ಈ ರಾಜ್ಯದಲ್ಲಿ ಗಂಡಸಿಗೆ ಸುರಕ್ಷತೆ ಇಲ್ಲ. ಗಂಡನ್ನು ಅಪಹರಿಸಿ ಬಲವಂತವಾಗಿ ಮದುವೆ ಮಾಡಿಸ್ತಾರೆ; ಈ ಪದ್ದತಿ ಬಗ್ಗೆ ಕೇಳಿದರೆ ಶಾಕ್ ಆಗ್ತೀರಾ !

ದೇಶದಲ್ಲಿ ಯಾವ ಯಾವ ಪದ್ದತಿಯಲ್ಲಿ, ಯಾವ ಯಾವ ಸಂಪ್ರದಾಯಗಳ ಪ್ರಕಾರ ಮದುವೆಯಾಗುತ್ತವೆ ಎಂದು ಹೇಳಲು ಸಾಧ್ಯವಿಲ್ಲ. ಯಾಕೆಂದರೆ ಮದುವೆ ಸಂಪ್ರದಾಯಗಳು ಒಂದೊಂದು ಭಾಗದಲ್ಲಿ ಒಂದೊಂದು ರೀತಿಯಲ್ಲಿ ಇರುತ್ತದೆ. ಅದು ಬಿಡಿ. ಈ ಸ್ಥಳದಲ್ಲಿ ಮದುವೆ ಅಂದ್ರೆನೇ ವಿಚಿತ್ರ. ಇಲ್ಲಿ ಗಂಡು ಹೆಣ್ಣನ್ನು ಮಾತನಾಡಿ ಮದುವೆ ಮಾಡುವುದಲ್ಲ. ಗಂಡನ್ನು ಅಪಹರಿಸಿ ತಂದು ಮದುವೆ ಮಾಡುವುದು. ಯುವತಿಯನ್ನು ಅಪಹರಿಸುವುದನ್ನು ನೋಡಿದ್ಡೇವೆ, ಇದ್ಯಾವುದಪ್ಪ ಯುವಕನನ್ನೇ ಅಪಹರಿಸುವುದು ಅಂತಾನಾ? ಬನ್ನಿ ಈ ಬಗ್ಗೆ ಘಟನೆ ಬಗೆ ಇನ್ನಷ್ಟು ತಿಳಿಯೋಣ.

ಉತ್ತರ ಭಾರತದ ಬಿಹಾರದ ಹಳ್ಳಿಯೊಂದರಲ್ಲಿ ನಡೆದ ಘಟನೆ ಇದು. ತೆಘ್ರಾ ಪೋಲಿಸ್ ಠಾಣೆ ವ್ಯಾಪ್ತಿಗೆ ಬರುವ ಪಿಧೌಲಿ ಗ್ರಾಮದ ಪಶುವೈದ್ಯ ಸತ್ಯಮ್ ಕುಮರ್ ಝಾ ಅಪಹರಣವಾದ ವ್ಯಕ್ತಿ. ಹಾಗೂ ಬಿಹಾರದ ಬೇಗುಸರಾಯ್ ಹಳ್ಳಿಯ ಜನರು ಅಪಹರಣಕಾರರು. ಸತ್ಯಂ ಎನ್ನುವ ಪಶು ವೈದ್ಯನನ್ನು ಪಶುಗೆ ಆರೋಗ್ಯ ಸರಿಯಿಲ್ಲ, ಚಿಕಿತ್ಸೆ ಕೊಡಲು ಬನ್ನಿ ಎಂದು ಕರೆದುಕೊಂಡು ಹೋಗಿ ಮೂವರು ಅವರನ್ನು ಅಪಹರಿಸಿದ್ದಾರೆ. ಬಳಿಕ ಸತ್ಯಂ ಅವರನ್ನು ತಮ್ಮ ಪಂಗಡದ ಹುಡುಗಿಯ ಕತ್ತಿಗೆ ತಾಳಿ ಕಟ್ಟಿಸಿದ್ದಾರೆ. ತನ್ನ ಮಗ ಮನೆಗೆ ಬಾರದೇ ಇದ್ದದ್ದನ್ನು ನೋಡಿ ಸತ್ಯಂ ತಂದೆ ಸುಭೋಧ್ ಕುಮಾರ್ ಝಾ ಪೋಲಿಸರಿಗೆ ದೂರು ನೀಡಿದ್ದಾರೆ. ಈ ಬಗ್ಗೆ ತನಿಖೆ ಕೈಗೊಂಡಿರುವುದಾಗಿ ಅಲ್ಲಿನ ಎಸ್ ಪಿ ತಿಳಿಸಿದ್ದಾರೆ. ಅಲ್ಲದೇ ಸುಭೋದ್ ಅವರ ಮೊಬೈಲ್ ಗೆ ಅವರ ಮಗನ ಬಲವಂತದ ಮದುವೆಯ ವಿಡಿಯೋವೂ ಬಂದಿದ್ದು ಪೋಲಿಸರಿಗೆ ತೋರಿಸಿದ್ದಾರೆ.

