Mahindra: ಚಾಲಕನಿಲ್ಲದೆ ಸ್ವಯಂ ಚಾಲಿತವಾಗಿ ಓಡಾಡುವ ಕಾರನ್ನು ರಸ್ತೆಗಳಿಸಿದ ಮಹಿಂದ್ರ ಸಂಸ್ಥೆ! ಯಾವ ಕಾರು ಇದರ ವಿಶೇಷತೆಗಳೇನು ಇಲ್ಲಿದೆ ನೋಡಿ!

Mahindra Cars ಇತ್ತೀಚಿನ ದಿನಗಳಲ್ಲಿ ಮಾರುಕಟ್ಟೆಯಲ್ಲಿ ಹಲವಾರು ವಿವಿಧ ಕಂಪನಿಗಳ ಕಾರುಗಳು ಬಿಡುಗಡೆ ಕಾಣುತ್ತಿದ್ದು ಒಂದಕ್ಕೊಂದು ಪೈಪೋಟಿ ನೀಡುವಂತೆ ಮಾರುಕಟ್ಟೆಯಲ್ಲಿ ಕಂಡುಬರುತ್ತಿವೆ. ಇನ್ನು ಎಸ್ಯುವಿ(SUV) ಗಳ ವಿಚಾರದಲ್ಲಿ ಮಹೀಂದ್ರ ಸಂಸ್ಥೆ ಕೂಡ ಯಾವ ವಿದೇಶಿ ಕಂಪನಿಗಳಿಗೂ ಕೂಡ ಹಿಂದೆ ಬೀಳದಂತೆ ಉತ್ತಮ ಕಾರುಗಳನ್ನೇ ಮಾರುಕಟ್ಟೆಗೆ ಪರಿಚಯಿಸುತ್ತಿದೆ. ಇನ್ನು ಇತ್ತೀಚಿಗಷ್ಟೇ ಸ್ವಯಂ ಚಾಲಿತ ಚಾಲಕ ರಹಿತ ಗಾಡಿಯನ್ನು ಕೂಡ ಮಹೇಂದ್ರ ಸಂಸ್ಥೆ ಮಾರುಕಟ್ಟೆಗೆ ಪರಿಚಯಿಸಿದೆ.

ಮಹೀಂದ್ರಾ XUV700 ನಲ್ಲಿರುವಂತಹ ಆಟೋ ಪೈಲೆಟ್ ಮೋಡ್ ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ಸಂಚಲನವನ್ನು ಸೃಷ್ಟಿಸಿದ್ದು ಈ ವಿಡಿಯೋದಲ್ಲಿ ಮಹಿಂದ್ರಾ(Mahindra) ಸಂಸ್ಥೆಯ ಈ ಕಾರು ಯಾವುದೇ ಚಾಲಕ ಇಲ್ಲದೆ ಕೇವಲ ಸಹ ಪ್ರಯಾಣಿಕನನ್ನು ಹೊಂದಿ ಕಾರು ಸ್ವಯಂ ಚಾಲಿತವಾಗಿಯೇ ಚಾಲನೆ ಆಗುತ್ತಿರುವುದು ಕಂಡುಬಂದಿದೆ.

ಆ ವಿಡಿಯೋದಲ್ಲಿ ಮಹೇಂದ್ರ xuv700 ಕಾರ್ ನಲ್ಲಿ ಆಟೋ ಪೈಲೆಟ್ ಮೋಡ್ ಎನ್ನುವುದಾಗಿ ಬರೆದಿದ್ದು ಕಂಡುಬಂದಿದ್ದು ಚಾಲಕನ ಸೀಟಿನಲ್ಲಿ ಯಾರು ಕೂಡ ಕುಳಿತುಕೊಂಡಿರಲಿಲ್ಲ. ಕೇವಲ ಇಷ್ಟು ಮಾತ್ರವಲ್ಲದೆ ತಿರುವಿನಲ್ಲಿ ಕೂಡ ಗಂಟೆಗೆ 90 ಕಿಲೋಮೀಟರ್ ವೇಗದಲ್ಲಿ ಕಾರು ಹೋಗುತ್ತಿರುವುದು ಕಂಡುಬಂದಿದೆ.

ಇದನ್ನು ಸೋಶಿಯಲ್ ಮೀಡಿಯಾದಲ್ಲಿ ನೋಡಿರುವ ಜನ ಇದು ಯಾವುದಪ್ಪ ಬೂತದ ಕಾರ್(Car) ಎಂಬುದಾಗಿ ಹಾಸ್ಯಾಸ್ಪದವಾಗಿ ಕಾಮೆಂಟ್ ಮಾಡಿದ್ದಾರೆ. ಈ ಕಾರಿನ ಬಗ್ಗೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ನಮ್ಮೊಂದಿಗೆ ತಪ್ಪದೆ ಕಾಮೆಂಟ್ ಬಾಕ್ಸ್ ನಲ್ಲಿ ಕಾಮೆಂಟ್ ಮಾಡುವ ಮೂಲಕ ತಪ್ಪದೆ ಹಂಚಿಕೊಳ್ಳಿ.

Leave a Comment

error: Content is protected !!