ಕೋವಿಡ್ ನಿಂದ ಮಗ ಸ’ತ್ತ’ ಮೇಲೆ ಸೊಸೆಗೆ ಲಕ್ಷಾಂತರ ಹಣ ನೀಡಿ ಅತ್ತೆ ಮಾಡಿದ ಕೆಲಸವೇನು ನೋಡಿ.

ತನ್ನ ಮಗ ಅಕಾಲಿಕ ಮ’ರ’ಣ ಹೊಂದಿದ್ದಾನೆ. ಇದರಿಂದ ನಮ್ಮ ಸೊಸೆಯನ್ನ ನಡುನೀರಿನಲ್ಲಿ ಕೈಬಿಟ್ಟ ಹಾಗೆ ಆಗಿದೆ ಆಕೆಗೆ ಏನಾದರೂ ದಾರಿ ಮಾಡಿಕೊಡಬೇಕು ಅಂತ, ಸೊಸೆಯನ್ನೂ ಒಪ್ಪಿಸಿ ಮತ್ತೊಂದು ಮದುವೆ ಮಾಡಿಸಿದ ಅತ್ತೆ-ಸೊಸೆಯ ಕಥೆ ಇದು. ಈ ಕಥೆಯನ್ನ ಕೇಳಿದ್ರೆ ನೀವು ಖಂಡಿತವಾಗಿಯೂ ಹೀಗಿರುವ ಅತ್ತೆಯೂ ಇರ್ತಾರಾ ಅಂತ ಶಾಕ್ ಆಗ್ತೀರಿ. ಬನ್ನಿ ಈ ಘಟನೆಯ ಬಗ್ಗೆ ಇನ್ನಷ್ಟು ಮಾಹಿತಿಯನ್ನ ನಾವು ನಿಮಗೆ ಹೇಳ್ತೀವಿ.

ಈ ಘಟನೆ ನಡೆದಿದ್ದು ಮಧ್ಯ ಪ್ರದೇಶದ ಧಾರ್ ನಗರದಲ್ಲಿ. ಇಲ್ಲಿ ವಾಸವಾಗಿರುವ ಯುಗ್ ತಿವಾರಿ ಹಾಗೂ ರಾಗಿಣಿ ರಿಚ್ ಎನ್ನುವ ಹುಡುಗಿಯನ್ನು ತಮ್ಮ ಮಗ ಪ್ರಿಯಾಂಕ್ ಜೊತೆ ಮದುವೆ ಮಾಡಿಸಿಕೊಂಡಿದರು. ಚೆನ್ನಾಗಿ ಸಂಸಾರ ಮಾಡಿಕೊಂಡಿದ್ದ ಇವರಿಗೆ ಒಂದು ಮುದ್ದಾದ ಹೆಣ್ಣು ಮಗುವೂ ಇತ್ತು. ಆದರೆ ಇವರ ಈ ಸಂತೋಷ ವಿಧಿಗೆ ಯಾಕೋ ಸಹಿಸೋದಕ್ಕೇ ಆಗಿಲ್ಲ ಅನ್ಸತ್ತೆ. ಪ್ರಿಯಾಂಕ್, ಕೋವಿಡ್ ಗೆ ಬಲಿಯಾಗಿ ಚಿಕ್ಕ ವಯಸ್ಸಿನಲ್ಲಿಯೇ ಇಹಲೋಕ ತ್ಯಜಿಸುತ್ತಾರೆ. ಇತ್ತ ಗಂಡನನ್ನು ಕಳೆದುಕೊಂಡ ರಿಚಾ ತನ್ನ ಮಗುವಿನೊಂದಿಗೆ ಅತ್ತೆ ಮನೆಯಲ್ಲಿ ಅತ್ತೆ ಮಾವನೊಂದಿಗೇ ಜೀವನ ನಡೆಸುತ್ತಿರುತ್ತಾಳೆ.

ತಮ್ಮ ಸೊಸೆಗೆ ಹೀಗಾಯಿತಲ್ಲ ಅಂತ ರೇಣುಕಾ ಹಾಗೂ ಯುಗ್ ತಿವಾರಿ ಯಾವಾಗಲೂ ಬೇಸರ ಮಾಡಿಕೊಳ್ಳುತ್ತಲೇ ಇರುತ್ತಾರೆ. ಈ ನಡುವೆ ಯುಗ್ ತಿವಾರಿ ಸೊಸೆಗೋಸ್ಕರ ಒಂದು ಬಂಗಲೆಯನ್ನೂ ಕೂಡ ಕಟ್ಟಿಸಿದ್ದರು. ಮಗ ತೀರಿಹೋದ ಒಂದು ವರ್ಷದ ಬಳಿಕ ಅತ್ತೆ ಮಾವ ಸೊಸೆಗೆ ಇನ್ನೊಂದು ಮದುವೆ ಮಾಡಿಸುವ ಯೋಚನೆ ಮಾಡುತ್ತಾರೆ. ಈ ಯೋಚನೆ ಬಂದಿದ್ದೇ ತಡ, ಸೊಸೆಯನ್ನ ಒಪ್ಪಿಸಿ ಮದುವೆ ಸಿದ್ಧತೆ ಮಾಡಿಯೇ ಬಿಡುತ್ತಾರೆ.

