ಹೊಸ ವಾಹನವನ್ನು ಖರೀದಿಸಿದ ಗಾಡಿಯ ಮಾಲೀಕ ಮನೆಗೆ ತಂದ ಮರು ಕ್ಷಣವೇ ಮಾಡಿದ ಎಡವಟ್ಟೇನು ಗೊತ್ತಾ?

ಸೋಶಿಯಲ್ ಮೀಡಿಯಾದಲ್ಲಿ ಇತ್ತೀಚಿಗಷ್ಟೇ ಹೊಸ ಕಾರನ್ನು ಖರೀದಿಸಿರುವ ಮಾಲಕ ಮಾಡಿಕೊಂಡಿರುವ ಎಡವಟ್ಟಿನ ಕಹಾನಿಯಾ ವಿಡಿಯೋ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು ಸೋಶಿಯಲ್ ಮೀಡಿಯಾದಲ್ಲಿ ದೊಡ್ಡ ಮಟ್ಟದ ಸುದ್ದಿ ಮಾಡುತ್ತಿದೆ. ಸಾಮಾನ್ಯವಾಗಿ ಗಾಡಿ ಓಡಿಸಲು ಬರದೇ ಇದ್ದರೂ ಕೂಡ ಕೆಲವೊಮ್ಮೆ ಗಾಡಿ ಓಡಿಸಲು ಹೋಗಿ ಎಡವಟ್ಟು ಮಾಡಿಕೊಂಡಿರುವುದನ್ನು ನಾವು ಗಮನಿಸಿರುತ್ತೇವೆ. ಆದರೆ ಇನ್ನೊಬ್ಬ ಆಸಾಮಿ ಗಾಡಿ ಓಡಿಸಲು ಬಂದರೂ ಕೂಡ ನಿಯಂತ್ರಣ ತಪ್ಪಿ ಮಾಡಿಕೊಂಡಿರುವ ಎಡವಟ್ಟು ಎಲ್ಲಾ ಕಡೆ ಸಖತ್ ಸೌಂಡ್ ಮಾಡುತ್ತಿದೆ.

ನೆಕ್ಸಾನ್ ಕಾರ್ ಅನ್ನು ಮುಂಬೈ ನಿವಾಸಿ ಒಬ್ಬ ಬುಕ್ ಮಾಡಿದ್ದ. ಹಲವಾರು ದಿನಗಳಿಂದ ಕಾದು ನಂತರ ಕೊನೆಗೂ ಕೂಡ ಆತನ ಕಾರ್ ಬಂದಿದ್ದ ಹಿನ್ನೆಲೆಯಲ್ಲಿ ಖರೀದಿಸಿ ಪೂಜೆ ಮಾಡಿಕೊಂಡು ಮನೆಯ ಬಳಿಗೆ ಪಾರ್ಕ್ ಮಾಡಲು ಬರುತ್ತಿದ್ದ. ಈ ಸಂದರ್ಭದಲ್ಲಿ ಪಾರ್ಕ್ ಮಾಡುವುದನ್ನು ಬಿಟ್ಟು ಪಾರ್ಕಿಂಗ್ ಮಾಡಿದ್ದ ಬೈಕ್ಗಳ ಮೇಲೆ ಕಾರನ್ನು ಹತ್ತಿಸಿದ್ದಾನೆ.

ಹೌದು ಈ ಘಟನೆ ಎನ್ನುವುದು ಸಿಸಿಟಿವಿ ಕ್ಯಾಮೆರಾ ಕಣ್ಣಿಗೆ ಸೆರೆಯಾಗಿದೆ. ನೆಕ್ಸಾನ್ ಕಾರಿನಲ್ಲಿ ಅಪಾರ್ಟ್ಮೆಂಟ್ ಒಳಗೆ ಬಂದಂತಹ ಕಾರಿನ ಮಾಲೀಕ ನಿಧಾನಗತಿಯಲ್ಲಿ ಬಂದು ಪಾರ್ಕ್ ಮಾಡುವುದರ ಬದಲಾಗಿ ವೇಗದ ನಿಯಂತ್ರಣ ತಪ್ಪಿ ಎಡಬದಿಯಲ್ಲಿ ಪಾರ್ಕ್ ಮಾಡಿದ್ದ ಸುಮಾರು 8 ರಿಂದ 10 ಬೈಕುಗಳ ಮೇಲೆ ಹರಿಹಾಯ್ದಿದ್ದಾನೆ.

ಇನ್ನು ಕಾರಿನ ಬಂಪರ್ ಹಾಗೂ ಟೈಯರ್ ಗಳು ಕೂಡ ಪುಡಿಪುಡಿಯಾಗಿವೆ ಎಂಬುದಾಗಿ ತಿಳಿದು ಬಂದಿದೆ. ಈ ಮೂಲಕ ಹೊಸ ವಾಹನವನ್ನು ಖರೀದಿಸಿ ತಂದ ಮೊದಲ ದಿನವೇ ವಾಹನದ ಮಾಲೀಕನಿಗೆ ಕೇವಲ ತನ್ನ ಗಾಡಿಗೆ ಮಾತ್ರವಲ್ಲದೆ ಜಖನ್ ಗೊಂಡಿರುವ ಬೇರೆ ಗಾಡಿಗಳ ಖರ್ಚನ್ನು ಕೂಡ ಎತ್ತಿಕೊಳ್ಳುವಂತಾಗಿದೆ ಎಂಬುದು ನಿಜಕ್ಕೂ ಕೂಡ ಶೋಚನೀಯ ವಿಚಾರ.

Leave a Comment

error: Content is protected !!