ಸುರಸುಂದರಿ ಹೆಂಡತಿಯ ಮಾತನ್ನು ಕೇಳಿ ಅಮ್ಮನನ್ನು ವೃದ್ಧಾಶ್ರಮಕ್ಕೆ ಸೇರಿಸಿದ ಮಗ ಆದರೆ ಮಹಾತಾಯಿ ತನ್ನ ಮಗನಿಗೆ ಮಾಡಿದ್ದೇನು ಗೊತ್ತಾ?
ತಾಯಿಯೇ ದೇವರು, ತಾಯಿಯೇ ಮೊದಲ ಗುರು. ತನ್ನ ಮಕ್ಕಳ ಭವಿಷ್ಯಕ್ಕಾಗಿ ಅವರ ಏಳ್ಗೆಗಾಗಿ ಆಕೆ ಪಡುವ ಕಷ್ಟ ಅಷ್ಟಿಷ್ಟಲ್ಲ. ತನ್ನ ಜೀವನಪರ್ಯಂತ ಮಕ್ಕಳಿಗಾಗಿಯೇ ದುಡಿಯುತ್ತಾಳೆ. ಮಕ್ಕಳಿಗಾಗಿಯೇ ಹಂಬಲಿಸುತ್ತಾಳೆ. ಆದರೆ ಬೆಳೆಯುತ್ತಿದ್ದ ಹಾಗೆ ಅದೆಷ್ಟೋ ಮಕ್ಕಳು ತಾಯಿಯ ತ್ಯಾಗವನ್ನೇಲ್ಲಾ ಮರೆತು ಕೇವಲ ಸ್ವಾರ್ಥದಿಂದ ಬದುಕುತ್ತಾರೆ. ಅಮ್ಮ ಅಪ್ಪ ಅನ್ನುವ ಭಾವನೆಯೇ ಇಲ್ಲದೇ ತಾನು ತನ್ನ ಹೆಂಡತಿ, ಮಕ್ಕಳು ಅಂತವೇ ಬದುಕುತ್ತಾರೆ. ಅಂತಹ ಒಂದು ಕರುಣಾಜನಕ ಘಟನೆಯೊಂದನ್ನು ನಾವಿಂದು ಹೇಳುತ್ತೇವೆ.
ಆಕೆಯ ಹೆಸರು ಸುಮತಿ.ತನ್ನ ಇಪ್ಪತೈದನೇ ವಯಸ್ಸಿನಲ್ಲಿಯೇ ಮದುವೆಯಾಗಿ, ವರ್ಷದಲ್ಲಿಯೇ ಗಂಡನನ್ನು ಕಳೆದುಕೊಂಡು ತನ್ನ ಮಗ ಶಂಕರನನ್ನು ಕಷ್ಟಪಟ್ಟು ಸಾಕುತ್ತಾಳೆ. ಇತರರ ಮನೆಯಲ್ಲಿ ಮನೆಗೆಲಸ ಮಾಡಿ ಶಂಕರನನ್ನು ಉತ್ತಮ ವಿದ್ಯಾಭ್ಯಾಸ ಕೊಡಿಸಿ, ಕೆಲಸವನ್ನೂ ಕೊಡಿಸಿದಳು. ನಂತರ ಶ್ವೇತ ಎನ್ನುವ ಸುಂದರವಾದ ಹುಡುಗಿಯೊಂದಿಗೆ ಮದುವೆಯನ್ನೂ ಮಾಡಿಸುತ್ತಾಳೆ. ತಾಯಿಯ ಎಲ್ಲಾ ಕರ್ತವ್ಯವನ್ನೂ ನಿಭಾಯಿಸಿ, ತನ್ನ ಇಬ್ಬರು ಮೊಮ್ಮಕ್ಕಳೊಂದಿಗೆ ಆರಾಮವಾಗಿ ಕಾಲ ಕಳೆಯುತ್ತಾಳೆ ಸುಮತಿ. ಆದರೆ ಈ ಖುಷಿ ಹೆಚ್ಚು ದಿನ ಅವಳ ಪಾಲಿಗೆ ಉಳಿಯಲಿಲ್ಲ. ಆಕೆ ವೃದ್ದೆಯಾಗಿ ಕೆಲಸ ಮಾಡಲು ಸಾಧ್ಯವಾಗದ ಸ್ಥಿತಿ ತಲುಪಿದಾಗ ಶ್ವೇತಾ ಸುಮತಿಯನ್ನು ಕೆಟ್ಟದಾಗಿ ನಡೆಸಿಕೊಳ್ಳಲು ಆರಂಭಿಸಿದಳು. ನಿಮ್ಮ ಅಮ್ಮ ಯಾವ ಕೆಲಸವನ್ನೂ ಮಾಡಲ್ಲ, ಮೊಮ್ಮಕ್ಕಳನ್ನೂ ನೋಡಿಕೊಳ್ಳುವುದಿಲ್ಲ ಅಂತ ದೂರುವುದಕ್ಕೆ ಶುರು ಮಾಡಿದಳು. ಕೊನೆಗೆ ನಿಮ್ಮ ಅಮ್ಮಈಮನೆಯಲ್ಲಿ ಇದುವುದು ಬೇಡ ವೃದ್ಧಾಶ್ರಮಕ್ಕೆ ಸೇರಿಸಿ ಎಂದು ಹಟ ಹಿಡಿದಳು.
