ಸಾಲದ ಸುಳಿಯಲ್ಲಿ ಬಿದ್ದು ಜೀವನವೇ ಮುಗಿತು ಎಂದುಕೊಂಡು ಮನೆಯನ್ನು ಮಾರಲು ಹೊರಟ ವ್ಯಕ್ತಿಗೆ ಸಿಕ್ಕಿತು ನೋಡಿ ಒಂದು ಕೋಟಿ ರೂಪಾಯಿ

ಹಣೆಬರಹ ಎನ್ನುವುದು ಬ್ರಹ್ಮನ ಬರಹ.ಅದನ್ನು ಅಂದಾಜು ಅಥವಾ ಊಹೆ ಮಾಡುವುದಕ್ಕೆ ಯಾರಿಂದಲೂ ಕೂಡ ಸಾಧ್ಯವಿಲ್ಲ. ನಮ್ಮ ಹಣೆಬರಹವನ್ನು ಬದಲಾಯಿಸೋಕೆ ನಮ್ಮ ಕೈಯಿಂದ ಕೂಡ ಸಾಧ್ಯವಿಲ್ಲ. ಬ್ರಹ್ಮ ನಮ್ಮ ಹಣೆಯಲ್ಲಿ ಬರೆದಿಟ್ಟಿರುವ ಒಂದೇ ಒಂದು ಅಕ್ಷರ ನಮ್ಮ ಜೀವನದ ತಿರುವನ್ನೇ ಬದಲಾಯಿಸಬಹುದು. ಇಂದು ಬೀದಿಪಾಲಾಗಿದ್ದ ಅವನು ನಾಳೆ ಶ್ರೀಮಂತನಾಗಬಹುದು ಇದೆಲ್ಲದಕ್ಕೂ ನಮಗೆ ಅದೃಷ್ಟ ಇರಬೇಕು ಹಾಗೆ ಹಣೆಬರಹ ಚೆನ್ನಾಗಿರಬೇಕು.

ಕೇರಳ ರಾಜ್ಯದ ಪೇಂಟಿಂಗ್ ಕೆಲಸ ಮಾಡುವ ಪೇಂಟರ್ ಸಾಲದ ಸುಳಿಗೆ ಬಿದ್ದು ಇನ್ನೇನು ಜೀವನವೇ ಸಾಕು ಎಂದು ಮನೆಯನ್ನು ಮಾರಿ ತನ್ನ ಜೀವನವನ್ನೇ ಅಂತ್ಯ ಮಾಡಿಕೊಳ್ಳೋಕೆ ಯೋಚನೆ ಮಾಡಿದ್ದ ಅಂಥ ಸಮಯದಲ್ಲಿ ಈತನ ಜೀವನ ಆಶ್ಚರ್ಯಕರ ತಿರುವು ಪಡೆದುಕೊಂಡಿದೆ. ಎರಡೇ 2 ಗಂಟೆಯಲ್ಲಿ ಈತನಿಗೆ ಮುಂದು ಕೋಟಿ ರುಪಾಯಿಗಳು ಸಿಕ್ಕಿದೆ. ಇದು ಯಾವುದೋ ಕಟ್ಟುಕತೆಯಲ್ಲ ಕೇರಳದಲ್ಲಿ ನಡೆದಿರುವ ನೈಜ ಕಥೆ.

ಸುಮಾರು 8ತಿಂಗಳ ಹಿಂದೆ ಪಾವೂರ್‌ನ ಮೊಹಮ್ಮದ್ ಬಾವ (50) ಅವರು ಮಂಜೇಶ್ವರದಲ್ಲಿ ಹೊಸದಾಗಿ ಮನೆಯೊಂದನ್ನು ನಿರ್ಮಿಸಿದ್ದರು. ಪತ್ನಿ ಅಮೀನಾ (45) ಮತ್ತು ಮೊಹಮ್ಮದ್ ಇಬ್ಬರೂ ಸೇರಿ ಅವರು ತಮ್ಮ ಸೇವಿಂಗ್ಸ್ ಹಣವನ್ನೆಲ್ಲ ಒಟ್ಟುಗೂಡಿಸಿ 2,000 ಚದರ ಅಡಿಯ ಮನೆ ಕಟ್ಟಿದ್ದರು. ಬರುಬರುತ್ತಾ ಮೊದಲ ಮಗಳ ಮದುವೆ ಮತ್ತು ಎರಡನೇ ಮಗಳ ವ ವಿದ್ಯಾಭ್ಯಾಸದ ಖರ್ಚು ಹಾಗೆ ಮನೆಯ ಸಾಲ ಇವೆಲ್ಲವನ್ನೂ ನಿಭಾಯಿಸಲಾಗದೆ ಮೊಹಮ್ಮದ್ ಸಂಕಷ್ಟಕ್ಕೆ ಸಿಲುಕಿದ್ದ.