ಬಿಹಾರದ ಹಲವು ಗ್ರಾಮಗಳಲ್ಲಿ ಇಂಥಗ ವಿಚಿತ್ರ ಮದುವೆಗಳು ಜರುಗುತ್ತವೆ. ಆ ಗ್ರಾಮದ ಸುತ್ತ ಮುತ್ತ ಯಾವುದೇ ದುಡ್ಡಿರುವ, ಉತ್ತಮ ಉದ್ಯೋಗದಲ್ಲಿರುವ ಯುವಕ ಕಂಡರೆ ಅವನನ್ನು ಅಪಹರಿಸಿ ಮದುವೆ ಮಾಡಿಬಿಡುತ್ತಾರೆ. ಬಡವನಾಗಿದ್ರೇ ಬಹುಶಃ ಸೇಫ್ ಎನ್ನಬಹುದು. ಇನ್ನು ಹೀಗೆ ಅಪಹರಣಕ್ಕೆ ಒಳಗಾದವರಲ್ಲಿ ಕೆಲವರು ಮದುವೆಯಾಯಿತಲ್ಲ ಇನ್ನೇನು ಅಂತ ಸಂಸಾರ ನಡೆಸುತ್ತಿದ್ದರೆ, ಕೆಲವರು ಬಲವಂತದ ಮದುವೆಯನ್ನು ವಿರೋಧಿಸಿ ಪೋಲೀಸ್ ಸ್ಟೇಶನ್ ಗೆ ಅಲೆಯುತ್ತಿರುತ್ತಾರೆ. ಈ ಹಿಂದೆಯೂ ಇಂಥ ಸಾಕಷ್ಟು ಪ್ರಕರಣಗಳು ದಾಖಲಾಗಿವೆ. ಮದುವೆ ದಿರಿಸಿನಲ್ಲಿದ್ದ ಒಬ್ಬ ಯುವಕ ತನ್ನನ್ನು ಬಿಟ್ತುಬಿಡಿ ಎಂದು ಅಂಗಲಾಚುತ್ತಿದ್ದ ವಿಡಿಯೋವೊಂದು ಸಕ್ಕತ್ ವೈರಲ್ ಆಗಿತ್ತು. ಜನರೂ ಕನಿಕರ ತೋರಿಸಿದ್ದರು.

ಆದರೂ ಇಂಥ ಪ್ರಕರಣ ನಡೆಯುತ್ತಲೇ ಇರುತ್ತದೆ. ಬಿಹಾರದ ಜಮೂಯಿ, ಪಾಟ್ಲಾ, ಬೇಗುಸರೈ, ಖಗರಿಯಾ, ನಳಂದಾ, ಲಖಿಸರೈ ಹೀಗೆ ಮೊದಲಾದ ಜಿಲ್ಲೆಗಳಲ್ಲಿ ಉತ್ತಮ ಹಣ ಇರುವ ಯುವಕರನ್ನು ಅಪಹರಿಸಿ ತಮ್ಮ ಹುಡುಗಿಗೆ ಮದುವೆ ಮಾಡಿಸುವುದು ಸಾಮಾನ್ಯ. ಇದು ಅಪರಾಧವೇ ಆಗಿದ್ದರೂ ರಾಜ್ಯದ ಯಾವುದೋ ಹಳ್ಳಿಯ ಎಲ್ಳೋ ಮೂಲೆಯಲ್ಲಿ ನಡೆಯುವ ಈ ಪ್ರಕರಣಗಳನ್ನು ತಡೆಯುವುದು ಅಷ್ಟು ಸುಲಭವಲ್ಲ. ಎಷ್ಟೋ ಮದುವೆಗಳು ಗೊತ್ತೂ ಆಗುವುದಿಲ್ಲ. ಆದರೂ ಕೊನೆಪಕ್ಷ ದಾಖಲಾದ ಪ್ರಕರಣಗಳ ಬಗ್ಗೆಯಾದರೂ ಪೋಲಿಸರು ಗಂಭೀರವಾದ ಕ್ರಮ ತೆಗೆದುಕೊಂಡರೆ ಇಂಥ ಅಪರಾಧ ಮಾಡುವವರಲ್ಲಿ ಸ್ವಲ್ಪ ಭಯವಾದರೂ ಹುಟ್ಟಬಹುದು ಅಲ್ವೇ!

Leave a Comment

error: Content is protected !!