊತ್ತಾಗುವುದಿಲ್ಲ. ಹತ್ತು ವರ್ಷಗಳ ಕಾಲ ಒಂದೇ ಮನೆಯ ಕಾರು ಚಾಲಕ ಮತ್ತು ಮನೆಯ ಕೆಲಸದ ಸಿಬ್ಬಂದಿಗಳು ಸೇರಿಕೊಂಡು ಅದೇ ಮನೆಯ ಮಾಲೀಕರಿಗೆ ಮಾಡಿದ ಕೆಲಸ ನೋಡಿದರೆ ಬೆಚ್ಚಿ ಬೀಳುವಂತಿದೆ. ಹನ್ನೊಂದು ವರ್ಷಗಳ ಕಾಲ ನಿಯತ್ತಿನಿಂದ ಕೆಲಸ ಮಾಡುತ್ತಿದ್ದ ಕಾರ್ ಡ್ರೈವರ್ ಮಾಲೀಕರಿಗೆ ಮಾಡಿದ ಕೆಲಸ ನಿಜಕ್ಕೂ ಭಯಾನಕ.

ಶ್ರೀಕಾಂತ್ ಮತ್ತು ಅನುರಾಧ ಮೈಲಾಪುರದ ದ್ವಾರಕಾ ಕಾಲೋನಿ ನಿವಾಸಿಗಳಾಗಿದ್ದರು. ಶ್ರೀಕಾಂತ್ ಗೆ 60 ವರ್ಷ ವಯಸ್ಸು ಮತ್ತು ಅನುರಾಧಾ ಗೆ 55 ವರ್ಷ ವಯಸ್ಸಾಗಿತ್ತು. ಶ್ರೀಕಾಂತ್ ಗುಜರಾತಿನಲ್ಲಿ ಸಾಫ್ಟ್ ವೇರ್ ಕಂಪೆನಿಯೊಂದರ ಮಾಲೀಕನಾಗಿದ್ದ. ಇವರಿಗೆ ಮೈಲಾಪುರದಲ್ಲಿ ದೊಡ್ಡದಾದ ಸ್ವಂತ ಮನೆಯಿತ್ತು. ಈ ದಂಪತಿಗಳು ಹೆಚ್ಚಿನ ದಿನಗಳ ಕಾಲ ಸ್ವಂತ ಊರಿನಿಂದ ಹೊರಗಡೆ ಇರುತ್ತಿದ್ದರು. ಆದ್ದರಿಂದ ಇವರ ಸ್ವಂತ ಮನೆಯಲ್ಲಿ ಇವರಿಗೆ ವಾಸ ಮಾಡಲು ಆಗುತ್ತಿರಲಿಲ್ಲ. ಆದಕಾರಣ ಈ ಸ್ವಂತ ಮನೆಯನ್ನು ನೋಡಿಕೊಳ್ಳಲು ಕೆಲಸಗಾರರನ್ನು ನೇಮಿಸಿದ್ದರು.

ಇವರ ಮನೆಯ ಚಾಲಕನಾಗಿ ಕೃಷ್ಣ ಎಂಬವನನ್ನು ಹತ್ತು ವರ್ಷದ ಹಿಂದೆಯೇ ನೇಮಿಸಿದ್ದರು. ಈತ ನೇಪಾಳದ ಮೂಲದವನಾಗಿದ್ದ.ಕ ಳೆದ ಹತ್ತು ತಿಂಗಳ ಹಿಂದೆ ಈ ದಂಪತಿಗಳು ಅಮೇರಿಕಕ್ಕೆ ಹೋಗಿದ್ದರು. ಅಮೇರಿಕಾದಲ್ಲಿ ತಮ್ಮ ಮಗಳನ್ನು ನೋಡಬೇಕೆಂದು ಈ ದಂಪತಿ ಹೊರಟಿದ್ದರು. ಹತ್ತು ತಿಂಗಳು ಕಳೆದ ನಂತರ ಚೆನ್ನೈಗೆ ಬಂದ ದಂಪತಿಗಳಿಗೆ ದೊಡ್ಡ ಶಾಕ್ ಕಾದಿತ್ತು. ಈ ದಂಪತಿಗಳು ಕನಸುಮನಸಿನಲ್ಲೂ ಅಂದುಕೊಳ್ಳಲು ಘಟನೆ ಆ ದಿನ ನಡೆಯುತ್ತೆ. 7 ಮೇ ಶನಿವಾರದಂದು ಈ ದಂಪತಿ ಭಾರತಕ್ಕೆ ಹಿಂತಿರುಗಿದ್ದರು. ಆ ದಿನ ಮುಂಜಾನೆ 3 ಗಂಟೆಗೆ ವಿಮಾನ ನಿಲ್ದಾಣದಿಂದ ಕಾರು ಚಾಲಕ ಕೃಷ್ಣ ದಂಪತಿಗಳನ್ನು ಪಿಕಪ್ ಮಾಡಿದ್ದಾನೆ.

