ನಿರುದ್ಯೋಗಿಗಳಿಗಾಗಿ ಸಿಹಿ ಸುದ್ದಿಯನ್ನು ನೀಡಿದ ಕೈಲಾಸ ದೇಶದ ಒಡೆಯ. ನಿತ್ಯಾನಂದನ ಕೈಲಾಸದಲ್ಲಿ ಕೈತುಂಬಾ ಸಂಬಳ ಸಿಗುವ ಕೆಲಸ!

‘ಹಣವೆಂದರೆ ಹೆಣ ಕೂಡ ಬಾಯಿ ಬಿಡುತ್ತೆ’ ಈ ಮಾತಿನಂತೆ ‘ಸಂಬಳ ಸಿಗುವ ಕೆಲಸ ಎಂದರೆ ನಿರುದ್ಯೋಗಿಗಳ ಕಿವಿ ದೊಡ್ಡದಾಗುತ್ತೆ’ ಎಂಬ ಸಾಲುಗಳು ಇನ್ನು ಮುಂದೆ ವಾಡಿಕೆಯಾಗಬಹುದು. ಅಂಗೈನಲ್ಲಿ ಜಗತ್ತು ನೋಡುವಷ್ಟು ಮುಂದುವರೆದ ಈಗಿನ ಕಾಲದಲ್ಲಿ ಪ್ರತಿಯೊಬ್ಬರು ಉತ್ತಮ ಶಿಕ್ಷಣ ಪಡೆದು ಉದ್ಯೋಗವನ್ನು ಬಯಸುತ್ತಾರೆ. ಪ್ರತಿಯೊಂದು ಕ್ಷೇತ್ರದಲ್ಲಿಯೂ ಅರ್ಹ ಅಭ್ಯರ್ಥಿಗಳ ಸಂಖ್ಯೆ ಜಾಸ್ತಿಯಾಗಿದ್ದು, ಮನ ಬಂದ ಕಾಯಕವನ್ನು ಮಾಡಲು ಟಫ್ ಕಾಂಪಿಟೇಟರ್ ಜೊತೆ ಸ್ಪರ್ಧಿಸಬೇಕಾಗಿದೆ.

ಹೊಸದಾಗಿ ಸೇರಿಕೊಳ್ಳುವ ತಂತ್ರಜ್ಞಾನದ ಜೊತೆ ಎಲ್ಲರೂ ಓಡುತ್ತಲೇ ಇರಬೇಕು. ಕೈಗೆಟಕುವ ಒಂದು ಅವಕಾಶವನ್ನು ಕಳೆದುಕೊಂಡರು ದುಃಖ ಪಡಬೇಕಾದ ಸ್ಥಿತಿ ಎದುರಾಗಬಹುದು. ಇಂತಹ ಕಾಲದಲ್ಲಿ ನಿರುದ್ಯೋಗವು ಒಂದು ಸಮಸ್ಯೆಯಂತೆ ಕಾಡಿದೆ.

ಕೆಲಸಕ್ಕಾಗಿ ತಮ್ಮವರನ್ನು ತೊರೆದು, ದೇಶವಿದೇಶಗಳನ್ನು ಸಂಚರಿಸಿ ದೊಡ್ಡ ಕಷ್ಟಗಳನ್ನು ಎದುರಿಸಿ ನಿಂತು ತಿಂಗಳ ಕೊನೆಯಲ್ಲಿ ಸಂಬಳವನ್ನು ಸಂಭ್ರಮಿಸುತ್ತಾರೆ. ನಿತ್ಯವೂ ಆನಂದದಿಂದ ನಗು ನಗುತ್ತಾ ಕಾಲ ಕಳೆವ ತನ್ನದೇ ದೇಶ ಕಟ್ಟಿಕೊಂಡಿರುವ ನಿತ್ಯಾನಂದ ಅವರು ಉದ್ಯೋಗಾವಕಾಶಗಳ ಬಗ್ಗೆ ತಿಳಿಸಿದ್ದಾರಂತೆ..

