ನಮಗೆ ಇನ್ನು ಮುಂದೆ ಮಕ್ಕಳಾಗುವುದಿಲ್ಲ ಎಂದು ಶಾಕಿಂಗ್ ಸುದ್ದಿ ನೀಡಿದ ನಿವೇದಿತ ಗೌಡ!

ನಿಮಗೆಲ್ಲರಿಗೂ ತಿಳಿದಿರಬಹುದು ಸ್ನೇಹಿತರೆ ಬಿಗ್ ಬಾಸ್ ನಲ್ಲಿ ಚಂದನ್ ಶೆಟ್ಟಿ ಹಾಗೂ ನಿವೇದಿತ ಗೌಡ ಇಬ್ಬರು ಕೂಡ ಅಣ್ಣ ತಂಗಿ ಎಂಬಂತೆ ತಿರುಗಾಡಿಕೊಂಡಿದ್ದವರು. ಇವರಿಬ್ಬರ ನಡುವೆ ಬರೋಬ್ಬರಿ 12 ವರ್ಷಗಳ ಅಂತರ ಇರುವುದು ಮತ್ತೊಂದು ಗಮನಿಸಬೇಕಾಗಿರುವ ವಿಚಾರ. ಹೀಗಾಗಿ ಇವರಿಬ್ಬರೂ ಪ್ರೀತಿಯಲ್ಲಿ ಬೀಳುವುದು ಅಥವಾ ಮದುವೆ ಮಾಡಿಕೊಳ್ಳುತ್ತಾರೆ ಎಂಬುದಾಗಿ ಯಾರೂ ಕೂಡ ಭಾವಿಸಿರಲು ಸಾಧ್ಯವೇ ಇಲ್ಲ. ಆದರೂ ಕೂಡ ಮೂರು ವರ್ಷಗಳ ಹಿಂದೆ ಯುವ ದಸರಾ ಕಾರ್ಯಕ್ರಮದಲ್ಲಿ ಇವರಿಬ್ಬರು ಪರಸ್ಪರ ಪ್ರಪೋಸ್ ಮಾಡುತ್ತಾರೆ.

ಹೌದು ಮಿತ್ರರೇ, ಮೂರು ವರ್ಷಗಳ ಹಿಂದಿನ ಯುವದ ಸರ ಕಾರ್ಯಕ್ರಮದಲ್ಲಿ ಚಂದನ್ ಶೆಟ್ಟಿ ನಿವೇದಿತಾ ಗೌಡ ಅವರಿಗೆ ಪ್ರಪೋಸ್ ಮಾಡುವ ಮೂಲಕ ಮದುವೆಗೆ ಅನುಮತಿ ಕೇಳಿದ್ದರು. ಇದು ದೊಡ್ಡ ಮಟ್ಟದ ವಿವಾದವನ್ನು ಹುಟ್ಟು ಹಾಕಿದ್ದರೂ ಕೂಡ ಈ ಜೋಡಿ ಅದ್ಯಾವುದಕ್ಕೆ ಕೂಡ ತಲೆ ಕೆಡಿಸಿಕೊಳ್ಳದೆ ಕುಟುಂಬಸ್ಥರ ಸಮ್ಮುಖದಲ್ಲಿ ಸರಳವಾಗಿ ವಿವಾಹವಾಗಿದ್ದರು.

ಚಂದನ್ ಶೆಟ್ಟಿ ಸಂಗೀತ ನಿರ್ದೇಶಕನಾಗಿ ಹಾಗೂ ನಟನಾಗಿ ಸಕ್ರಿಯ ರಾಗಿದ್ದರೆ ಈ ಕಡೆ ನಿವೇದಿತ ಗೌಡ ರಿಯಾಲಿಟಿ ಶೋ ಕಾರ್ಯಕ್ರಮಗಳ ಲಿಸ್ಟ್ ಸ್ಪರ್ದಿಯಾಗಿ ಹಾಗೂ ಯೂಟ್ಯೂಬ್ ಚಾನೆಲ್ ಮುಖಾಂತರ ಕಂಟೆಂಟ್ ಕ್ರಿಯೇಟರ್ ಆಗಿ ಕೂಡ ಸಕ್ರಿಯರಾಗಿದ್ದಾರೆ. ಇದರ ನಡುವೆಯೇ ಪ್ರತಿಯೊಬ್ಬರೂ ಕೂಡ ನಿವೇದಿತ ಗೌಡ ಅವರಿಗೆ ಮದುವೆ ಆಗಿ ಮೂರು ವರ್ಷ ಆಯ್ತು ಇನ್ನು ಮಗು ಮಾಡಿಕೊಳ್ಳುವ ಪ್ಲಾನ್ ಇಲ್ವಾ ಎಂಬುದಾಗಿ ಕೇಳುತ್ತಲೇ ಇರುತ್ತಾರೆ.

ಇದರ ಬಗ್ಗೆ ಕೊನೆಗೂ ಮೌನ ಮುರಿದಿರುವ ನಿವೇದಿತ ಗೌಡ ನನಗೆ ಹಾಗೂ ಚಂದನ್ ಗೆ ಇಬ್ಬರಿಗೂ ಕೂಡ ನಮ್ಮ ಕರಿಯರ್ ನಲ್ಲಿ ಏನಾದರೂ ಸಾಧಿಸಬೇಕು ಎನ್ನುವ ಹಂಬಲವಿದೆ. ಹೀಗಾಗಿ ಅದನ್ನು ಸಾಧಿಸುವ ತನಕ ನಮ್ಮ ಕುಟುಂಬದಲ್ಲಾಗಲಿ ಅಥವಾ ಚಂದನ್ ಗೆ ಆಗಲಿ ಅಥವಾ ನನಗೆ ಆಗಲಿ ಮಗು ಮಾಡಿಕೊಳ್ಳುವ ಯಾವುದೇ ಯೋಚನೆ ಇಲ್ಲ ಎಂಬುದಾಗಿ ಹೇಳಿದ್ದು ಸದ್ಯಕ್ಕೆ ನಮಗೆ ಮಗು ಆಗೋದಿಲ್ಲ ಎಂಬುದಾಗಿ ಖಡಾ ಖಂಡಿತವಾಗಿ ನಿವೇದಿತ ಗೌಡ ಪ್ರತಿಕ್ರಿಯೆ ನೀಡಿದ್ದಾರೆ.

Leave a Comment

error: Content is protected !!