RBI: 100 200 500 ರೂಪಾಯಿ ನೋಟುಗಳ ಬಗ್ಗೆ ಮಹತ್ವವಾದ ನಿಯಮವನ್ನು ಹೊರಹಾಕಿದ ಆರ್‌ಬಿಐ. ಇಂದೇ ತಿಳಿಯಿರಿ.


RBI ನೋಟುಗಳ ಅಮಾನೀಕರಣ ದಿಂದ ದೇಶದ ಹಲವಡೆ ನಕಲಿ ನೋಟುಗಳ ಸಂಚಲನ ಕೂಡ ಆಗಲು ಪ್ರಾರಂಭವಾಗಿದೆ ಎಂಬುದಾಗಿ ಕೆಲವೊಂದು ಮೂಲಗಳು ತಿಳಿಸಿವೆ. ಪಂಜಾಬ್ ಬ್ಯಾಂಕ್ ಹೊರಡಿಸಿರುವ ಹೊಸ ಪ್ರಕಟಣೆಯ ಪ್ರಕಾರ ನೀವು ಹೊಸ ನೋಟುಗಳನ್ನು ಪಡೆಯಬಹುದಾಗಿದೆ ಎಂಬುದಾಗಿ ಟ್ವಿಟ್ ಮುಖಾಂತರ ತಿಳಿಸಿದೆ. ಒಂದು ವೇಳೆ ಹಳೆಯ ಹಾಗೂ ಹರಿದು ಹೋಗಿರುವ ವಿಕೃತ ನೋಟುಗಳು ನಿಮ್ಮ ಬಳಿ ಇದ್ದರೆ ಅದನ್ನು ಬದಲಾಯಿಸುವ ಯೋಚನೆ ಇದ್ದರೆ ಪಂಜಾಬ್ ಬ್ಯಾಂಕಿನ ಹತ್ತಿರದ ಶಾಖೆಗೆ(Branch) ಹೋಗಿ ನೀವು ಬದಲಾಯಿಸಬಹುದಾಗಿದೆ.

ಈ ಬ್ಯಾಂಕಿನ ಶಾಖೆಗಳಲ್ಲಿ ನೀವು ನೋಟು ಹಾಗೂ ನಾಣ್ಯಗಳನ್ನು ಬದಲಾವಣೆ ಮಾಡಿಕೊಳ್ಳಬಹುದಾಗಿದೆ. ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ(RBI) ಹೊರಡಿಸಿರುವ ಹೊಸ ನಿಯಮದ ಪ್ರಕಾರ ಒಂದು ವೇಳೆ ನಿಮ್ಮ ಬಳಿ ಹರಿದು ಹೋದ ಅಥವಾ ಹಳೆಯದಾದ ನೋಟುಗಳಿದ್ದರೆ ಚಿಂತಿಸಬೇಕಾದ ಅಗತ್ಯವಿಲ್ಲ. ಯಾವುದೇ ಬ್ಯಾಂಕಿನ ಶಾಖೆಗೆ ಹೋಗಿ ನೀವು ನೋಟುಗಳನ್ನು ಬದಲಾಯಿಸಿಕೊಳ್ಳಬಹುದಾಗಿದೆ ಒಂದು ವೇಳೆ ಆ ಬ್ಯಾಂಕಿನ ಸಿಬ್ಬಂದಿ ನಿಮ್ಮ ನೋಟುಗಳನ್ನು ತೆಗೆದುಕೊಳ್ಳಲು ನಿರಾಕರಿಸಿದರೆ ಅವರ ವಿರುದ್ಧ ನೀವು ದೂರನ್ನು ಕೂಡ ದಾಖಲಿಸಬಹುದಾಗಿದೆ.

ಆರ್ಬಿಐ ಹೇಳಿರುವ ನಿಯಮದ ಪ್ರಕಾರ ನೋಟಿನಹರಿದ ಒಂದು ಭಾಗ ಕಾಣೆಯಾದಾಗ ಎರಡಕ್ಕಿಂತ ಹೆಚ್ಚು ತುಣುಕುಗಳನ್ನು ಹೊಂದಿರುವ ಹಾಗೂ ಅದರ ಯಾವುದೇ ಪ್ರಮುಖ ಭಾಗಗಳು ಕಾಣೆಯಾಗಲಿಲ್ಲ ಎಂದರೆ ಮಾತ್ರ ಬದಲಾಯಿಸಲಾಗುತ್ತದೆ. ರಾಧಿಕಾರದ ಹೆಸರು ಗಾಂಧಿಯವರ ಭಾವಚಿತ್ರದಲ್ಲಿ ಬದಲಾವಣೆ ಅಶೋಕ ಸ್ತಂಭ ಸೇರಿದಂತೆ ನೋಟಿನಲ್ಲಿರುವ ಪ್ರಮುಖ ಸೂಕ್ಷ್ಮ ಭಾಗಗಳು ಒಂದು ವೇಳೆ ಕಾಣೆಯಾದರೆ ಅದನ್ನು ಬದಲಾಯಿಸಲು ಸಾಧ್ಯವಿಲ್ಲ. ಸುಟ್ಟ ಹಾಗೂ ಅಂಟುಕೊಂಡಂತಹ ನೋಟುಗಳನ್ನು ಕೂಡ ಬದಲಾಯಿಸಬಹುದು ಆದರೆ ಅದನ್ನು ನೀವು ಆರ್‌ಬಿಐ ಸಂಚಿಕೆ ಕಚೇರಿಗೆ ತರಬೇಕು. ನಿಮ್ಮ ಕರೆನ್ಸಿ ನೋಟುಗಳು ಉದ್ದೇಶಪೂರ್ವಕವಾಗಿ ಹಾನಿಯಾಗಿಲ್ಲ ಎಂಬುದನ್ನು ಅವರು ಪರಿಶೀಲನೆ(Inspection) ನಡೆಸಬೇಕು.

ಇನ್ನು ಮುಂದೆ ನೀವು ಹರಿದ ಹಾಗೂ ಹಾಳಾದ ನೋಟುಗಳನ್ನು ಹೇಗೆ ಬದಲಾಯಿಸುವುದು ಎನ್ನುವುದರ ಕುರಿತಂತೆ, ಚಿಂತೆ ಮಾಡಬೇಕಾದ ಅಗತ್ಯವಿಲ್ಲ. ಆರ್‌ಬಿಐ(RBI) ಹೊರಡಿಸಿರುವ ಹೊಸ ಅಧಿನಿಯಮದ ಪ್ರಕಾರ ನೀವು ನೋಟು ಬದಲಾವಣೆ ಮಾಡುವಂತಹ ಅಗತ್ಯ ಅರ್ಹತೆಗಳಿಗೆ ಒಳಪಟ್ಟಿದ್ದರೆ ಖಂಡಿತವಾಗಿ ಸುಲಭದಲ್ಲಿ ಯಾವುದೇ ಕಷ್ಟವಿಲ್ಲದ ನೀವು ನಿಮ್ಮ ಹಳೆಯ ನೋಟುಗಳನ್ನು ಹೊಸ ನೋಟುಗಳಿಗೆ ಬದಲಾವಣೆ ಮಾಡಿಕೊಳ್ಳಬಹುದಾಗಿದೆ.


Leave A Reply

Your email address will not be published.