ಒಮ್ಮೆ ವಿವಾದದಲ್ಲಿ ಸಿಕ್ಕಿ ಪೇಚಾಡಿದ ನಿತ್ಯಾನಂದ ಅವರು ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. ಸ್ವಯಂಘೋಷಿತ ಸ್ವಾಮೀಜಿಗಳಾದ ಇವರು ತನ್ನದೇ ಹೊಸದಾದ ದೇಶವನ್ನು ನಿರ್ಮಿಸಿಕೊಂಡು ಕೈಲಾಸವೆಂದು ಹೇಳಿಕೊಂಡಿದ್ದರು. ಆ ದೇಶದಲ್ಲಿ ಸಾಕಷ್ಟು ಉದ್ಯೋಗಗಳಿವೆಯಂತೆ.

ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಂತೆ. ಅದಕ್ಕಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದ್ದು ಆಸಕ್ತರಿಗಾಗಿ ವಿಶೇಷ ತರಬೇತಿಗಳು ಸಿಗಲಿವೆಯಂತೆ. ನಿತ್ಯಾನಂದ ಅವರ ಕೈಲಾಸ ದೇಶದ ಶಾಖೆಗಳು ಭಾರತ ಸೇರಿದಂತೆ ಬೇರೆ ಬೇರೆ ದೇಶಗಳಲ್ಲಿಯೂ ಇವೆ ಈ ಎಲ್ಲಾ ಶಾಖೆಗಳಲ್ಲಿಯೂ ವಿವಿಧ ಹುದ್ದೆಗಳು ಖಾಲಿ ಇದ್ದು ಈ ಶಾಖೆಗಳಲ್ಲಿ ಒಂದು ವರ್ಷದ ಕೆಲಸ ನಿರ್ವಹಿಸಿದ ಬಳಿಕ ಅಭ್ಯರ್ಥಿಗಳಿಗೆ ಕೈಲಾಸ ದೇಶದಲ್ಲಿ ಕೈ ತುಂಬಾ ಸಂಬಳ ಸಿಗುವ ಕೆಲಸ ದೊರಕಲಿದೆಯಂತೆ.

ಉತ್ತಮ ವೇತನದೊಂದಿಗೆ ವಸತಿ ಸೌಲಭ್ಯ, ವೈದ್ಯಕೀಯ ಸೌಲಭ್ಯಗಳುೂ ದೊರಕಲಿವೆಯಂತೆ. ನಿತ್ಯಾನಂದ ಹಿಂದೂ ವಿಶ್ವವಿದ್ಯಾನಿಲಯ, ಸಾಗರೋತ್ತರ ದೇವಾಲಯಗಳು, ಭಾರತದಲ್ಲಿನ ಕೈಲಾಸ ಇಲಾಖೆಗಳು, ಕೈಲಾಸ್ ಐಟಿ ಕಂಪನಿಗಳು, ಕೈಲಾಸ್ ಕೊಳಾಯಿ ಮತ್ತು ಎಲೆಕ್ಟ್ರಿಕ್ ಘಟಕ, ಕೈಲಾಸ್ ವಿದೇಶಿ ರಾಯಭಾರಿ ಕಚೇರಿ ಸೇರಿದಂತೆ ಹಲವಾರು ಕಡೆಗಳಲ್ಲಿ ಉದ್ಯೋಗವು ದೊರಕಲಿದ್ದು ಹೊಸದಾಗಿ ಸೇರುವ ಅಭ್ಯರ್ಥಿಗಳಿಗೆ ತರಬೇತಿಯನ್ನು ನೀಡಿ ನಂತರ ಕೈಲಾಸ ದೇಶದಲ್ಲಿನ ಕೆಲಸಕ್ಕೆ ನೇರವಾಗಿ ಹೋಗುವ ಅವಕಾಶ ಸಿಗಲಿದೆಯಂತೆ. ಉಚಿತ ಊಟ, ವಸತಿ, ವೈದ್ಯಕೀಯ ಸೌಲಭ್ಯಗಳು ಸಿಗುವುದರಿಂದ ಅರ್ಹ ಅಭ್ಯರ್ಥಿಗಳು ಈ ಶಾಖೆಗಳನ್ನು ಸಂಪರ್ಕಿಸುವಂತೆ ಸೂಚಿಸಲಾಗಿದೆ.

Leave a Comment

error: Content is protected !!