ಆ ದಿನ ದಂಪತಿಗಳಿಗೆ ಕೊನೆಯ ದಿನವಾಗಿತ್ತು. ಬೆಳಿಗ್ಗೆಯಿಂದ ಸಂಜೆಯ ತನಕ ದಂಪತಿಗಳ ಮಗಳು ಅಮೇರಿಕಾದಿಂದ ಎಷ್ಟು ಸಲ ಫೋನ್ ಮಾಡಿದರೂ ಕೂಡ ಅವರು ರಿಸೀವ್ ಮಾಡಿಲ್ಲ. ಅನುಮಾನಗೊಂಡ ಮಗಳು ಸಂಬಂಧಿಕರಿಗೆ ವಿಷಯ ತಿಳಿಸಿದಳು. ಸಂಬಂಧಿಕರು ದಂಪತಿಯ ಮನೆಗೆ ಹೋದಾಗ ಮನೆಯ ಬಾಗಿಲು ಚಿಲಕ ಹಾಕಿತ್ತು. ತಕ್ಷಣವೇ ಸಂಬಂಧಿಕರು ಪೊಲೀಸರಿಗೆ ಕಂಪ್ಲೇಂಟ್ ನೀಡಿದರು. ತನಿಖೆಯನ್ನು ಕೈಗೆತ್ತಿಕೊಂಡ ನಂತರ ಅವರಿಗೆ ಸ್ಪೋ ಟಕ ಮಾಹಿತಿ ತಿಳಿದಿದೆ. ಮನೆಯ ಕಾರು ಚಾಲಕ ಕೃಷ್ಣ ನಾಪತ್ತೆಯಾಗುವ ಇರುವ ವಿಷಯ ತಿಳಿಯುತ್ತದೆ. ತಕ್ಷಣವೇ ಕಾರು ಚಾಲಕ ಕೃಷ್ಣನ ಮೊಬೈಲ್ ನಂಬರ್ ಟ್ರ್ಯಾಕ್ ಮಾಡಿ, ಅವನು ಇರುವ ಜಾಗವನ್ನು ಕಂಡುಹಿಡಿದು ಅವನನ್ನು ಹಿಡಿದಿದ್ದಾರೆ. ಪೊಲೀಸರು ಸರಿಯಾದ ಸಮಯಕ್ಕೆ ಇವನನ್ನು ಸೆರೆಹಿಡಿಯದೆ ಇದ್ದಿದ್ದರೆ ಇವನು ನೇಪಾಳಕ್ಕೆ ಹೋಗಿ ತಲೆ’ಮ’ರೆಸಿಕೊಳ್ಳಲು ಸಿದ್ಧನಾಗಿದ್ದ.

ಕೃಷ್ಣನನ್ನು ತಕ್ಷಣ ವಿಚಾರಣೆಗೆ ಒಳಪಡಿಸುತ್ತಾರೆ. ಆಗ ತಾನು ಮಾಡಿರುವ ತಪ್ಪನ್ನು ಬಾಯ್ಬಿಟ್ಟಿದ್ದಾನೆ. ಶನಿವಾರ ಬೆಳಿಗ್ಗೆ ದಂಪತಿಗಳನ್ನು(ಮಾಲೀಕರನ್ನು ) ವಿಮಾನ ನಿಲ್ದಾಣದಿಂದ ಕೃಷ್ಣ ಅಪಹರಿಸಿ ಅವರ ಮನೆಗೆ ಕರೆದುಕೊಂಡು ಹೋಗದೆ ಅವರ ಫಾರ್ಮ್ ಹೌಸ್ ಕರೆದುಕೊಂಡು ಹೋಗಿದ್ದ ನಂತರ ಅಲ್ಲಿ ಮನೆಯ ಕೆಲಸಗಾರರ ಸಹಾಯದಿಂದಲೇ ಅವರನ್ನು ಇಲ್ಲವಾಗಿಸಿದ್ದ. ಕಾರ್ ಡ್ರೈವರ್ ಮತ್ತು ಕೆಲಸಗಾರರು ಸೇರಿಕೊಂಡು ಇಬ್ಬರು ದಂಪತಿಗಳಿಗೆ ಹ’ರಿ’ ತವಾದ ವಸ್ತುವಿನಿಂದ ಹೊ’ಡೆದು ಕೊ’ ಲೆ ಮಾಡಿದ್ದಾರೆ ಎಂಬ ವಿಷಯ ಬೆಳಕಿಗೆ ಬಂದಿದೆ. ಫಾರ್ಮ್ ಹೌಸ್ ನ ಹತ್ತಿರವಿದ್ದ ತೋಟದಲ್ಲಿ ಇಬ್ಬರು ದಂಪತಿಗಳನ್ನು ಮಣ್ಣು ಮಾಡಿದ್ದ. ಅಷ್ಟೇ ಅಲ್ಲದೆ ದಂಪತಿಗಳ ಬಳಿ ಇದ್ದ 4 ಲಕ್ಷ ಹಣ ಮತ್ತು 50 ಪವನ್ ಚಿನ್ನಾಭರಣಗಳನ್ನು ಸಹ ಡ್ರೈವರ್ ಕ ‘ದ್ದಿದ್ದ.

Leave a Comment

error: Content is protected !!