ಮದುವೆಯ ದಿನ ಮದುವೆ ಹೆಣ್ಣು ಬೇರೆ ಹುಡುಗನ ಜೊತೆ ಓಡಿ ಹೋಗಿರುವ ಸುದ್ದಿ ಕೇಳಿದ್ದೀವಿ. ನಿಶ್ಚಿತಾರ್ಥದ ನಂತರ ವಧು ಮದುವೆಯನ್ನು ನಿಲ್ಲಿಸಿ ಬೇರೆ ಹುಡುಗನ ಜೊತೆ ಮದುವೆಯಾದ ಹಲವಾರು ಘಟನೆಗಳು ನಡೆಯುತ್ತಲೇ ಇರುತ್ತವೆ. ಆದರೆ ಇದೀಗ ಮದುವೆ ಮಂಟಪದಲ್ಲಿ ಮದುವೆ ನಡೆಯುತ್ತಿರುವ ಸಂದರ್ಭದಲ್ಲಿ ವಧು ಮದುವೆಯನ್ನು ನಿಲ್ಲಿಸಿ ಮದುವೆಯನ್ನು ಕ್ಯಾನ್ಸಲ್ ಮಾಡಿದ ವಿಚಿತ್ರ ಘಟನೆಯೊಂದು ಉತ್ತರ ಭಾರತದಲ್ಲಿ ನಡೆದಿದೆ.

ಹುಡುಗ ಹುಡುಗಿ ಇಬ್ಬರೂ ಮದುವೆಗೆ ರೆಡಿಯಾಗಿದ್ದರು. ಇಬ್ಬರು ಕೂಡ ಮಂಟಪದಲ್ಲಿ ಹಾರವನ್ನು ಬದಲಾಯಿಸಿಕೊಂಡಿದ್ದರು. ತಾಳಿ ಕಟ್ಟೋಕೂ ಮುಂಚೆ ಹುಡುಗಿ ಹುಡುಗನನ್ನು ತಿರಸ್ಕರಿಸಿದ್ದಾಳೆ. ನನಗೆ ಈ ಮದುವೆ ಬೇಡವೇ ಬೇಡ ಎಂದು ಪಟ್ಟು ಹಿಡಿದು ಕೂತುಕೊಳ್ಳುತ್ತಾಳೆ. ಆಗ ಸಂಬಂಧಿಕರೆಲ್ಲಾ ಏಕೆ ಎಂದು ಪ್ರಶ್ನೆ ಮಾಡಿದಾಗ ಈ ಹುಡುಗಿ ಹೇಳಿದ ಕಾರಣ ಕೇಳಿ ಹುಡುಗನಿಗೆ ಎದೆಬಡಿತವೇ ನಿಂತಂತಾಗುತ್ತದೆ.

ನಾನು ವಿದ್ಯಾವಂತಳು. ಬಿಎಡ್ ಮುಗಿಸಿ ಪದವಿಯನ್ನು ಪಡೆದಿದ್ದೇನೆ. ಆದರೆ ಈ ಹುಡುಗ ಅನಕ್ಷರಸ್ಥ ನಾಗಿದ್ದಾನೆ ಮತ್ತು ಇವನಿಗೆ ಇಂಗ್ಲಿಷ್ ಮಾತನಾಡಲು ಬರುವುದಿಲ್ಲ ನನಗೆ ಅನಕ್ಷರಸ್ಥ ನ ಜೊತೆ ಸಂಸಾರ ಮಾಡಲು ಇಷ್ಟವಿಲ್ಲ ಎಂದು ಸಂಬಂಧಿಕರ ಸಮ್ಮುಖದಲ್ಲಿ ಎಲ್ಲರ ಮುಂದೆ ಹುಡುಗಿ ತನ್ನ ಭಿನ್ನವಾದ ಅಭಿಪ್ರಾಯವನ್ನು ತಿಳಿಸಿದ್ದಾಳೆ. ಆಗ ಹುಡುಗನ ಮನೆಯವರು ಹಾಗಾದರೆ ನಿನಗೆ ಈ ವಿಷಯ ಮುಂಚೆ ತಿಳಿದಿಲ್ಲವೇ.. ಅಷ್ಟಕ್ಕೂ ನೀನು ಏಕೆ ನಮ್ಮ ಮದುವೆಯಾಗಲು ಒಪ್ಪಿದ್ದೆ ಎಂದು ಪ್ರಶ್ನೆ ಮಾಡಿದ್ದಾರೆ.

ಆಗ ಹುಡುಗಿ ನನಗೆ ಈ ವಿಷಯ ಮುಂಚೆಯೇ ಗೊತ್ತಿತ್ತು. ಆದರೆ ನನ್ನ ತಂದೆ ತಾಯಿಯ ಒತ್ತಾಯಕ್ಕೆ ಮದುವೆಯಾಗಲು ಒಪ್ಪಿದ್ದೇನೆ. ನನ್ನ ಮನೆಯವರು ಹಣಕ್ಕೋಸ್ಕರ ಈತನನ್ನು ಮದುವೆಯಾಗಲು ನನ್ನನ್ನು ಒಪ್ಪಿಸಿದ್ದಾರೆ. ಆದರೆ ನನಗೆ ಓದಿರುವ ವಿದ್ಯಾವಂತ ಹುಡುಗ ಬೇಕು. ನಾನು ಈ ಹುಡುಗನ ಜೊತೆ ಸಂತೋಷವಾಗಿ ಇರಲು ಹೇಗೆ ಸಾಧ್ಯ. ನಾನು ಇಂಗ್ಲಿಷ್ ನಲ್ಲಿ ಮಾತನಾಡಲು ಆಗುವುದಿಲ್ಲ. ಈ ಹುಡುಗನಿಗೆ ಅಕ್ಷರದ ಜ್ಞಾನವೇ ಇಲ್ಲ. ಈತನನ್ನು ಕಟ್ಟಿಕೊಂಡು ನಾನು ಹೇಗೆ ಜೀವನ ಮಾಡಲಿ ಎಂದು ಅಲವತ್ತುಕೊಂಡಿದ್ದಾಳೆ. ಈ ಹುಡುಗಿ ತೆಗೆದುಕೊಂಡ ನಿರ್ಧಾರ ಸರೀನಾ ತಪ್ಪಾ ಎಂದು ನೀವು ಕಾಮೆಂಟ್ ಮಾಡಿ ತಿಳಿಸಿ

By admin

Leave a Reply

Your email address will not be published.