RBI 2000 NOTE: 2000 ನೋಟ್ ಹಿಂಪಡೆದ RBI. ಜನರಲ್ಲಿ ಶುರುವಾಯಿತು ಕಳವಳ.

RBI 2000 NOTE ಸದ್ಯಕ್ಕೆ ಎಲ್ಲಾ ಕಡೆ ಐಪಿಎಲ್ ನಡೆಯುತ್ತಿರಬೇಕಾದರೆ ರಾಜ್ಯದಲ್ಲಿ ನಡೆದಿರುವಂತಹ ರಾಜ್ಯ ವಿಧಾನಸಭಾ ಚುನಾವಣೆ ಸಾಕಷ್ಟು ಗಮನವನ್ನು ಸೆಳೆದಿತ್ತು. ಆದರೆ ಈಗ ಅವೆಲ್ಲ ವಿಚಾರಗಳನ್ನು ಹಿಂದಿಕ್ಕುವಂತೆ ಮತ್ತೊಂದು ಘೋಷಣೆಯನ್ನು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ(RBI) ಘೋಷಿಸಿದ್ದು ನಿಜಕ್ಕೂ ಕೂಡ ಪ್ರತಿಯೊಬ್ಬರು ಚಿಂತಕ್ರಾಂತರಾಗಿದ್ದಾರೆ.

ಹೌದು 2016ನೇ ಇಸವಿಯಲ್ಲಿ ಹಳೆಯ ನೋಟುಗಳು ಬ್ಯಾನ್ ಆದ ನಂತರ ಹೊಸ ಐನೂರು ಹಾಗೂ ಸಾವಿರ ರೂಪಾಯಿ ನೋಟುಗಳನ್ನು ಮಾರುಕಟ್ಟೆಗೆ ಹರಿ ಬಿಡಲಾಗಿತ್ತು. ಆ ಸಂದರ್ಭದಲ್ಲಿ ಇದಕ್ಕೆ ಸಾಕಷ್ಟು ಕಾರಣಗಳನ್ನು ಕೂಡ ನೀಡಲಾಗಿತ್ತು ಆದರೆ ಈ ಕಾಲಕ್ಕೆ ಅದು ಅಪೃಸ್ತುತ. ಆದರೆ ಈಗ ರೂ.2000 ನೋಟ್ ಕೂಡ ಜನರ ಜೇಬಿನಿಂದ ದೂರವಾಗುವ ಕಾಲ ಸಹಿತವಾಗಿದೆ.

.

ಸಾಕಷ್ಟು ಸಮಯಗಳಿಂದ ನೀವು ಗಮನಿಸಿದರೆ ಎಟಿಎಂ ಸೇರಿದಂತೆ ಎಲ್ಲಾ ಕಡೆಗಳಲ್ಲಿ ಕೂಡ 2000 ಪಿಂಕ್ ನೋಟುಗಳು ಕಾಣೆಯಾಗಿದ್ದವು. ಈಗ ತಿಳಿದು ಬಂದಿರುವ ಮಾಹಿತಿಯ ಪ್ರಕಾರ ಆರ್‌ಬಿಐ ರೂ.2000 ನೋಟುಗಳನ್ನು ಹಿಂಪಡೆದು ಕೊಳ್ಳುತ್ತಿದೆ ಎಂಬುದಾಗಿ ಸುದ್ದಿ ಬಂದಿದೆ.

ಹೌದು ನೋಟುಗಳನ್ನು ಬ್ಯಾಂಕಿಗೆ ಜನರು ವರ್ಗಾಯಿಸಲು ಸೆಪ್ಟೆಂಬರ್ 30ರವರೆಗೆ ಕೂಡ ಕಾಲಾವಕಾಶವನ್ನು ನೀಡಲಾಗಿದ್ದು ಅದರ ನಂತರವೂ ಕೂಡ ನೋಟು ಲೀಗಲ್ ಆಗಿ ಚಲಾವಣೆಯಲ್ಲಿ ಇರಲಿದೆ ಸಾರ್ವಜನಿಕರು ಯಾವುದೇ ಚಿಂತೆಯನ್ನು ಪಟ್ಟುಕೊಳ್ಳುವುದು ಬೇಡ ಎಂಬುದಾಗಿ ಕೂಡ ಹೇಳಿದ್ದು ಎರಡು ಸಾಧ್ಯತೆಗಳನ್ನು ಇಲ್ಲಿ ಆರ್‌ಬಿಐ ನೀಡಿದೆ ಎಂದು ಹೇಳಬಹುದಾಗಿದೆ. ಮುಂದಿನ ದಿನಗಳಲ್ಲಿ ಈ ಕುರಿತಂತೆ ಯಾವ ನಿರ್ಧಾರವನ್ನು ಸರ್ಕಾರ ವಹಿಸುತ್ತದೆ ಎಂಬುದನ್ನು ಕಾದು ನೋಡಬೇಕಾಗಿದೆ.

Leave a Comment

error: Content is protected !!