ಒಂದೇ ಮಂಟಪದಲ್ಲಿ ತನ್ನ ಮೂವರು ಪ್ರೇಯಸಿಯರನ್ನು ಮದುವೆಯಾದ ಪುರುಷ. 40 ವರ್ಷದ ರಸಿಕ ೩ ಜನ ಹೆಣ್ಣುಮಕ್ಕಳನ್ನ ಮದುವೆಯಾದ ರೋಚಕ ಕಥೆ ಇಲ್ಲಿದೆ ನೋಡಿ

ಈಗಿನ ಕಾಲದಲ್ಲಿ ಗಂಡು ಮಕ್ಕಳಿಗೆ ಹೆಣ್ಣುಮಕ್ಕಳ ಕೊರತೆಯಿದೆ. ವಯಸ್ಸಿಗೆ ಬಂದ ಹುಡುಗರಿಗೆ ಒಳ್ಳೆಯ ಕೆಲಸ, ಆಸ್ತಿಪಾಸ್ತಿ ಇದ್ದರೂ ಕೂಡ ಹೆಣ್ಣುಮಕ್ಕಳು ಸಿಗುವುದಿಲ್ಲ. ಒಂದು ಹೆಣ್ಣು ಮಗಳೇ ಸಿಗದಂತಹ ಇಂತಹ ಕಾಲದಲ್ಲಿ, ಮೂರು ಜನ ಹೆಣ್ಣು ಮಕ್ಕಳನ್ನು ಪ್ರೀತಿಸಿ ಪುಸಲಾಯಿಸಿ ಮದುವೆ ಆದ ಪುರುಷನೊಬ್ಬ ಇದೀಗ ವೈರಲ್ ಆಗುತ್ತಿದ್ದಾನೆ. ಮಧ್ಯಪ್ರದೇಶದ ಅಲಿರಾಜಪುರ ಜಿಲ್ಲೆಯ ಬುಡಕಟ್ಟು ಜನಾಂಗದ ಪುರುಷ ಮೂರು ಜನ ಹೆಂಗಸರನ್ನು ಒಂದೇ ಮಂಟಪದಲ್ಲಿ ಮದುವೆಯಾಗಿ ಪ್ರತಿಯೊಬ್ಬರಿಗೂ ಬೆರಗು ಮೂಡಿಸಿದ್ದಾನೆ.

ಈ ರಣಧೀರನ ಹೆಸರು ಸಮ್ರತ್ ಮೌರ್ಯ ಅಂತ. ಇನ್ನೊಂದು ಕುತೂಹಲಕಾರಿ ವಿಷಯ ಏನೆಂದರೆ ಈ ಪುರುಷ ಮೂರು ಹೆಂಗಸರನ್ನು ಮದುವೆಯಾಗುವುದಷ್ಟೇ ಅಲ್ಲದೆ ಈತನಿಗೆ ಈಗಾಗಲೇ 6 ಜನ ಮಕ್ಕಳಿದ್ದಾರೆ. ಪ್ರತಿಯೊಬ್ಬ ಪ್ರೇಯಸಿಗೆ ಎರಡು ಮಕ್ಕಳನ್ನು ಕೊಟ್ಟಿದ್ದಾನೆ. ಈತನ ಈ ನಿರ್ಧಾರಕ್ಕೆ ಊರಿನವರೇ ಆಗಲಿ ಅಥವಾ ಸರ್ಕಾರವೇ ಆಗಲಿ ಮತ್ತು ಈತನ ಪ್ರೇಯಸಿಯರೇ ಆಗಲಿ ಯಾರೂ ಕೂಡ ತಿರಸ್ಕರಿಸಿಲ್ಲ. ಎಲ್ಲರ ಸ್ವ ಇಚ್ಛೆ ಮೇರೆಗೆ ಈತ ಕುಟುಂಬಸ್ಥರ ಸಮ್ಮುಖದಲ್ಲಿ ಎಲ್ಲರ ಆಶೀರ್ವಾದ ಪಡೆದು ಮದುವೆಯಾಗಿದ್ದಾನೆ.

ಸಮ್ರತ್ ಮೌರ್ಯ ಎಂಬ ಈ ಪುರುಷ ಮುಂಚೆ ನಾನಾಪುರದ ಗ್ರಾಮ ಪಂಚಾಯತ್ ಅಧ್ಯಕ್ಷ ನಾಗಿ ಕೆಲಸ ಮಾಡುತ್ತಿದ್ದ. ಹಾಗೆ ಇವನು ಹದಿನೈದು ವರ್ಷಗಳ ಹಿಂದೆಯೇ ತನ್ನ ಮೂವರು ಪ್ರೇಯಸಿ ಗಳಾದ ಮೈನಾಬಾಯಿ ಮೇಳ ಮತ್ತು ಸಾಕಾರ್ ಎಂಬ 3 ಮಹಿಳೆಯರನ್ನು ಪ್ರೀತಿ ಮಾಡುತ್ತಿದ್ದ. ಈ ಮೂವರು ಹೆಂಗಸರ ಜೊತೆ ಲಿವ್ ಇನ್ ರಿಲೇಶನ್ ಶಿಪ್ ನಲ್ಲಿ ಬದುಕುತ್ತಿದ್ದ. ಮೂವರು ಹೆಣ್ಣು ಮಕ್ಕಳನ್ನು ಹೇಗೆ ಮದುವೆಯಾದೆ ಎಂಬ ರೋಚಕ ಕಥೆಯನ್ನು ಸ್ವತಃ ಸಮ್ರತ್ ಮೌರ್ಯ ನೇ ಸತ್ಯ ಬಾಯ್ಬಿಟ್ಟಿದ್ದಾನೆ.

