Jio Offer 1 ವರ್ಷಕ್ಕೆ ಅನ್ಲಿಮಿಟಿಡ್ ಆಫರ್, ಇಂದೇ ರೀಚಾರ್ಜ್ ಮಾಡಿ ಲಾಭ ಪಡೆಯಿರಿ.
Jio Offer ಇತ್ತೀಚಿನ ವರ್ಷಗಳಲ್ಲಿ ಭಾರತದ ಟೆಲಿಕಾಂ ಕ್ಷೇತ್ರದಲ್ಲಿ ಅಗ್ರಸ್ಥಾನವನ್ನು ಪಡೆದುಕೊಂಡಿರುವ ಸಂಸ್ಥೆ ಎಂದರೆ ಮುಕೇಶ್ ಅಂಬಾನಿ ಅವರ ರಿಲಯನ್ಸ್(Reliance) ಸಂಸ್ಥೆಯ ಒಡೆತನದಲ್ಲಿರುವ ಜೀಯೋ ಸಂಸ್ಥೆಯೆನ್ನಬಹುದಾಗಿದೆ. ಜಿಯೋ ಸಂಸ್ಥೆ ನಿಮಗೆಲ್ಲರಿಗೂ ತಿಳಿದಿರುವ ಹಾಗೆ ತನ್ನ ಗ್ರಾಹಕರಿಗೆ ಹೊಚ್ಚ ಹೊಸ ಯೋಜನೆಗಳನ್ನು ಸಮಯಕ್ಕೆ ಅನುಸಾರವಾಗಿ ಬಿಡುಗಡೆ ಮಾಡುತ್ತಾರೆ. ಈ ಬಾರಿ ಜೀಯೋ ಸಂಸ್ಥೆ 895 ರೂಪಾಯಿಗಳ ರಿಚಾರ್ಜ್ ಪ್ಲಾನ್ ಅನ್ನು ಪರಿಚಯಿಸಿದೆ. ಹಾಗಿದ್ದರೆ ಈ ರಿಚಾರ್ಜ್ ಪ್ಲಾನ್ ನಿಂದ ಜಿಯೋ ಗ್ರಾಹಕರು ಪಡೆದುಕೊಳ್ಳಬಹುದಾದ ಲಾಭಗಳೇನು ಎಂಬುದನ್ನು ಸಂಪೂರ್ಣ ವಿವರವಾಗಿ ತಿಳಿಯೋಣ ಬನ್ನಿ.
ಅನಿಯಮಿತ ಫೋನ್ ಕರೆಗಳು ಹಾಗೂ 28 ದಿನಗಳ ವ್ಯಾಲಿಡಿಟಿಯೊಂದಿಗೆ 12 ಯೋಜನೆಗಳನ್ನು ಈ ರಿಚಾರ್ಜ್ ಪ್ಲಾನ್ ನಿಮಗೆ ನೀಡುತ್ತದೆ. ಇದರ ಪ್ರಕಾರ 336 ದಿನಗಳ ಮಾನ್ಯತೆಯೊಂದಿಗೆ ಈ ಯೋಜನೆ ನಿಮಗೆ ಸಿಗುತ್ತದೆ. ಈ ಸಮಯದಲ್ಲಿ ನಿಮಗೆ ಉಚಿತ ಕರೆಯನ್ನು ಮಾಡುವ ಸೌಲಭ್ಯ ದೊರಕುತ್ತದೆ. ಆದರೆ ಇಂಟರ್ನೆಟ್ ಡೇಟಾ ಮಾತ್ರ ಕೇವಲ 28 ದಿನಗಳವರೆಗೆ ನಿಮಗೆ ಲಭ್ಯವಾಗುತ್ತದೆ. ಪ್ರತಿನಿತ್ಯ ಎರಡು ಜಿಬಿ ಹೈ ಸ್ಪೀಡ್ ಇಂಟರ್ನೆಟ್(Internet) ನಿಮಗೆ ದೊರೆಯುತ್ತದೆ.

