ಗಂಡನನ್ನು ಕಳೆದುಕೊಂಡು ಮಕ್ಕಳಿಗಾಗಿ ಜೀವನ ನಡೆಸುತ್ತಿದ್ದ ಒಂಟಿ ಮಹಿಳೆಯ ಉಸಿರನ್ನು ನಿಲ್ಲಿಸಿದ ಕೊ’ಲೆಗಡುಕರು

ಈಗಿನ ಕಾಲದಲ್ಲಿ ಮಹಿಳೆಯರು ಒಂಟಿಯಾಗಿ ಜೀವನ ನಡೆಸುವುದು ತುಂಬಾ ಕಷ್ಟ ಅದರಲ್ಲೂ ಕುಟುಂಬವನ್ನು ಸಾಗಿಸಿ ಮಕ್ಕಳ ವಿದ್ಯಾಭ್ಯಾಸವನ್ನು ನೋಡಿಕೊಂಡು ಜೀವನವನ್ನು ನಡೆಸುವುದು ತುಂಬಾ ಕಷ್ಟಕರ. ಮಂಡ್ಯ ಜಿಲ್ಲೆ ಕೆ.ಆರ್.ಪೇಟೆ ತಾಲೂಕಿನ ಡಾಣನಹಳ್ಳಿ ಗ್ರಾಮದ ಪುಷ್ಪಲತಾ ಎಂಬ ಮಹಿಳೆ ಗಂಡನನ್ನು ಕಳೆದುಕೊಂಡು ಒಂಟಿಯಾಗಿ ಜೀವನ ನಡೆಸುತ್ತಿದ್ದಳು. ಆದರೆ ಇದ್ದಕ್ಕಿದ್ದಂತೆ ಪುಷ್ಪಲತಾ ತನ್ನ ಮನೆಯಲ್ಲಿ ಕೊನೆಯ ಉಸಿರು ಬಿಟ್ಟಿದ್ದು.. ಇವರ ಸಾ’ವಿನ ಹಿಂದೆ ಹಲವಾರು ಅನುಮಾನಗಳು ಕೂಡ ಹುಟ್ಟಿವೆ.

ಪುಷ್ಪಲತಾ ಒಳಗೊಂಡ ಸುಮಾರು ಐವತ್ತು ವರ್ಷಗಳ ಹಿಂದೆ ತೀರಿಕೊಂಡಿದ್ದ ಗಂಡ ತೀರಿಕೊಂಡ ಮೇಲೆ ಗಂಡ ನಡೆಸುತ್ತಿದ್ದ ಮೆಡಿಕಲ್ ಸ್ಟೋರ್ ನೋಡಿಕೊಂಡು ಕಿಕ್ಕೇರಿ ಗ್ರಾಮದಲ್ಲಿ ವಾಸವಾಗಿದ್ದಳು. ಪುಷ್ಪಲತಾಗೆ 2ಜನ ಮಕ್ಕಳು ಹಿರಿಯ ಮಗಳು ಆಯುರ್ವೇದಿಕ್ ಡಾಕ್ಟರೇಟ್ ಪದವಿ ಪಡೆಯುತ್ತಿದ್ದಾರೆ ಮತ್ತು ಇನ್ನೊಬ್ಬ ಮಗ ದ್ವಿತೀಯ ಪಿಯುಸಿ ಓದುತ್ತಿದ್ದಾನೆ. ಮಕ್ಕಳ ವಿದ್ಯಾಭ್ಯಾಸದ ಜೊತೆ ಕುಟುಂಬದ ನಿರ್ವಹಣೆಯನ್ನು ಮಾಡುವ ಹೊಣೆಗಾರಿಕೆ ಪುಷ್ಪಲತಾ ತಲೆ ಮೇಲಿತ್ತು. ಇದ್ದಕ್ಕಿದ್ದಂತೆ ಅರೆಬರೆ ಬಟ್ಟೆಯಲ್ಲಿ ಮನೆಯಲ್ಲಿ ಪುಷ್ಪಲತಾ ಹೆ’ಣ’ವಾಗಿ ಬಿದ್ದಿರುವುದು ಹಲವಾರು ಅನುಮಾನಗಳನ್ನು ಹುಟ್ಟುಹಾಕಿದೆ.