ದಿನವೂ ಕೆಲಸದಿಂದ ಸುಸ್ತಾಗಿ ಬರುವ ಶಂಕರನಿಗೆ ಏನು ಮಾಡುವುದು ಎನ್ನುವ ದಿಕ್ಕೇ ತೊಚದಾಗಿತ್ತು. ಹೆಂಡತಿ ಮಾತನ್ನು ಕೇಳುವುದೋ, ಅಮ್ಮನ ಮಾತನ್ನು ಕೇಳುವುದೋ ಎನ್ನುವ ಚಿಂತೆಯಾಗಿತ್ತು. ಇದಕ್ಕೂ ಆತನ ಅಮ್ಮ ಸುಮತಿಯೇ ಪರಿಹಾರವನ್ನು ಸೂಚಿಸುತ್ತಾಳೆ. ಮಗನೇ ನಿನ್ನ ಹೆಂಡತಿಗೆ ನಾನು ಈ ಮನೆಯಲ್ಲಿ ಇರುವುದು ಇಷ್ಟವಿಲ್ಲ ಎಂದು ನನಗೆ ಗೊತ್ತಾಗಿದೆ. ನನ್ನ ಕಾರಣಕ್ಕೆ ನೀವಿಬ್ಬರೂ ದಿನವೂ ಜಗಳಾಡುವುದು ಬೇಡ. ನೀನು ನೆಮ್ಮದಿ ಕಳೆದುಕೊಳ್ಳುವುದು ಬೇಡ. ನನ್ನನ್ನು ಯಾವುದಾದರೂ ವೃದ್ಧಾಶ್ರಮಕ್ಕೆ ಸೇರಿಸಿಬಿಡು ಎಂದು ಹೇಳುತ್ತಾಳೆ. ಮಗನೂ ಕೊನೆಗೆ ಒಪ್ಪಿ ತಾಯಿಯನ್ನು ವೃದ್ಧಾಶ್ರಮವೊಂದಕ್ಕೆ ಸೇರಿಸುತ್ತಾನೆ. ದಿನ ಹೀಗೆ ಕಳೆಯುತ್ತದೆ. ತಾಯಿಯನ್ನು ಆಗಾಗ ಮಗ ಶಂಕರ ಹೋಗಿ ನೋಡಿಕೊಂಡು ಬರುತ್ತಾನೆ. ಆದರೆ ಮೊಮ್ಮಕ್ಕಳನ್ನು ಮಾತ್ರ ಶ್ವೇತ ಕಳಿಸುವುದಿಲ್ಲ. ಎಲ್ಲಿ ಮೊಮ್ಮಕ್ಕಳನ್ನು ಕಂಡು ಮತ್ತೆ ಮನೆಗೆ ಅತ್ತೆ ಬರುತ್ತಾಳೋ ಎಂದು ಶ್ವೇತಾ ಮಕ್ಕಳನ್ನು ಕಳುಹಿಸಿಕೊಡುವುದಿಲ್ಲ. ಶ್ವೆತಾಳ ಈ ಬುದ್ಧಿಯೂ ಸುಮತಿಗೆ ಗೊತ್ತಾಗುತ್ತದೆ. ಆದರೂ ಒಂದು ಮಾತನ್ನೂ ಆಡುವುದಿಲ್ಲ.