ಸಮ್ರತ್ ಮೌರ್ಯ ಗೆ ಈಗ ನಲವತ್ತು ವರ್ಷ. ಇದೀಗ ಇವನ ಕೈಯಲ್ಲಿ ಹಣವಿದೆ ಮತ್ತು ಜೀವನ ಸಾಗಿಸುವಷ್ಟು ಆಸ್ತಿ ಕೂಡ ಇದೆ. ಆದರೆ ಹದಿನೈದು ವರ್ಷಗಳ ಹಿಂದೆ ಇವನ ಹತ್ತಿರ ಜೀವನ ಸಾಗಿಸುವಷ್ಟು ಸೌಕರ್ಯ ಮತ್ತು ಶಕ್ತಿ ಇರಲಿಲ್ಲ. ಈ ಕಾರಣದಿಂದ ಇವನು 3ಜನ ಪ್ರೇಯಸಿಯರನ್ನು ಪ್ರೀತಿ ಮಾಡಿ ಅವರ ಜೊತೆ ಲಿವ್ ಇನ್ ಇನ್ ರಿಲೇಷನ್ ಶಿಪ್ ಸಂಬಂಧ ಬೆಳೆಸಿದ್ದ. ಒಬ್ಬರು ಆದಮೇಲೆ ಇನ್ನೊಬ್ಬರನ್ನು ಪ್ರೀತಿಯಲ್ಲಿ ಬಿಳಿಸಿಕೊಂಡು ಸಮ್ರತ್ ಮೌರ್ಯಅವರ ಜೊತೆ ಸಂಬಂಧ ಬೆಳೆಸಿದ್ದ. ಹಲವು ವರ್ಷಗಳ ಕಾಲ ಈ ವಿಷಯ ಅವನ ೩ ಜನ ಪ್ರೇಯಸಿಗಳಿಗೆ ತಿಳಿದಿರಲಿಲ್ಲ. ಮಕ್ಕಳು ಆದ ಮೇಲೆ ಈ ವಿಷಯವನ್ನು ಅವನು ತನ್ನ ಪ್ರಿಯಸಿಯರಿಗೆ ತಿಳಿಸಿದ್ದಾನೆ.

ಆಶ್ಚರ್ಯಕರ ವಿಷಯವೆಂದರೆ ಇವನು ಇನ್ನೊಬ್ಬ ಮಹಿಳೆಯ ಜೊತೆ ಸಂಬಂಧ ಹೊಂದಿದ್ದರೂ ಕೂಡ ಇವನ ಪ್ರೇಯಸಿಯರು ಇವನನ್ನು ತಿರಸ್ಕರಿಸಿಲ್ಲ.ಯಾಕೆಂದರೆ ಈ ಮಹಿಳೆಯರು ಬಿಲಾಲ ಸಮುದಾಯಕ್ಕೆ ಸೇರಿದವರು. ಬಿಲಾಲಾ ಸಮುದಾಯದಲ್ಲಿ ಮದುವೆಗೂ ಮುಂಚೆಯೇ ಇನ್ನೊಬ್ಬ ಮಹಿಳೆ ಜೊತೆ ಸಂಬಂಧ ಹೊಂದುವ ಅಭ್ಯಾಸ ಪ್ರಚಲಿತದಲ್ಲಿದೆ. ವಿಷಯ ತಿಳಿದ ನಂತರ ಮೂವರು ಮಹಿಳೆಯರು ಇವನನ್ನು ಮದುವೆಯಾಗುವಂತೆ ಒತ್ತಾಯಿಸಿದರು. ಮೂವರು ಪ್ರೇಯಸಿಯರ ಮತ್ತು ಅವರ ಪಾಲಕರ ಒತ್ತಾಯದ ಮೇರೆಗೆ ಈತ ಮೂವರನ್ನು ಮದುವೆಯಾಗಿದ್ದಾನೆ. ಭಾರತೀಯ ಸಂವಿಧಾನದ ಆರ್ಟಿಕಲ್ 342 ನೇ ವಿಧಿಯ ಬುಡಕಟ್ಟು ಪದ್ಧತಿಗಳು ಮತ್ತು ನಿರ್ದಿಷ್ಟ ಸಾಮಾಜಿಕ ಸಂಪ್ರದಾಯಗಳನ್ನು ರಕ್ಷಿಸುತ್ತದೆ. ಆರ್ಟಿಕಲ್ 342 ನೇ ಈ ಲೇಖನದ ಪ್ರಕಾರ 3 ಹೆಂಗಸರೊಂದಿಗೆ ಸಮ್ರತ್ ಮೌರ್ಯ ವಿವಾಹವಾಗಿದ್ದು ಕಾನೂನು ಬದ್ಧವಾಗಿ ಮಾನ್ಯವಾಗಿದೆ.

Leave a Comment

error: Content is protected !!