Nithyananda: ವಿಶ್ವಸಂಸ್ಥೆಯಲ್ಲಿ ನಿತ್ಯಾನಂದನ ಪ್ರತಿನಿಧಿಗಳು ಹಾಜರು! ಯಾಕೆ ಅಂತ ಗೊತ್ತಾದ್ರೆ ನೀವು ಕೂಡ ಶಾ’ ಕ್ ಆಗ್ತೀರಾ!

Nithyananda ಕರ್ನಾಟಕ ರಾಜ್ಯದವರಿಗೆ ಕೆಲವೊಂದು ಸ್ವಾಮಿಗಳ ಪರಿಚಯ ಜೀವನದ ಕೊನೆಯ ತನಕವೂ ಕೂಡ ಇರುತ್ತದೆ ಅವರಲ್ಲಿ ಬಿಡದಿ ಮಠದ ನಿತ್ಯಾನಂದ(Nityananda) ಸ್ವಾಮಿ ಕೂಡ ಒಬ್ಬ. ಆತನ ಕಳ್ಳ ಆಟಗಳು ಬಯಲಾದ ಮೇಲೆ ಕೇವಲ ಕರ್ನಾಟಕದ ಜನರಿಗೆ ಮಾತ್ರವಲ್ಲದೇ ಇಡೀ ಭಾರತದ ಹಲವಾರು ಪ್ರದೇಶಗಳ ಜನರಿಗೂ ಕೂಡ ನಿತ್ಯಾನಂದನ ಪರಿಚಯ ನೇರವಾಗಿ ಆಗಿರುತ್ತದೆ.

ಈಗ ಇಕ್ವಿಡರ್ ದ್ವೀಪದ ಬಳಿ ಕೈಲಾಸ(Kailasa) ಎನ್ನುವ ತನ್ನದೇ ದೇಶವನ್ನು ಖರೀದಿ ಮಾಡಿಕೊಂಡು ತನ್ನ ಜನರೊಂದಿಗೆ ಅಲ್ಲಿಯೇ ವಾಸ ಮಾಡುತ್ತಿದ್ದಾನೆ ನಿತ್ಯಾನಂದ. ಈಗ ಹೊಸದಾಗಿ ಕೇಳಿ ಬರುತ್ತಿರುವ ವಿಚಾರವೇನೆಂದರೆ ನಿತ್ಯಾನಂದ ತನ್ನ ಪ್ರತಿನಿಧಿಗಳನ್ನು ಸ್ವಿಜರ್ಲ್ಯಾಂಡ್ ನ ಜಿನೇವಾದಲ್ಲಿ(Geneva) ನಡೆದಿರುವಂತಹ ವಿಶ್ವಸಂಸ್ಥೆಯ ಅಂತರಾಷ್ಟ್ರೀಯ ಮಹಿಳಾ ಸಮ್ಮೇಳನದಲ್ಲಿ ಕಳುಹಿಸಿಕೊಟ್ಟಿದ್ದಾನೆ.

ಇನ್ನು ಈ ಕುರಿತಂತೆ ನಿತ್ಯಾನಂದ ಕೂಡ ತನ್ನ ಸೋಶಿಯಲ್ ಮೀಡಿಯಾ ಖಾತೆಗಳಲ್ಲಿ ಪ್ರತಿಕ್ರಿಯಿಸಿದ್ದು ಇನ್ನು ಮುಂದೆ ದ ಯುನೈಟೆಡ್ ಸ್ಟೇಟ್ಸ್ ಆಫ್ ಕೈಲಾಸ(The United States Of Kailasa) ದೇಶದ ಪ್ರತಿನಿಧಿಯಾಗಿ ವಿಜಯಪ್ರಿಯ ಅವರು ವಿಶ್ವಸಂಸ್ಥೆಯಲ್ಲಿ ಕಾಯಂ ರಾಯಬಾರಿ ಆಗಿರಲಿದ್ದಾರೆ ಎಂಬುದಾಗಿ ತಿಳಿಸಿದ್ದಾನೆ. ಇನ್ನು ನಿತ್ಯಾನಂದನ ದೇಶಕ್ಕೆ ಇನ್ನೂ ಕೂಡ ರಾಷ್ಟ್ರೀಯ ಸ್ಥಾನಮಾನ ಸಿಕ್ಕಿದೆಯೋ ಇಲ್ಲವೋ ಎನ್ನುವುದು ಇನ್ನೂ ಕೂಡ ಖಚಿತವಾಗಿಲ್ಲ.

ಆತ ಯಾವ ಪ್ರಕರಣದಲ್ಲಿ ಸಿಲುಕಿದ್ದ ಎನ್ನುವುದು ನಿಮಗೆಲ್ಲರಿಗೂ ಗೊತ್ತಿರುವ ವಿಚಾರವಾಗಿದೆ. 2019 ರಲ್ಲಿ ಭಾರತ ದೇಶದಿಂದ ಪಲಾಯನ ಮಾಡಿ ಕೈಲಾಸ ಎನ್ನುವ ದ್ವೀಪವನ್ನು ಖರೀದಿಸಿ ಅದನ್ನೇ ತನ್ನ ರಾಷ್ಟ್ರವೆಂದು ಘೋಷಿಸಿಕೊಂಡು ಈಗ ಅಲ್ಲಿಯೇ ತನ್ನ ಅನುಯಾಯಿಗಳ ಜೊತೆಗೆ ಜೀವನವನ್ನು ನಡೆಸುತ್ತಿದ್ದಾನೆ. ನಿತ್ಯಾನಂದನ(Nithyananda Swamiji) ಬಗ್ಗೆ ನಿಮಗಿರುವಂತಹ ಅಭಿಪ್ರಾಯಗಳನ್ನು ಕಾಮೆಂಟ್ ಮೂಲಕ ಹಂಚಿಕೊಳ್ಳಬಹುದಾಗಿದೆ.

Leave A Reply

Your email address will not be published.