ತೀರಿಕೊಂಡು ಒಂದು ವರ್ಷ ಕಳೆದ ಮೇಲೆ ಕೇರಳದ ಯುವ ವೈದ್ಯೆ ಹೆಸರಿನಲ್ಲಿ ಬಂತು ಫೇಸ್ ಬುಕ್ ಫ್ರೆಂಡ್​ ರಿಕ್ವೆಸ್ಟ್. ಶಾಕ್ ಆದ ಸಂಬಂಧಿಕರು

ಈಗೀನ ಕಾಲದಲ್ಲಿಯೂ ಗಂಡನ ಕಿರುಕುಳ ಸಹಿಸಿಕೊಳಲಾಗದೇ ಆ’ತ್ಮಹ’ತ್ಯೆ ಮಾಡಿಕೊಳ್ಳುವ ಹುಡುಗಿಯರ ಸಂಖ್ಯೆಯೇನೂ ಕಡಿಮೆಯಾಗಿಲ್ಲ. ಆಶ್ಚರ್ಯ ಅಂದ್ರೆ ಇಲ್ಲಿ ಯರೂ ಅನಾಗರಿಗರೂ, ಅವಿದ್ಯಾವಂತರೂ ಅಲ್ಲ. ಎಲ್ಲಾ ಗೊತ್ತಿದ್ದು ಜೀವನ ನರಕ ಮಾಡಿಕೊಳ್ಳುತ್ತಾರೆ. ಕೇರಳದ ವಿಸ್ಮಯಾ ಆ’ತ್ಮಹ’ತ್ಯೆ ಪ್ರಕರಣ ನಿಮಗೆಲ್ಲಾ ನೆನಪಿರಬಹುದು. ಇದೀಗ ಆ ಕೇಸ್ ನಲ್ಲೊಂದು ಇಂಟರೆಸ್ಟಿಂಗ್ ಬೆಳವಣಿಗೆಯಾಗಿದೆ.

ಸಾಮಾನ್ಯವಾಗಿ ಬೇರೆ ರಾಜ್ಯಗಳಿಗೆ ಹೋಲಿಸಿದರೆ, ಕೇರಳದಲ್ಲಿ ಅದರಲ್ಲೂ ಮಹಿಳೆಯರು ಹೆಚ್ಚು ವಿದ್ಯಾವಂತರಾಗಿರುತ್ತಾರೆ. 2021ರಲ್ಲಿ ಪ್ರಾಣ ಕಳೆದುಕೊಂಡ ವಿಸ್ಮಯ ಕೂಡ ಕೇರಳದವಳೇ. ಜೊತೆಗೆ ವೃತ್ತಿಯಲ್ಲಿ ವೈದ್ಯೆ ಕೂಡ. ಇದೀಗ ವಿಸ್ಮಯಾ ವಿಜಿತ್ ಹೆಸರಿನಲ್ಲಿ ಫೆಸ್ಬುಕ್ ಖಾತೆಯೊಂದು ತೆರೆಯಲಾಗಿದ್ದು ಈ ಖಾತೆಯಲ್ಲಿ ಈಗಾಗಲೇ 800 ಜನ ಸ್ನೇಹಿತರೂ ಇದ್ಡಾರೆ. ವಿಜಿತ್ ವಿಸ್ಮಯಾ ಅಣ್ಣ. ಆದರೆ ಈ ಖಾತೆಯಲ್ಲಿ ವಿಜಿತ್ ಆಗಲಿ, ಅವರ ಪತ್ನಿ ರೇವತಿಯಾಗಲಿ ಇಲ್ಲ. ಹಾಗಾಗಿ ಈ ಖಾತೆಯಿಂದ ರಿಕ್ವೆಸ್ಟ್ ಬಂದ ಕೂಡಲೇ ವಿಸ್ಮಯಾ ಸಂಬಂಧಿಕರು ಭಯಗೊಂಡು ಪೋಲೀಸ್ ಠಾಣೆಗೆ ಹೋಗಿ ವಿಷಯ ತಿಳಿಸಿದ್ದಾರೆ. ಇನ್ನು ವಿಸ್ಮಯಾ ಹೇಗೆ ಸ’ತ್ತಳು, ಯಾಕಾಗಿ ಆ’ತ್ಮ’ಹ’ತ್ಯೆ ಮಾಡಿಕೊಂಡಳು? ಇದರ ಹಿನ್ನೆಲೆಯನ್ನೊಮ್ಮೆ ನೋಡೋಣ.