ಯಾಕಾದರೂ ಮನೆ ಕಟ್ಟಿಸಿದ್ದು ಇಂದು ದಿನವಿಡೀ ಕೊರಗುತ್ತಿದ್ದ ಕೊನೆಗೆ ತಾನು ಕಷ್ಟಪಟ್ಟು ಕಟ್ಟಿದ ಮನೆಯನ್ನು ಮಾರಿ ಬಾಡಿಗೆ ಮನೆಗೆ ಹೋಗೋಕೆ ನಿರ್ಧಾರ ಮಾಡಿದ್ದ. ಮನೆಯನ್ನು ಮಾರಾಟಕ್ಕೆ ಹರಾಜಾಗಿದ್ದ ಹಾಗೆ ಇವನು ಮನೆಯನ್ನು ಕೊಳ್ಳಲು ಗ್ರಾಹಕರು ಕೂಡ ಸಿಕ್ಕಿದ್ದರು ಸುಮಾರು ನಲವತ್ತು ಲಕ್ಷ ರೂಪಾಯಿಗಳನ್ನು ಕೊಡಲು ಒಪ್ಪಿದ್ದರು. ಇನ್ನೇನು ಪಾರ್ಟಿ ಈತನಿಗೆ ಹಣ ಕೊಡಬೇಕು ಎನ್ನುವಷ್ಟರಲ್ಲಿ ಈತನಿಗೆ 1ಕೋಟಿ ರೂಪಾಯಿಯ ಲಾಟರಿ ಸಿಕ್ಕಿದೆ.

ಹೌದು ಗೆಳೆಯರೇ ಕೇರಳ ರಾಜ್ಯದಲ್ಲಿ ನಿಮಗೆಲ್ಲಾ ಗೊತ್ತಿರುವ ಹಾಗೆ ಲಾಟರಿ ಟಿಕೇಟ್ ಗಳನ್ನು ಖರೀದಿ ಮಾಡುವುದು ಕಾನೂನಿಗೆ ಬದ್ಧವಾಗಿದೆ ಕೇರಳದ ಜನರಿಗೆ ಲಾಟರಿ ಟಿಕೇಟ್ ಖರೀದಿ ಮಾಡೋದು ಹವ್ಯಾಸವಾಗಿದೆ. ಕೇರಳ ಸರ್ಕಾರ ನಡೆಸುವ ಫಿಫ್ಟಿ ಫಿಫ್ಟಿ ಲಾಟರಿಯ ನಾಲ್ಕು ಟಿಕೆಟ್ ಖರೀದಿಸಿದ್ದ ಬಾವ ಅವರಿಗೆ ಒಂದು ಕೋಟಿ ರೂಪಾಯಿ ಜಾಕ್ ಪಾಟ್ ಹೊಡೆದಿದೆ. ಒಂದು ಕೋಟಿ ರೂಪಾಯಿಗಳ ಬಹುಮಾನವನ್ನು ಗೆದ್ದಿರುವ ಮೊಹಮ್ಮದ್ ಗೆ ಸಂಪೂರ್ಣ ಹಣ ಸಿಕ್ಕಿಲ್ಲ.

ಲಾಟರಿ ಟಿಕೆಟ್ ಗಳ ಬಹುಮಾನ ಗಳಿಗೆ ಆದಾಯ ತೆರಿಗೆ ತುಂಬಾನೇ ಜಾಸ್ತಿ ಇರುತ್ತೆ. ಶೇಕಡಾ ಮೂವತ್ತರಿಂದ ನಲವತ್ತರಷ್ಟು ಹಣವನ್ನು ಸರ್ಕಾರಕ್ಕೆ ನೀಡಬೇಕಾಗುತ್ತೆ. ಆದ್ದರಿಂದ ಮೊಹಮ್ಮದ್ ಗೆ 1ಕೋಟಿ ರುಪಾಯಿಗಳ ಲಾಟರಿ ಬಹುಮಾನ ತಿಕ್ಕಿದ್ದರು ಕೂಡ ಈತನ ಕೈಗೆ ಸಿಕ್ಕಿರುವ ಹಣ ಕೇವಲ ಅರುವತ್ತು ಲಕ್ಷ ರುಪಾಯಿಗಳು. ಆದರೂ ಕೂಡ ಮೊಹಮ್ಮದ್ ಗೆ ತನ್ನ ಸಾಲವನ್ನೆಲ್ಲ ತೀರಿಸಿದ ಮೇಲೆ ಇಪ್ಪತ್ತು ಲಕ್ಷ ರುಪಾಯಿಗಳು ಇವನ ಬಳಿ ಉಳಿದಿವೆ. ಇದಕ್ಕೇ ಹೇಳೋದು ಗೆಳೆಯರೆ ನಮ್ಮ ಜೀವನದಲ್ಲಿ ನಾವು ಎಲ್ಲವೂ ಮುಗಿಯಿತು ಎಂದುಕೊಂಡಿದ್ದರೇ ಮೆಲಿರೋ ದೇವರು ಬೇರೇನೇ ಪ್ಲಾನ್ ಮಾಡಿರುತ್ತಾನೆ. ಆದ್ದರಿಂದ ನಾವು ತಾಳ್ಮೆಯಿಂದ ಕಾಯಬೇಕು ಅಷ್ಟೆ

Leave a Comment

error: Content is protected !!