Law Information: ತಾಯಿಯ ತವರು ಮನೆಯಲ್ಲಿ ಮಕ್ಕಳಿಗೆ ಪಾಲು ಇದೆಯಾ ಇಲ್ವಾ? ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ.

Law Information ಆಸ್ತಿಯ ಪಾಲುಗಾರಿಕೆ(Property Devide) ವಿಚಾರದಲ್ಲಿ ಸಾಕಷ್ಟು ಗೊಂದಲಗಳು ಇದ್ದು ಇದರ ಕುರಿತಂತೆ ಇಂದಿನ ಲೇಖನಿಯಲ್ಲಿ ನಾವು ಮಾತನಾಡಲು ಹೊರಟಿದ್ದೇವೆ. ತಂದೆಯಿಂದ ಮಗಳಿಗೆ ಬಂದಂತಹ ಆಸ್ತಿ ಆಕೆ ಹೆಸರಿಗೆ ಆಗುತ್ತದೆ ಹಾಗೂ ಆ ಆಸ್ತಿಗೆ ಅವರೇ ಪೂರ್ಣ ಪ್ರಮಾಣದ ಹಕ್ಕುದಾರರಾಗಿರುತ್ತಾರೆ. ತಂದೆ ಮಗಳ ಹೆಸರಿಗೆ ಬರೆಯುವಂತಹ ಹಾಗೂ ಆಕೆಗೆ ದಾನವಾಗಿ ನೀಡುವಂತಹ ಎಲ್ಲಾ ಆಸ್ತಿಗಳು ಕೂಡ ಅದೇ ಅಧಿನಿಯಮದ ಪ್ರಕಾರ ಬರುತ್ತದೆ.

ಇನ್ನು ಆ ಹೆಣ್ಣು ಮಗಳು ಮದುವೆಯಾದ ನಂತರ ಇದರ ಸಂಪೂರ್ಣ ಅಧಿಕಾರವೂ ಕೂಡ ಅವಳಿಗೆ ಇರುತ್ತದೆ. ಅದನ್ನು ನೇರವಾಗಿ ಮಾರುವಂತಹ ಅಧಿಕಾರ ಆಕೆಯ ಗಂಡ ಅಥವಾ ಮಗಳು ಅಥವಾ ಮಗನಿಗೂ ಕೂಡ ಇರುವುದಿಲ್ಲ. ಹೀಗಾಗಿ ಒಂದು ವೇಳೆ ಆಕೆ ತನ್ನ ಹೆಸರಿನಲ್ಲಿರುವಂತಹ ಆಸ್ತಿಯನ್ನು ಯಾರ ಹೆಸರಿಗೂ ಬರೆಯದೆ ಹಾಗೆ ಮರಣ ಹೊಂದಿದರೆ ಅವರ ನೇರ ವಾರಿಸುದಾರರು ಅಂದರೆ ಅವರ ಮಗಳು ಅಥವಾ ಮಗ ತಾಯಿಯ ಮರಣದ ಉದಾರೆಯನ್ನು ತೆಗೆದುಕೊಳ್ಳುವ ಮೂಲಕ ಆಸ್ತಿಯನ್ನು(Property) ತನ್ನ ಹಕ್ಕಿಗೆ ವರ್ಗಾಯಿಸಿಕೊಳ್ಳಬಹುದಾಗಿದೆ. ಈ ನಿಯಮದ ಪ್ರಕಾರ ಅವರಿಗೆ ನೇರವಾಗಿ ಸಂಬಂಧಿಸಿದಂತಹ ಯಾವುದೇ ವ್ಯಕ್ತಿಗಳು ಕೂಡ ಅವರ ಆಸ್ತಿಯ ಹಕ್ಕನ್ನು ಸಮಾನವಾಗಿ ಪಡೆಯಬಹುದಾಗಿದೆ.

ಒಂದು ವೇಳೆ ಈ ರೀತಿ ಆಸ್ತಿಯನ್ನು ಹೊಂದಿರುವ ಮಹಿಳೆ ಸೊಸೆಯನ್ನು ಹೊಂದಿದ್ದರೆ, ಆ ಸೊಸೆ ತನ್ನ ಅತ್ತೆಯನ್ನು ಚೆನ್ನಾಗಿ ನೋಡಿಕೊಂಡರೆ ಅವಳು ಪ್ರೀತಿಯಿಂದ ತನ ಸೊಸೆಗೆ ತನ್ನ ಪಿತೃ ಆಸ್ತಿಯನ್ನು ನೀಡಬಹುದಾಗಿದೆ. ಒಂದು ವೇಳೆ ಆಸ್ತಿಗಾಗಿ ಆಕೆ ಕಪಟ ಮಾಡುವ ಹಾಗೂ ಮೋಸ ಮಾಡುವ ಯೋಚನೆ ಮಾಡಿದರೆ ಅವಳ ಕೈಯಿಂದ ಈ ಆಸ್ತಿ ತಪ್ಪಿ ಹೋಗುವ ಸಾಧ್ಯತೆ ಹೆಚ್ಚಾಗಿರುತ್ತದೆ ಯಾಕೆಂದರೆ ಇದರ ಸಂಪೂರ್ಣ ವರ್ಗಾವಣೆಯ(Transfer) ಅಧಿಕಾರ ಇರುವುದು ಅತ್ತೆಗೆ ಮಾತ್ರ.

ಹೀಗಾಗಿ ಒಂದು ವೇಳೆ ನಿಮ್ಮ ಕುಟುಂಬದ ಹಿರಿಯ ಮಹಿಳೆಯ ಬಳಿ ಆಸ್ತಿ ಇದ್ದರೆ ನೀವು ಈ ರೀತಿ ಉಪಚಾರ ಆರೈಕೆಗಳನ್ನು ಮಾಡುವ ಮೂಲಕವೂ ಕೂಡ ಅವುಗಳನ್ನು ಪಡೆಯಬಹುದಾಗಿದೆ. ಆದರೆ ಕೊನೆದಾಗಿ ಅದನ್ನು ಯಾರಿಗೆ ನೀಡುವ ಆಲೋಚನೆ ಮಾಡಬೇಕು ಎನ್ನುವ ಹಕ್ಕು ಇರುವುದು ಅವರಿಗೆ ಮಾತ್ರ. ಇದನ್ನು ಸ್ತ್ರೀ ಧನ(Stree Dhan) ಎಂದು ಕರೆಯಲಾಗುವುದು. ಇವುಗಳೆ ಗೆಳೆಯರೇ ಸ್ತ್ರೀ ಧನ ಆಸ್ತಿಯ ಕಾನೂನಿನ ಕುರಿತಂತೆ ಇರುವಂತಹ ಸಂಪೂರ್ಣ ವಿವರಗಳು.

Leave a Comment

error: Content is protected !!