ವಿಸ್ಮಯಾ ವೃತ್ತಿಯಲ್ಲಿ ವೈದ್ಯೆ. ಇವರು 2020ರಲ್ಲಿ ಕಿರಣ್ ಎನ್ನುವ ವ್ಯಕ್ತಿಯನ್ನು ಮದುವೆ ಯಾಗಿದ್ರು. ಮಗಳ ಮದುವೆಯನ್ನು ಅದ್ದೂರಿಯಾಗಿಯೇ ನೆರವೇರಿಸಿದ್ದರು ವಿಸ್ಮಯಾ ಅವರ ತಂದೆ ತಾಯಿ. ಮದುವೆಯಾಗಿ ಕೇರಳದ ಕೊಲ್ಲಂ ನಲ್ಲಿ ನವ ದಂಪತಿಗಳು ವಾಸಿಸುತ್ತಿದ್ದರು. ದಿನ ಕಳೆದ ಹಾಗೆ ಪತಿಯ ಬಣ್ಣ ವಿಸ್ಮಯಾಗೆ ತಿಳಿಯುತ್ತಾ ಹೋಯಿತು. ಆತ ಒಬ್ಬ ಧನ ಪಿಶಾಚಿ ಅನ್ನುವುದು ಅರಿವಿಗೆ ಬಂತು. ಕಿರಣ್ ಕೂಡ ಉತ್ತಮ ಕೆಲಸದಲ್ಲಿದ್ದವರೇ. ಆರ್ ಟಿ ಓ ನಲ್ಲಿ ಕೆಲಸ ಮಾಡುತ್ತಿದದ್ರು ಕಿರಣ್. ಆದರೆ ಅವರ ಅತಿಯಾದ ಹಣದ ವ್ಯಾಮೋಹ ಹೆಂಡತಿಗೆ ಇನ್ನಿಲ್ಲದಷ್ಟು ಕಿರುಕುಳವನ್ನು ಕೊಡುವಂತೆ ಮಾಡಿತ್ತು.

ಇದರಿಂದ ನೊಂದ ವಿಸ್ಮಯಾ ಜೂನ್ 21, 2021ರಲ್ಲಿ ಮನೆಯಲ್ಲಿ ನೇಣು ಬಿಗಿದುಕೊಂಡು ಆ’ತ್ಮಹ’ತ್ಯೆ ಮಾಡಿಕೊಂಡಿದ್ದಾರೆ. ತಾನು ಸಾಯುವುದಕ್ಕೂ ಮೊದಲು ತನ್ನ ಹತ್ತಿರದವರಿಗೆ ಮೆಸೇಜ್ ಮಾಡಿ ಪತಿ ಕೊಡುವ ಕಿರುಕುಳದ ಬಗ್ಗೆ ಹೇಳಿದ್ದರು. ಗಂಡ ಕೊಟ್ಟ ದೈಹಿಕ ಹಿಂಸೆಯ ಬಗ್ಗೆ ಹೇಳಿ ಪೋಟೋಗಳನ್ನೂ ಹಂಚಿಕೊಂಡಿದ್ದರು. ಬಹುಶಃ ಇದೇ ತನ್ನ ಕೊನೆಯ ಮೆಸೇಜ್ ಆಗಿರಬಹುದು ಎಂದೂ ಹೇಳಿದ್ದರು. ಇದೆಲ್ಲಾ ಸಾಕ್ಷಿಯ ಅನ್ವಯ ವಿಸ್ಮಯಾ ಅವರ ಪತಿ ಕಿರಣ್ ಅವರನ್ನು ಬಂಧಿಸಿ ಕತ್ತಲಮನೆಗೆ ತಳ್ಳಲಾಗಿತ್ತು. ಅವರ ಉದ್ಯೋಗವೂ ಹೋಗಿತ್ತು.

ಇದೀಗ ಜಾಮೀನಿನ ಮೇಲೆ ಕಿರಣ್ ಆಚೆ ಬಂದಿದ್ದಾರೆ. ಇದೇ ತಿಂಗಳ 23ರಂದು ವಿಸ್ಮಯಾ ಕೇಸ್ ಗೆ ತೆರೆ ಎಳೆಯಲಿದೆ ನ್ಯಾಯಾಲಯ. ಸದ್ಯ ಕೇರಳದಲ್ಲಿ ಭಯವನ್ನೇ ಸೃಷ್ಟಿಸಿದ್ದ ಈ ಆ’ತ್ಮಹ’ತ್ಯೆ ಪ್ರಕರಣದ ತೀರ್ಪನ್ನು ಕೇಳಲು ಕೇರಳ ಜನತೆ ಕಾತುರರಾಗಿದ್ದಾರೆ. ವಿಸ್ನಯಾ ಅವರಿಗೆ ನ್ಯಾಯ ಸಿಗಲಿ ಅಂತ ಈಗಲೂ ಪ್ರಾರ್ಥಿಸುತ್ತಾರೆ.ಇನ್ನು ವಿಸ್ಮಯಾ ಹೆಸರಿನಲ್ಲಿ ಫೇಕ್ ಅಕೌಂಟ್ ನ್ನು ತೆರೆದವರು ಯಾರು ಎನ್ನುವುದು ಇನ್ನೂ ಪತ್ತೆಯಾಘಿಲ್ಲ. ಇದರ ಹಿಂದಿರುವ ಉದ್ದೇಶವೂ ಗೊತ್ತಿಲ್ಲ. ಈ ಸಂಬಂಧ ಪೋಲಿಸ್ ತನಿಖೆ ಮತ್ತೆ ಮುಂದುವರೆದಿದೆ.

Leave a Comment

error: Content is protected !!