ಅತ್ಯಾ ಧುನಿಕ ಯುಗದಲ್ಲಿ ಟೆಕ್ನಾಲಜಿ ದಿನದಿಂದ ದಿನಕ್ಕೆ ಅಭಿವೃದ್ಧಿ ಹೊಂದುತ್ತಾ ಇದೆ. ಟೆಕ್ನಾಲಜಿಯಲ್ಲಿ ಬೆಳವಣಿಗೆಯಾದಂತೆ ಅಪಾಯಗಳು ಹೆಚ್ಚಾಗುತ್ತದೆ ಎಂಬ ಭಯ ನಮ್ಮನ್ನು ಕಾಡುತ್ತಿದೆ. ಮೊಬೈಲ್ ಕಂಪ್ಯೂಟರ್ ಯುಗದಲ್ಲಿ ನಮ್ಮ ಸೆಕ್ಯುರಿಟಿಗೆ ಆಪತ್ತು ಉಂಟಾಗುವ ಪರಿಸ್ಥಿತಿ ಬಂದಿದೆ. ಕ್ಷಣಾರ್ಧದಲ್ಲಿ ನಮ್ಮ ಬ್ಯಾಂಕ್ ಅಕೌಂಟ್ ನಲ್ಲಿ ಇರುವ ಎಲ್ಲಾ ದುಡ್ಡು ಗಳನ್ನು ಮಾಯ ಮಾಡುವಷ್ಟರ ಮಟ್ಟಿಗೆ ಟೆಕ್ನಾಲಜಿ ಮುಂದುವರಿದಿದೆ.

ಟೆಕ್ನಾಲಜಿ ಯ ಬೆಳವಣಿಗೆಯಿಂದ ಎಷ್ಟು ಉಪಯೋಗಗಳಿವೆಯೋ ಅಷ್ಟೇ ಅನಾನುಕೂಲತೆಗಳೂ ಇವೆ ಎಂಬುದು ನಮಗೆ ಈಗ ಅರಿವಾಗುತ್ತಿದೆ. ಇತ್ತೀಚೆಗೆ ಭಾರತ ದೇಶದಲ್ಲಿ ಪೆಟ್ರೋಲ್ ಮತ್ತು ಡಿಸೇಲ್ ಬೆಲೆ ಗಗನಕ್ಕೇರಿದೆ. ಇದೇ ಕಾರಣದಿಂದ ಜನರೆಲ್ಲರೂ ಪೆಟ್ರೋಲ್ ಗಾಡಿಗಳನ್ನು ಬಿಟ್ಟು ಎಲೆಕ್ಟ್ರಿಕ್ ವೆಹಿಕಲ್ ಗಳ ಕಡೆ ಮುಖ ಮಾಡುತ್ತಿದ್ದಾರೆ. ಟಾಟಾ ಮಹೀಂದ್ರ ಮತ್ತು ಓಲಾ ಕಂಪೆನಿಗಳು ಎಲೆಕ್ಟ್ರಿಕ್ ವೆಹಿಕಲ್ ಗಳ ಉತ್ಪಾದನೆಯನ್ನು ಹೆಚ್ಚು ಮಾಡುತ್ತಿದ್ದಾರೆ.

ಎಲೆಕ್ಟ್ರಿಕ್ ಬೈಕ್ ಗಳು ಪೆಟ್ರೋಲ್ ಡೀಸೆಲ್ ಗಾಡಿಗಳಿಗಿಂತ ಹೆಚ್ಚು ಮೈಲೇಜ್ ಕೊಡುತ್ತೆ , ಎಲೆಕ್ಟ್ರಿಕ್ ವೆಹಿಕಲ್ ಗಳನ್ನು ನಿರ್ವಹಣೆ ಮಾಡುವುದು ಸುಲಭ ಮತ್ತು ಎಲೆಕ್ಟ್ರಿಕ್ ವೆಹಿಕಲ್ ಗಳಲ್ಲಿ ಅತ್ಯಾಧುನಿಕ ಸೌಲಭ್ಯಗಳು ಇರುತ್ತೆ ಅಂತ ನಾವು ಕಣ್ಣು ಮುಚ್ಚಿಕೊಂಡು ಎಲೆಕ್ಟ್ರಿಕ್ ಸ್ಕೂಟರ್ ಗಳು ಬೆಸ್ಟ್ ಅಂತ ಅಂದುಕೊಂಡಿದ್ದೆವು. ಆದರೆ ಇದೀಗ ಪುಣೆಯಲ್ಲಿ ನಡೆದ ಒಂದು ಭಯಾನಕ ಘಟನೆ ಎಲೆಕ್ಟ್ರಿಕ್ ಸ್ಕೂಟರ್ ಮೇಲಿದ್ದ ಭರವಸೆಯನ್ನೆಲ್ಲಾ ಅಳಿಸಿಹಾಕಿದೆ.