ಹೌದು, ರೇಣುಕಾ ಹಾಗೂ ಯುಗ್ ತಿವಾರಿ ಸೊಸೆ ರಿಚಾಳನ್ನು ಮಹಾರಾಷ್ಟ್ರದ ನಾಗ್ಪುರದಲ್ಲಿ ವಾಸಿಸುವ ಅರುಣ್ ಮಿಶ್ರಾ ಅವರೊಂದಿಗೆ ಸೊಸೆಯನ್ನ ತಮ್ಮ ಸ್ವಂತ ಮಗಳು ಎನ್ನುವ ಹಾಗೆ ಅದ್ಧೂರಿಯಾಗಿ ಮದುವೆ ಮಾಡಿ ಕೊಡುತ್ತಾರೆ. ಅಷ್ಟೇ ಅಲ್ಲ, ಸೊಸೆಗಾಗಿ ಕಟ್ಟಿಸಿದ್ದ 50 ಲಕ್ಷ ಬೆಲೆ ಬಾಳುವ ಬಂಗಲೆಯನ್ನೂ ಅವಳಿಗೆ ಗಿಫ್ಟ್ ಆಗಿ ಕೊಟ್ಟಿದ್ದಾರೆ ರೇಣುಕಾ ಹಾಗೂ ಯುಗ್ ತಿವಾರಿ ದಂಪತಿ. ಎಷ್ಟು ವಿಲಕ್ಷಣ ಕಥೆ ಅಲ್ವಾ! ಸಾಮಾನ್ಯವಾಗಿ ಅತ್ತೆ ಸೊಸೆ ಜಗಳ ಮಾಡಿಕೊಂಡಿದ್ದನ್ನೋ, ಅತ್ತೆ ಸೊಸೆಯನ್ನೇ ಕೊ’ಲೆ ಮಾಡಿದ್ದನ್ನೋ, ಸೊಸೆ ಇದ್ರೂ ಮಗನಿಗೆ ಮರು ಮದುವೆ ಮಾಡಿಸಿದ್ದನ್ನೋ ನೋಡಿದ್ದೇವೆ, ಕೇಳಿದ್ದೇವೆ. ಆದರೆ ಇಲ್ಲಿ ಸೊಸೆಯನ್ನ ತನ್ನ ಸ್ವಂತ ಮಗಳಿಗಿಂತ ಹೆಚ್ಚಾಗಿ ಅವಳ ಭವಿಷ್ಯಕ್ಕಾಗಿ ಒಂದು ದಾರಿ ಮಾಡಿಕೊಟ್ಟು ಬಹಳ ವಿಶೇಷ ಅನ್ನಿಸಿಕೊಂಡಿದ್ದಾರೆ ಈ ದಂಪತಿ.

ಇಷ್ಟೇ ಅಲ್ಲ, ಸೊಸೆಯನ್ನ ಮದುವೆ ಮಾಡಿ ಕಳಿಸುವಾಗ ಮಗಳನ್ನು ಅತ್ತೆ ಮನೆಗೆ ಕಳುಹಿಸುವಾಗ ತಾಯಿ ಹೇಗೆ ಕಣ್ಣೀರಿಡುತ್ತಾಳೋ ಹಾಗೆ ರೇಣುಕಾ ದಂಪತಿ ಹಾಗೂ ಅವರ ಕುಟುಂಬದವರೂ ಕೂಡ ಕಣ್ಣೀರಿಟ್ಟು ಸೊಸೆ ರಿಚಾ ಅವರನ್ನ ಕಳುಹಿಸಿದ್ದಾರೆ. ಇಂಥ ಘಟನೆಗಳು ನಿಜಕ್ಕೂ ನಮ್ಮ ದಿನವನ್ನು ಸಂತೋಷಗೊಳಿಸುತ್ತವೆ, ಇತರರಿಗೆ ಸ್ಪೂರ್ತಿಯೂ ಆಗುತ್ತವೆ. ಏನಂತೀರಿ. ಈ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ತಪ್ಪದೇ ನಮಗೆ ಕಮೆಂಟ್ ಮಾಡಿ ತಿಳಿಸಿ.

Leave a Comment

error: Content is protected !!