ನಿಮಿಷಾಂಬ ದೇವಿಗೆ ಹರಕೆ ಹೊತ್ತ 22 ಗಂಟೆಯ ಒಳಗೆ ಸ್ಯಾಂಟ್ರೋ ರವಿಯ ಬಂಧನ, ಏನಿದು ವಿಸ್ಮಯ?

Harake to Nimishamba Devi: ಶ್ರೀರಂಗಪಟ್ಟಣದಲ್ಲಿರುವ ಖ್ಯಾತ ನಿಮಿಷಾಂಬ ದೇವಿಗೆ ಹರಕೆ ಹೊತ್ತ ಬೆನ್ನಲ್ಲೇ ಕೇವಲ 22 ಗಂಟೆಯ ಒಳಗಾಗಿ ಮೋಸ್ಟ ವಾಂಟೆಡ್ ಸ್ಯಾಂಟ್ರೋ ರವಿಯ ಬಂಧನವಾಗಿದೆ ಎಂಬುದಾಗಿ ಎಡಿಜಿಪಿ(ADGP) ಅಲೋಕ್ ಕುಮಾರ್ ತಿಳಿಸಿದ್ದಾರೆ. ಈ ವಿಚಾರ ಈಗ ಸಾಮಾಜಿಕ ಜಾಲತಾಣಗಳಲ್ಲಿ (social networks) ದೊಡ್ಡಮಟ್ಟದಲ್ಲಿ ವೈರಲ್ ಆಗುವ ಮೂಲಕ ಸದ್ದು ಮಾಡುತ್ತಿದೆ. ಈ ಕುರಿತಂತೆ ಇನ್ನಷ್ಟು ಹೆಚ್ಚಿನ ಸಂಪೂರ್ಣ ವಿಚಾರವನ್ನು ವಿವರವಾಗಿ ತಿಳಿದುಕೊಳ್ಳೋಣ ಬನ್ನಿ.

ಶನಿವಾರ ದೇವಿಗೆ ಪೂಜೆ ಸಲ್ಲಿಸಿದ ನಂತರ ಎಡಿಜಿಪಿ ಅಲೋಕ್ ಕುಮಾರ್ (ADGP Alok Kumar) ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತಾ ಕಳೆದ 11 ವರ್ಷಗಳಿಂದಲೂ ಕೂಡ ನಾನು ಈ ದೇವಿಯನ್ನು ನಂಬುತ್ತಾ ಬಂದಿದ್ದೇನೆ ಎಂಬುದಾಗಿ ಹೇಳುತ್ತಾರೆ. ಮೈಸೂರಿನಲ್ಲಿ ಕೂಡ ದೊಡ್ಡ ಮಟ್ಟದ ಒಂದು ಕೇಸ್ ನಮ್ಮ ಹೆಗಲಿಗೆ ಬಿದ್ದಿತ್ತು ಆಗ ನಿಮಿಷಾಂಬ ದೇವಿಗೆ ಹರಕೆ ಹೊತ್ತು ಪೂಜೆ ಸಲ್ಲಿಸಿ ಬಂದ ಐದು ಗಂಟೆಯ ಒಳಗೆ ಅಪರಾಧಿಯನ್ನು ನಾವು ಹಿಡಿದಿದ್ದೆವು. ಹೀಗಾಗಿ ನಿಮಿಷಾಂಬ ತಾಯಿಯನ್ನು ನಾನು ತುಂಬಾ ನಂಬುತ್ತೇನೆ ಎಂಬುದಾಗಿ ಎಡಿಜಿಪಿ ಅಲೋಕ್ ಕುಮಾರ್ ಅವರ ಸುದ್ದಿಗೋಷ್ಠಿಯಲ್ಲಿ ಪತ್ರಕರ್ತರ(Journalist) ಮುಂದೆ ಹೇಳಿಕೊಂಡಿದ್ದಾರೆ.

Santro Ravi

ಇನ್ನು ಈ ಬಾರಿ ಸ್ಯಾಂಟ್ರೋ ರವಿಯನ್ನು ಕೂಡ ನಿಮಿಷಾಂಬ ತಾಯಿಗೆ ಹರಕೆ ಸಲ್ಲಿಸಿದ ಕೇವಲ 22 ಗಂಟೆಯ ಒಳಗಾಗಿ ಬಂಧಿಸಿದ್ದೇವೆ ಎಂಬುದಾಗಿ ಆಶ್ಚರ್ಯಕರ ಹೇಳಿಕೆಯನ್ನು ಎಡಿಜಿಪಿ ಅಲೋಕ್ ಕುಮಾರ್ ಸುದ್ದಿಗೋಷ್ಠಿಯಲ್ಲಿ(Press Meet) ಪತ್ರಕರ್ತರಿಗೆ ನೀಡುತ್ತಾರೆ. ಈ ಮೂಲಕ ಶ್ರೀರಂಗಪಟ್ಟಣದ ನಿಮಿಷಾಂಬ ತಾಯಿಯ ಮಹಿಮೆ ಎಂತದ್ದು ಎಂಬುದು ತಿಳಿದು ಬರುತ್ತದೆ. ಸ್ಯಾಂಟ್ರೋ ರವಿ ಸಿಕ್ಕ ಹಿನ್ನೆಲೆಯಲ್ಲಿ ಹರಕೆ ಹೊತ್ತದ್ದನ್ನು ಪೂಜೆ ಸಲ್ಲಿಸುವ ಮೂಲಕ ತಿಳಿಸಿದ್ದೇನೆ ಎಂಬುದಾಗಿ ಕೂಡ ಈ ಸಂದರ್ಭದಲ್ಲಿ ಅಲೋಕ್ ಕುಮಾರ್ ಹೇಳುತ್ತಾರೆ.

ಸ್ಯಾಂಟ್ರೋ ರವಿ ಇಂದಾಗಿ ಸರ್ಕಾರ ಹಾಗೂ ಪೊಲೀಸ್ ಇಲಾಖೆಗೆ ಕೆಟ್ಟ ಹೆಸರು ಬರುವ ಹಾಗೆ ಇತ್ತು ಹೀಗಾಗಿ ನಿಮಿಷಾಂಬ ತಾಯಿಯಲ್ಲಿ ನಾನು ಆತನನ್ನು ಹಿಡಿಸಿ ಕೊಡು ಎಂಬುದಾಗಿ ಬೇಡಿಕೊಂಡಿದ್ದೆ ಆ ತಾಯಿ ನಮ್ಮ ಕೋರಿಕೆಯನ್ನು ಪೂರೈಸಿದ್ದಾಳೆ ಎಂದು ಅಲೋಕ್ ಕುಮಾರ್ ಹೇಳುತ್ತಾ ಆತನನ್ನು ವಿಚಾರಿಸಿ ಆತನ ಮೇಲಿರುವ ಪ್ರಕರಣಗಳು ಹಾಗೂ ಆತ ತಲೆಮರಿಸಿಕೊಳ್ಳಲು ಯಾರೆಲ್ಲ ಸಹಾಯ ಮಾಡಿದ್ದಾರೆ ಎನ್ನುವ ಕುರಿತಂತೆ ಸಂಪೂರ್ಣ ವಿಚಾರಣೆ(Investigation) ನಡೆಸಲಿದ್ದೇವೆ ಎಂಬುದಾಗಿ ಅಲೋಕ್ ಕುಮಾರ್ ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದಾರೆ.

Leave a Comment

error: Content is protected !!