ಪುಣೆಯ ಮೂಲದ ವ್ಯಕ್ತಿ ಓಲಾ s1 ಪ್ರೊ ಎಲೆಕ್ಟ್ರಿಕ್ ಸ್ಕೂಟರ್ ಯನ್ನು ಖರೀದಿಸಿದ್ದ. ಈತ ಒಂದು ತಿಂಗಳ ಹಿಂದೆಯಷ್ಟೆ ಖರೀದಿ ಮಾಡಿದ್ದ. ಅಂಗಡಿಯ ಮುಂದೆ ಗಾಡಿಯನ್ನು ನಿಲ್ಲಿಸಿ ಈತ ಶಾಪಿಂಗ್ ಗೆ ಹೋಗಿದ್ದ. ಏನಾಯ್ತೋ ಗೊತ್ತಿಲ್ಲ ಅಕಸ್ಮಾತ್ತಾಗಿ ಇದ್ದಕ್ಕಿದ್ದಂತೆ ಈ ಗಾಡಿಯ ಎಂಜಿನ್ ನಿಂದ ಹೊಗೆ ಬರಲು ಶುರುವಾಯ್ತು. ಧಗಧಗನೆ ಬೆಂಕಿ ಹೊತ್ತಿಕೊಂಡಿತು. ಧಗಧಗನೆ ಉರಿಯುತ್ತಿರುವ ಎಲೆಕ್ಟ್ರಿಕ್ ಸ್ಕೂಟರ್ ನ ವೀಡಿಯೋ ಇದೀಗ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

ಬೇಸಿಗೆಯ ತಾಪದಿಂದ ಈ ರೀತಿ ಆಗಿರಬಹುದು ಎಂದು ಕಂಪೆನಿಯ ಸಿಇಒ ಸಂದೇಹ ಪಟ್ಟಿದ್ದಾರೆ. ಇದ್ದಕ್ಕಿದ್ದಂತೆ ಸ್ಕೂಟರ್ ಗೆ ಬೆಂಕಿ ಹತ್ತಿಕೊಳ್ಳುವುದಕ್ಕೆ ನಿಖರ ಕಾರಣ ಏನೆಂದು ತಿಳಿದುಬಂದಿಲ್ಲ. ಆದರೆ ಇದರ ಬಗ್ಗೆ ಕಂಪೆನಿಯವರು ರಿಸರ್ಚ್ ಮತ್ತು ಇನ್ವೆಸ್ಟಿಗೇಷನ್ ಶುರು ಮಾಡಿದ್ದಾರೆ. ಮಾಲೀಕನ ತಪ್ಪುಬಳಕೆಯಿಂದ ಈ ರೀತಿ ಆಗಿದೆಯೋ ಅಥವಾ ಎಲೆಕ್ಟ್ರಿಕ್ ಸ್ಕೂಟರ್ ನಲ್ಲಿಯೇ ನ್ಯೂನ್ಯತೆ ಇದೆಯೋ ಎಂಬುದು ಪ್ರಶ್ನೆಯಾಗಿದೆ. ಎಲೆಕ್ಟ್ರಿಕ್ ಸ್ಕೂಟರ್ ಗಳು ಗ್ರಾಹಕರಿಗೆ ಎಷ್ಟು ಸುರಕ್ಷತೆ ನೀಡುತ್ತದೆ ಎಂಬುದು ದೊಡ್ಡ ಪ್ರಶ್ನೆಯಾಗಿದೆ.

By admin

Leave a Reply

Your email address will not be published.