ಪುಷ್ಪಲತಾ ಶ್ರೀಕಾಂತ್ ಮೆಡಿಕಲ್ ಸ್ಟೋರ್ ಅನ್ನು ನೋಡಿಕೊಳ್ಳುತ್ತಿದ್ದರು ಇದರ ಜೊತೆಜೊತೆಗೆ ಪುಷ್ಪಲತಾಗೆ ಹತ್ತು ಎಕರೆ ಜಮೀನು ಕೂಡ ಇತ್ತು. ಈ ಹತ್ತು ಎಕರೆ ಜಮೀನನ್ನು ರವಿ ಎಂಬಾತ ನೋಡಿಕೊಳ್ಳುತ್ತಿದ್ದ. ಪುಷ್ಪಲತಾ ಮೆಡಿಕಲ್ ಸ್ಟೋರ್ ನೋಡಿಕೊಳ್ಳುವುದರ ಜೊತೆಗೆ ಅದರ ಪಕ್ಕದಲ್ಲೇ ಇದ್ದ ಕ್ಲಿನಿಕ್ ನ್ನು ಕ್ಲೀನ್ ಮಾಡುವ ಕೆಲಸದಿಂದ ಹಿಡಿದು, ರೋಗಿಗಳಿಗೆ ಟೋಕನ್ ನೀಡುವ ಕೆಲಸವನ್ನು ಮಾಡ್ತಿದ್ದಳು. 16 ಜುನ್ ಬೆಳಿಗ್ಗೆ ಪುಷ್ಪಲತಾ ಕ್ಲಿನಿಕ್ ನ್ನು ಕ್ಲೀನ್ ಮಾಡಲು ಬಂದವಳು ಮೆಡಿಕಲ್ ಸ್ಟೋರ್ ಕೂಡ ಓಪನ್ ಮಾಡದೇ ಹಾಗೇ ಮನೆಗೆ ಹೋಗಿದ್ದಳು.

ಮಾವಿನ ಹಣ್ಣನ್ನು ಮಾರಾಟ ಮಾಡಲು ಹೋಗುತ್ತೇನೆ ಎಂದು ಪುಷ್ಪಲತಾ ಆಸ್ಪತ್ರೆಯ ವೈದ್ಯರಿಗೆ ತಿಳಿಸಿ ಹೋಗಿದ್ದಳು. ಆದರೆ ಸಂಜೆಯಾದರೂ ಪುಷ್ಪಲತಾ ಆಸ್ಪತ್ರೆಗೆ ಮರಳಿ ಬರಲೇ ಇಲ್ಲ. ತದನಂತರ ಆಸ್ಪತ್ರೆಯ ವೈದ್ಯರು ಮತ್ತು ಪುಷ್ಪಲತಾ ಸಹೋದರ ಇಬ್ಬರೂ ಸೇರಿ ಪುಷ್ಪಲತ ಮನೆಗೆ ಹೋದಾಗ ಅವರಿಗೆ ಶಾಕ್ ಕಾದಿತ್ತು. ಪುಷ್ಪಲತಾ ಹೆ’ಣವಾಗಿ ಅರೆಬರೆ ಬಟ್ಟೆಯಲ್ಲಿ ಬಿದ್ದಿದ್ದಳು. ಅಷ್ಟೇ ಅಲ್ಲದೆ ಕು’ತ್ತಿಗೆಗೆ ಚಾಕುವಿನಿಂದ ಚು’ಚ್ಚಿ ಉಷ್ಣ ಪ್ರತಿಯೊಂದು ತೆಗೆದಿದ್ದಾರೆ.

ಅರೆಬರೆ ಬಟ್ಟೆಯಲ್ಲಿ ಪುಷ್ಪಲತಾ ಅವರ ದೇಹ ಒಂಟಿಯಾಗಿ ಮನೆಯಲ್ಲಿ ಬಿಟ್ಟಿರುವುದರ ಹಿಂದೆ ಅ’ತ್ಯಾ’ಚಾರ ಮಾಡಿರುವ ಅನುಮಾನಗಳು ಕೂಡ ಹುಟ್ಟಿವೆ. ಪುಷ್ಪಲತಾ ಮನೆಗೆ ಆಗಾಗ ಹತ್ತು ಎಕರೆ ಜಮೀನಿನನ್ನು ನೋಡಿಕೊಳ್ಳುತ್ತಿದ್ದ ಪುಷ್ಪಲತಾಳ ಪರಿಚಯಸ್ಥ ರವಿ ಬರುತ್ತಿದ್ದ. ಈತ ತುಂಬಾ ಅವಮಾನಕ್ಕೊಳಗಾಗಿದ್ದ. ಮತ್ತು ಇವನ ಮೇಲೆ ಅನುಮಾನಗಳು ಜಾಸ್ತಿಯಾಗಿದೆ. ತನಿಖೆಯನ್ನು ಕೈಗೆ ತೆಗೆದುಕೊಂಡ ಪೊಲೀಸರು ಇದೀಗ ತನಿಖೆಯನ್ನು ಚುರುಕುಗೊಳಿಸಿದ್ದಾರೆ. ಒಟ್ಟಿನಲ್ಲಿ ತಂದೆಯನ್ನು ಕಳೆದುಕೊಂಡಿದ್ದು ಪುಷ್ಪಲತಾಳ ಇಬ್ಬರು ಮಕ್ಕಳು ಇದೀಗ ಕುಟುಂಬಕ್ಕೆ ಆಧಾರಸ್ತಂಭವಾಗಿದ್ದ ತಾಯಿಯನ್ನು ಕಳೆದುಕೊಂಡು ಅನಾಥರಾಗಿದ್ದಾರೆ.

Leave a Comment

error: Content is protected !!