ಈ ರಿಚಾರ್ಜ್ ಯೋಜನೆಯಲಿ ನಿಮಗೆ 28 ದಿನಗಳ ವರೆಗೆ ದೈನಂದಿನ ಐವತ್ತು ಉಚಿತ ಎಸ್ಎಂಎಸ್ ಗಳನ್ನು ಮಾಡುವಂತಹ ಸೌಲಭ್ಯವನ್ನು ನೀಡಲಾಗುತ್ತದೆ. ಇನ್ನು ಪ್ರಮುಖವಾಗಿ ಇದೊಂದು ಆಕರ್ಷಕ ಯೋಜನೆಯಾಗಿದ್ದು ಕೇವಲ ಜಿಯೋ ಫೋನ್ ಬಳಕಿದಾರರು ಮಾತ್ರವೇ ಇದನ್ನು ಪಡೆದುಕೊಳ್ಳಬಹುದಾಗಿದೆ ಎಂಬುದಾಗಿ ವಿಶೇಷ ಸೂಚನೆಯೊಂದು ಹೊರಬಂದಿದೆ. ಬೇರೆ ಯಾವುದೇ ಕಂಪನಿಯ ಸ್ಮಾರ್ಟ್ ಫೋನ್ ಅನ್ನು ಹೊಂದಿದ್ದರೆ ಈ ರಿಚಾರ್ಜ್ ಪ್ಲಾನ್ ಕೆಲಸ ಮಾಡುವುದಿಲ್ಲ ಎಂಬುದಾಗಿ ಅಧಿಕೃತವಾಗಿ ತಿಳಿಸಲಾಗಿದೆ. ಹೀಗಾಗಿ ರಿಚಾರ್ಜ್ ಮಾಡುವ ಮುನ್ನ ನಿಮ್ಮದು ಜಿಯೋ ಸ್ಮಾರ್ಟ್ ಫೋನ್(Smartphone) ಹೌದೋ ಇಲ್ಲವೋ ಎಂಬುದನ್ನು ಪರೀಕ್ಷಿಸಬೇಕು.
186 ರೂಪಾಯಿಯ ರಿಚಾರ್ಜ್ ಪ್ಲಾನ್ ಕೂಡ ಜಿಯೋ ಪರಿಚಯಿಸಿದ್ದು 28 ದಿನಗಳವರೆಗೆ ಪ್ರತಿದಿನ ಒಂದು ಜಿಬಿ ಉಚಿತ ಇಂಟರ್ನೆಟ್ ಡೇಟ ಹಾಗೂ ಆನಿಯಮಿತ ಫೋನ್(Unlimited) ಕರೆಗಳು ಸಿಗಲಿವೆ. ಇದನ್ನು ನೀವು ಯಾವುದೇ ಸ್ಮಾರ್ಟ್ ಫೋನ್ ಗಳಲ್ಲಿ ಕೂಡ ಅಳವಡಿಸಿಕೊಳ್ಳಬಹುದಾಗಿದ್ದು, ಜಿಯೋ ಟಿವಿ ಹಾಗೂ ಜಿಯೋ ಸಿನಿಮಾಗಳಂತಹ ಅಪ್ಲಿಕೇಶನ್ಗಳಿಗೆ ಉಚಿತ ಚಂದದಾರಿಕೆ ಸಿಗಲಿದೆ. ಇವೆರಡೂ ಯೋಜನೆಗಳಲ್ಲಿ ಯಾವ ಯೋಜನೆ ಅತ್ಯಂತ ಪ್ರಯೋಜನಕಾರಿಯಾಗಿದೆ ಎಂಬುದನ್ನು ಕಾಮೆಂಟ್ ಮಾಡುವ ಮೂಲಕ ನಮ್ಮೊಂದಿಗೆ ಹಂಚಿಕೊಳ್ಳಿ.