ಒಂದು ದಿನ ಶ್ವೇತಾ ಅಪ’ಘಾ’ತಕ್ಕೆ ಈಡಾಗಿ ಗಂಭೀರ ಗಾಯಗಳಾಗುತ್ತವೆ. ಆಕೆಯ ಶಸ್ತ್ರಚಿಕಿತ್ಸೆಗೆ ಎರಡು ಲಕ್ಷ ಹಣ ಖರ್ಚಾಗುತ್ತದೆ. ಶಂಕರ ಬಡ್ಡಿ ಹಣ ತೆಗೆದುಕೊಂಡು ಆಕೆಯ ಶಸ್ತ್ರಚಿಕಿತ್ಸೆ ಮಾಡಿಸುತ್ತಾನೆ. ಇದಾಗಿ ಮೂರು ತಿಂಗಳು ಕಳೆಯುತ್ತವೆ. ಶ್ವೇತಾ ಕೂಡ ಚೇತರಿಸಿಕೊಳ್ಳುತ್ತಾಳೆ. ಮೂರು ತಿಂಗಲ ನಂತರ ಅಮ್ಮನನ್ನು ನೋಡಲು ಶಂಕರ ಹೊಗುತ್ತಾನೆ. ಇಷ್ಟು ದಿನ ಯಾಕೆ ತನ್ನನ್ನು ನೋಡಲು ಬರಲಿಲ್ಲ ಎಂದು ತಾಯಿ ಕೇಳಿದಾಗ ನಡೆದ ಘಟನೆಯನ್ನು ವಿವರಿಸುತ್ತಾನೆ. ಎರಡು ಲಕ್ಷ ಸಾಲ ಮಾಡಿ ಬದುಕು ನಡೆಸುವುದೇ ಕಷ್ಟವಾಗಿದೆ ಎನ್ನುತ್ತಾನೆ. ತಾಯಿ ಎಲ್ಲವನ್ನೂ ಕೇಳಿಸಿಕೊಂಡು ಸುಮ್ಮನಗುತ್ತಳೆ.
ಕೆಲವು ದಿನಗಳು ಕಳೆದ ಬಳಿಕ ಶಂಕರನಿಗೆ ವೃದ್ಧಾಶ್ರಮದಿಂದ ಒಂದು ಕರೆಬರುತ್ತದೆ. ತುರ್ತಾಗಿ ಬರುವಂತೆ ತಿಳಿಸುತ್ತಾರೆ. ಈಗಾಗಲೇ ಸಾಲದಲ್ಲಿದ್ದೇನೆ. ಅಮ್ಮನಿಗೆ ಏನಾದರೂ ಆಗಿದ್ದರೆ ಮತ್ತೆ ದುಡ್ದಿಗೇನು ಮಾಡಲಿ ಎಂದು ಯೋಚನೆಯಾಗುತ್ತದೆ. ಆದರೂ ವೃದ್ಧಾಶ್ರಮಕ್ಕೆ ದೌಡಾಯಿಸುತ್ತಾನೆ. ಅಲ್ಲಿ, ಆತನಿಗೆ ಒಂದು ಕವರ್ ಕೊಟ್ಟು, ನಿಮ್ಮ ಅಮ್ಮ ಇಲ್ಲಿಲ್ಲ ಎಂದು ಹೇಳುತ್ತಾರೆ. ಆ ಕವರ್ ನಲ್ಲಿ ಒಂದು ಪತ್ರ ಹಾಗೂ ಎರಡು ಲಕ್ಷದ ಚೆಕ್ ಇರುತ್ತದೆ. ತಾನು ಮಗನ ಸಾಲ ತೀರಿಸುವುದಕ್ಕಾಗಿ ತನ್ನ ಕಿಡ್ನಿಯನ್ನು ಮಾಡಿರುವುದಾಗಿಯೂ, ತನ್ನನ್ನು ಹುಡುಕುವುದು ಬೇಡ ತಾನು ಎಲ್ಲರಿಂದ ದೂರವಾಗುತ್ತಿದ್ದೇನೆ ಎಂದೂ ಬರೆದಿರುತ್ತಾಳೆ. ಇದನ್ನು ಓದಿದ ಶಂಕರನಿಗೆ ಭೂಮಿಯೇ ಬಾಯಿಬಿಟ್ಟಂಥ ಅನುಭವವಾಗಿ ಅಮ್ಮನನ್ನು ಹೀಗೆ ನಡೆಸಿಕೊಂಡಿದ್ದಕ್ಕೆ ಪಶ್ಚಾತಾಪ ಪಡುತ್ತಾನೆ. ಆದರೆ ಕಾಲ ಮಿಂಚಿಹೋಗಿತ್ತು ಸುಮನಿ, ಮಗನನ್ನು ಬಿಟ್ಟು ದೂರ ಹೋಗಿದ್ದಳು!